ಮನೆ ರಾಜ್ಯ ದಶಪಥ  ಹೆದ್ದಾರಿ ಕಾಮಗಾರಿ  ಪರಿಶೀಲಿಸಿದ  ಪ್ರತಾಪ್ ಸಿಂಹ

ದಶಪಥ  ಹೆದ್ದಾರಿ ಕಾಮಗಾರಿ  ಪರಿಶೀಲಿಸಿದ  ಪ್ರತಾಪ್ ಸಿಂಹ

0

Join Our Whatsapp Group

ಮದ್ದೂರು:  ಮೈಸೂರು, ಬೆಂಗಳೂರು ದಶಪಥ  ಹೆದ್ದಾರಿ ಕಾಮಗಾರಿಯನ್ನು ಮೈಸೂರು ಸಂಸದ ಪ್ರತಾಪಸಿಂಹ ಅಧಿಕಾರಿಗಳೊಟ್ಟಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ  ಮಾಹಿತಿ ಪಡೆದರು.

ತಾಲೂಕಿನ  ಕೆ. ಕೋಡಿಹಳ್ಳಿ ಗ್ರಾಮದಿಂದ  ಶಿಂಷಾ ನದಿ ಸೇತುವೆ ವರೆವಿಗೂ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ ಹೆದ್ದಾರಿಯಲ್ಲಿ ವಾಹನಗಳ  ಸಂಚಾರ  ಆರಂಭಗೊಂಡಿದ್ದು ಇದುವರೆವಿಗೂ  ಕಾಮಗಾರಿ  ಪೂರ್ಣಗೊಳಿಸದ  ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕೆಲ ಸರ್ವಿಸ್ ರಸ್ತೆಗಳಲ್ಲಿ ವಿದ್ಯುತ್  ಸಂಪರ್ಕ ಕಲ್ಪಿಸದೆ  ಈ  ಭಾಗದ  ರೈತರು ಕತ್ತಲಿನಲ್ಲೇ ಗ್ರಾಮಗಳಿಗೆ ಸಂಚರಿಸಬೇಕಾದ ಅನಿವಾರ್ಯತೆ  ಉಂಟಾಗಿದ್ದು ಜತೆಗೆ  ರಾತ್ರಿ ವೇಳೆ   ದರೋಡೆ  ಪ್ರಕರಣಗಳು ಜರುಗುತ್ತಿದ್ದು  ಕೂಡಲೇ  ನಿಡಘಟ್ಟದಿಂದ  ಶಿಂಷಾ ನದಿ  ಸೇತುವೆ ವರೆವಿಗೆ  ವಿದ್ಯುತ್  ಸಂಪರ್ಕ ಕಲ್ಪಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳು  ಸೂಚಿಸಿದರು.

ಚರಂಡಿ, ವಿದ್ಯುತ್, ಸ್ಲಾಬ್  ಇನ್ನಿತರೆ  ಕಾಮಗಾರಿಗಳು  ಅಂಡರ್ ಪಾಸ್ ರಸ್ತೆಯಲ್ಲಿ ಅಪೂರ್ಣಗೊಂಡಿರುವುದರಿಂದ ವಾಹನ ಸಂಚರಿಸಲು ತೊಡಕ್ಕುಂಟಾಗಿದ್ದು ಕೂಡಲೇ  ಅಗತ್ಯ  ಮೂಲ ಸೌಲಭ್ಯ  ಕಲ್ಪಿಸುವಂತೆ  ಜತೆಗೆ  ಕಾಮಗಾರಿ  ಪೂರ್ಣಗೊಳಿಸಿ  ಸೇತುವೆ  ಕಾಮಗಾರಿಯನ್ನು ಗುಣಮಟ್ಟದಿಂದ  ಕಾಯ್ದು ಕೊಳ್ಳಬೇಕೆಂದರು.

ಬಳಿಕ ಪತ್ರಿಕೆಯೊಂದಿಗೆ  ಮಾತನಾಡಿದ  ಸಂಸದ  ಪ್ರತಾಪಸಿಂಹ ಹೆದ್ದಾರಿ ಕಾಮಗಾರಿ  ಉದ್ಘಾಟನೆಗೊಂಡು ಹಲವು ತಿಂಗಳುಗಳು ಕಳೆದಿದ್ದು ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ವಾಹನ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿ ತನದಿಂದ ಅಪಘಾತ ಪ್ರಕರಣಗಳು  ಹೆಚ್ಚಾಗುತ್ತಿದ್ದುಈ ಸಂಬಂಧ ತಜ್ಞರೊಂದಿಗೆ ಚರ್ಚಿಸಿ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸಲು ಹಲವು ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು ಈ ಸಂಬಂಧ  ಈಗಾಗಲೇ ಪೊಲೀಸ್ ಮಹಾನಿರ್ದೇಶಕರು  ಹೆದ್ದಾರಿಯನ್ನು  ಪರಿಶೀಲನೆ ನಡೆಸಿ  ಸರ್ಕಾರಕ್ಕೆ  ವರದಿ  ಸಲ್ಲಿಸಿರುವುದಾಗಿ ಹೇಳಿದರು.

ಸರ್ವಿಸ್ ರಸ್ತೆಯ ಮಾರ್ಗದಲ್ಲಿ ಚರಂಡಿ,ಅಪೂರ್ಣಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ  ಸಾಕಷ್ಟು ದೂರುಗಳು ಬಂದಿದ್ದು ಕೂಡಲೇ  ಕಾಮಗಾರಿ ತ್ವರಿತಗತಿಯಲ್ಲಿ ಪೂರೈಸಿ ಸಂಚಾರಕ್ಕೆ  ಅನುಕೂಲ  ಕಲ್ಪಿಸಬೇಕೆಂದು ಹೆದ್ದಾರಿ ಪ್ರಾಧಿಕಾರದ  ಅಧಿಕಾರಿಗಳಿಗೆ  ಸೂಚಿಸಿದ್ದು ಅಲ್ಪಾವಧಿಯಲ್ಲಿ  ಹೆದ್ದಾರಿ  ಕಾಮಗಾರಿ  ಪೂರ್ಣಗೊಳ್ಳಲಿರುವುದಾಗಿ  ತಿಳಿಸಿದರು.

ಈ ವೇಳೆ ಹೆದ್ದಾರಿ ಪ್ರಾಧೀಕಾರದ ಅಧಿಕಾರಿ ದೈವಿಕ್ ಹಾಗೂ ಕೆ. ಕೋಡಿಹಳ್ಳಿ ಗ್ರಾಮಸ್ಥರು ಹಾಜರಿದ್ದರು.


ಹಿಂದಿನ ಲೇಖನಪ್ಲಾಸ್ಟಿಕ್  ನಿಷೇಧದ  ಬಗ್ಗೆ ಸಾರ್ವಜನಿಕರಿಗೆ ಜಾಗೃತಿ
ಮುಂದಿನ ಲೇಖನಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಎಂ ಬಿ ಪಾಟೀಲ