ಮನೆ ಅಪರಾಧ ಪ್ರವೀಣ್ ಹತ್ಯೆ ಪ್ರಕರಣ: ಮೂರನೇ ಆರೋಪಿ ಪೊಲೀಸರ ವಶಕ್ಕೆ ?

ಪ್ರವೀಣ್ ಹತ್ಯೆ ಪ್ರಕರಣ: ಮೂರನೇ ಆರೋಪಿ ಪೊಲೀಸರ ವಶಕ್ಕೆ ?

0

ಸುಳ್ಯ(Sullya): ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಕನ್ ಸೆಂಟರ್ ಹೊಂದಿದ್ದ ಸದ್ದಾಂ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿಯಿದ್ದು,   ಆದರೆ ಇದನ್ನು ಪೋಲಿಸರು ಇನ್ನೂ ಖಚಿತಪಡಿಸಿಲ್ಲ.

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬೆಳ್ಳಾರೆಯ ಶಫೀಕ್‌ (27) ಮತ್ತು ಸವಣೂರಿನ ಝಾಕೀರ್‌ (29) ಬಂಧಿತರು. ಈ ಆರೋಪಿಗಳಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.

ಪ್ರವೀಣ್‌ ಅವರ ನೈಜ ಹಂತಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಶೋಧ ಮುಂದುವರಿದಿದೆ. ಹತ್ಯೆಗೆ ಸಂಬಂಧಿಸಿ 27 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಂತಕರು ಕೇರಳದವರು ಎಂಬ ಅನುಮಾನ ವ್ಯಕ್ತವಾಗಿದ್ದು, ಅವರಿಗೆ ಮಾಹಿತಿದಾರರಾಗಿ ಸ್ಥಳೀಯರು ಸಹಕರಿಸಿದ್ದರೇ ಅಥವಾ ಕೃತ್ಯದಲ್ಲಿ ಸ್ಥಳೀಯರು ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಹಿಂದಿನ ಲೇಖನರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣ ವಿಫಲ ಸಿದ್ಥರಾಮಯ್ಯ ಆಕ್ರೋಶ
ಮುಂದಿನ ಲೇಖನಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ಕಾರ್ಯದರ್ಶಿ ಕರೆ