ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿದ ಸಂಸದ ಯದುವೀರ್ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ, ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಏನೂ ಮಾತಾಡ್ತಾರಾ ಅದೇ ನಮ್ಮ ಮಾತು. ಅದೇ ನಮ್ಮ ನಿಲುವು. ನಮ್ಮ ಪಕ್ಷದ ನಿಲುವನ್ನೇ ನಾನು ಮಾತಾಡಿದ್ದೇನೆ. ಮೈಸೂರಿಗರಿಗೆ ಒಂದು ಪ್ರಶ್ನೆ ಕೇಳ್ತೀನಿ. ಭುವನೇಶ್ವರಿ ಬಗ್ಗೆ ಅವಮಾನಕಾರಿಯಾಗಿ ಮಾತಾಡಿದ ಬಾನು ಮುಷ್ತಾಕ್ ದಸರಾ ಉದ್ಘಾಟಿಸಬೇಕಾ? ಜನರೇ ಹೇಳಲಿ ಎಂದರು.
ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ ಬಗ್ಗೆ ಮಾತನಾಡಿ, ನಮಸ್ತೆ ಸದಾ ವತ್ಸಲೆ ಅರ್ಥ ಮಾತೃಭೂಮಿಗೆ ವಂದಿಸು ಅಂತಾ. ಈ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್‌ಗೆ ಕ್ಷಮೆ ಕೇಳುವ ಸ್ಥಿತಿ ಬಂದಿದೆ ಎಂದರೆ ಕಾಂಗ್ರೆಸ್‌ಗೆ ಮಾತೃಭೂಮಿ ಮೇಲೆ ಎಷ್ಟು ಗೌರವವಿದೆ ನೋಡಿ ಎಂದು ಕುಟುಕಿದರು.















