ಸ್ತ್ರೀಯರು ಪ್ರಥಮ ಋತುಮತಿಯಾದ ದಿವಸದಲ್ಲಿ ಹಿಂದೆ ಹೇಳಿದ ಪ್ರಕಾರ ಯಾವವು ಶುಭ ಆದವುಗಳು? ಯಾವುದು ಆಶುಭ ಆದವುಗಳು? ಎಂಬುದನ್ನು ನಿರ್ವಹಿಸಿದ ನಂತರ ವಾರ,ತಿಥಿ ನಕ್ಷತ್ರ, ಯೋಗ, ಕಾರಣ, ಲಗ್ನ, ಸ್ಥಳ,,ವಸ್ತ್ರ ಇತ್ಯಾದಿಗಳನ್ನು ವಿಚಾರಿಸಿ, ಇವುಗಳ ಪ್ರಕಾರ ಯಾವುಗಳು ದೋಷವೆಂದು ತಿಳಿದು ಬಂದ ನಂತರ, ಅವುಗಳ ದೋಷಗಳು ಹೋಗಿ,ಮುಂದೆ ಭವಿಷ್ಯತ್ತಿನಲ್ಲಿ ಸುಖ ದೊರೆಯುವದಕ್ಕಾಗಿ ಈ ವಾರಾದಿ ನಕ್ಷತ್ರಾದಿಗಳಿಗೆ ಅಧಿಪತಿಯಾದ ದೇವತೆಗಳ ಬೆಳ್ಳಿಯ ಮೂರ್ತಿಗಳನ್ನು ಮಾಡಿಸಿ ಅಥವಾ ಬೆಳ್ಳಿಯ ತಗಡಿನಲ್ಲಿ ಆ ಆಧಿಪತಿ ದೇವತೆಗಳ ಹೆಸರುಗಳನ್ನು ಬೆಳ್ಳಿಯ ತಗಡಿನಲ್ಲಿ ಬರೆಯಿಸಿ.
ಆ ಮೂರ್ತಿಯನ್ನು ಪಂಚಾಮೃತದಿಂದ ಅಭಿಷೇಕ ಮಾಡಿಸಿ ಗಂಧ ಅಕ್ಷತೆ ಬಿಲ್ವಪತ್ರೆ ಪುಷ್ವಾದಿ ಧೂಪಾದಿಗಳಿಂದ ಋತುಮತಿಯಾದ ಸ್ತ್ರೀಯಳ ಹಸ್ತದಿಂದ ಪೂಜಿಸಿ,ಹಾಲು ಬೆಲ್ಲ ಮುಂತಾದವನ್ನು ಅದಕ್ಕೆ ನೈವೇದ್ಯ ಮಾಡಿಸಿ ಮೂರ್ತಿಗೆ ನಮಸ್ಕರಿಸಿ ತೃಪ್ತಿಪಡಿಸಲು ನಂತರ ದಕ್ಷಿಣೆ ಸಹಿತ ಆ ಮೂರ್ತಿಯನ್ನು ತಮ್ಮ ಮನೆತನದ ಪೂಜ್ಯ ಗುರುಗಳಿಗೆ ಆಸ್ತ್ರಿಯಳ ಹಸ್ತದಿಂದಲೇ ದಾನ ಕೊಡಿಸಬೇಕು . ಮತ್ತು ಆ ಪೂಜ್ಯರಿಂದ ಆಶೀರ್ವಾದ ಪಡೆಯಬೇಕು.
ಇದಲ್ಲದೆ,ಇನ್ನುಳಿದ ಯೋಗ ಕರಣ, ಮಾಂಸ,ಸ್ಥಾನ ವೇಳೆ, ಕೊಟ್ಟಿರುವ ವಸ್ತ್ರ ಲಗ್ನ ಇವುಗಳಲ್ಲಿ ಯಾರಾದರೂ ದುಷ್ಟ ಫಲಗಳನ್ನು ಕೊಡಲಾತಕ್ಕವುಗಳಾಗಿದ್ದರೆ, ಆ ದುಷ್ಟ ಫಲಗಳ ನಿವಾರಣೆಗಾಗಿ ಮಣ್ಣಿನ ಒಂದು ಹೊಸ ಕುಂಭವನ್ನು ತಂದು ಅದನ್ನು ಸುಣ್ಣ ಕೆಮ್ಮಣ್ಣುಗಳಿಂದ ಅಲಂಕಾರಗೊಳಿಸಿ.ಈ ಕುಂಭಕ್ಕೆ ಒಂದು ಕೆಂಪು ಅಥವಾ ಹಳದಿ ವರ್ಣದ ವಸ್ತ್ರವನ್ನು ಏಳು ಸುತ್ತು ಸುತ್ತಿ ಗಂಧಾಕ್ಷತೆ ಧೂಪ ದೀಪಾಗಳಿಂದ ಋತುಮತಿ ಯಾವ ಸ್ತ್ರೀಯಳಿಂದಲೇ ಪೂಜೆ ಮಾಡಿಸಿದ ಆ ಬಿಂದಿಗೆಯನ್ನು ದಕ್ಷಿಣೆ ಸಹಿತ ಪೂಜ್ಯ ಗುರುಗಳಿಗೆ ದಾನ ಕೊಡಬೇಕು ಐದು ಜನ ಪೂಜ್ಯರಿಗೆ ಭೋಜನ ಮಾಡಿಸಿ ಮನೆ ಜನರೆಲ್ಲ ಆಶೀರ್ವಾದ ಪಡೆಯಬೇಕು ದೋಷವೆಲ್ಲವೂ ನಿವಾರಣೆಯಾಗುವುದು .