ಹೊಸಬರೇ ನಿರ್ಮಿಸಿರುವ ‘ಪ್ರತ್ಯರ್ಥ’ ಚಿತ್ರವು ಫೆಬ್ರುವರಿ 28 ರಂದು ರಾಜ್ಯದಾದ್ಯಂತ ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೇ ನಟ ಶ್ರೀಮುರಳಿ ಅವರು ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಉಡುಪಿಯ ಕಾರ್ಕಳದ ಅರ್ಜುನ್ ಕಾಮತ್ ನಿರ್ದೇಶನದ ಈ ಚಿತ್ರವನ್ನು ತನಿಖಾ ಥ್ರಿಲ್ಲರ್ ಎಂದು ಬಿಂಬಿಸಲಾಗಿದೆ.
ನಿರ್ದೇಶಕ ಅರ್ಜುನ್ ಮಾತನಾಡಿ, ಪ್ರತ್ಯರ್ಥವನ್ನು ಕನ್ನಡ ಸಿನಿಮಾ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಲು ರಚಿಸಲಾಗಿದೆ. ಕನ್ನಡೇತರ ಭಾಷಿಕರಿಗೂ ಇದನ್ನು ಹೆಮ್ಮೆಯಿಂದ ಶಿಫಾರಸು ಮಾಡಬಹುದು. ‘ಶೀರ್ಷಿಕೆ ಹಳೆಯದಾಗಿರಬಹುದು. ಆದರೆ, ಇದು ನಮ್ಮ ಕಥೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ಸಮಕಾಲೀನವಾಗಿದೆ. ಇದು ತನಿಖಾ ಥ್ರಿಲ್ಲರ್ ಆಗಿದ್ದು, ಪ್ರತಿಯೊಂದಕ್ಕೂ ಅರ್ಥವಿದೆ’ ಎಂದು ಹೇಳಿದರು.
‘ಇಂದಿನ ಯುವಕರ ಆದ್ಯತೆಗಳನ್ನು ಅರ್ಥಮಾಡಿಕೊಂಡು, ನನ್ನ ಸ್ನೇಹಿತ ರಾಮ್ ಮತ್ತು ನಾನು ಈ ಸ್ಕ್ರಿಪ್ಟ್ ಅನ್ನು ರೂಪಿಸಲು ಒಂದು ವರ್ಷ ಕಳೆದಿದ್ದೇವೆ’ ಎಂದರು.
ನಾಗೇಶ್ ಎಂ, ಜೈ ಆರ್ ಪ್ರಭು, ನಿತ್ಯಾನಂದ ಪೈ, ಪ್ರೇಮಕುಮಾರ್ ವಿ ಮತ್ತು ಭರತ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರವು ಎರಡು ಛಾಯೆಯ ಕಥಾಹಂದರವನ್ನು ಹೊಂದಿದೆ. ಇದರಲ್ಲಿ ರಾಮ್ ಮತ್ತು ಅಕ್ಷಯ್ ಕಾರ್ಕಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶ್ರುತಿ ಚಂದ್ರಶೇಖರ್ ನಾಯಕಿಯಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಮನ್ ತಲ್ವಾರ್, ನವೀನ್ ಡಿ ಪಡೀಲ್, ರಮೇಶ್ ಭಟ್ ಮತ್ತು ದೀಪಕ್ ರೈ ಇದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಅವರ ಸಂಗೀತ ಸಂಯೋಜನೆ ಇದ್ದು, ವಿನುತ್ ಅವರ ಛಾಯಾಗ್ರಹಣವಿದೆ.