ಮನೆ ವ್ಯಕ್ತಿತ್ವ ವಿಕಸನ ದಿನಕ್ಕೆರಡು ಬಾರಿ ಪ್ರಾರ್ಥಿಸಿ

ದಿನಕ್ಕೆರಡು ಬಾರಿ ಪ್ರಾರ್ಥಿಸಿ

0

ನೆಪೋಲಿಯನ್ ಬೋನೋಪಾರ್ಟೆ ಫ್ರಾನ್ಸ್ ದೇಶವನ್ನಾಳಿದ ದೊರೆ. ದೇವರು ಮತ್ತು ಧರ್ಮಗಳಲ್ಲಿ ಅವನಿಗೆ ಅಪಾರ ನಂಬಿಕೆ ಇತ್ತು. ಅದನ್ನು ಸಾಬೀತುಪಡಿಸುವ ಘಟನೆ ಒಂದು ಇಲ್ಲಿದೆ.

ಒಮ್ಮೆ ಹೊಸದಾಗಿ ನಿರ್ಮಿಸಲಾಗಿದ್ದ ಬಾಲಕಿಯರ ಶಾಲೆಯೊಂದರ ವೇಳಾಪಟ್ಟಿಯನ್ನು ಅವನಿಗೆ ತೋರಿಸಲಾಯಿತು. ಅದರಲ್ಲಿ ಅನೇಕ ನಿಯಮಗಳ ಪೈಕಿ ಅವನು ಈ ಕೆಳಗಿನದನ್ನು ಓದಿದನು. – “ಹುಡುಗಿಯರು ವಾರಕ್ಕೆರಡು ಬಾರಿ ಪ್ರಾರ್ಥನೆಗೆ ಹಾಜರಾಗಬೇಕು.” ತಿದ್ದುಪಡಿ ಮಾಡಿ ಶಾಲಾಧಿಕಾರಿಗಳಿಗೆ ಮರಳಿಸಿದನು. ಪರಿಷ್ಕೃತ ವೇಳಾಪಟ್ಟಿಯನ್ನು ಓದಿದ ಪ್ರಿನ್ಸಿಪಲ್ ಆದ್ದರಿಂದ ಬಹಳ ಪ್ರಭಾವಿತರಾಗಿ ನೆಪೋಲಿಯನ್ ಸಲಹೆಗಳನ್ನು ಜಾರಿಗೊಳಿಸಿದನು….

ಪ್ರಶ್ನೆಗಳು :- 1. ನೆಪೋಲಿಯನ್ ಸೂಚಿಸಿದ ತಿದ್ದುಪಡಿ ಏನು? 2. ಈ ಕಥೆಯ ಪರಿಣಾಮವೇನು ?

ಉತ್ತರಗಳು :- 1. ನೆಪೋಲಿಯನ್ ಪೆನ್ ಕೈಗೆತ್ತಿಕೊಂಡು “ವಾರಕ್ಕೆರಡು ಬಾರಿ” ಎಂಬ ಪದಗಳನ್ನು ಹೊಡೆದು ಹಾಕಿ “ದಿನಕ್ಕೆರಡು ಬಾರಿ” ಎಂದು ಅದನ್ನು ಬದಲಾಯಿಸಿದನು.

2.  ನೆಪೋಲಿಯನ್ ಪ್ರಾರ್ಥನೆಯ ಶಕ್ತಿಯ ಬಗ್ಗೆ ಅಚಲವಾದ ನಂಬಿಕೆಯಿತ್ತು. ಹೀಗಾಗಿ ಆತ ಹುಡುಗಿಯರು ಬೆಳಿಗ್ಗೆ ಮತ್ತು ಸಂಜೆ ಎರಡೂ ವೇಳೆ ಪ್ರಾರ್ಥನೆ ಮಾಡಬೇಕೆಂಬ ನಿಬಂಧನೆ ವಿಧಿಸಿದನು.

“ಬೆಳಗಿನ ಪ್ರಾರ್ಥನೆ ದೇವರ ಅನುಗ್ರಹ ಮತ್ತು ಆಶೀರ್ವಾದ ಸಂಪತ್ತಿನ ಬಾಗಿಲನ್ನು ನಮಗೆ ತೆರೆಯುವ ಕೈಕೀಲಿ ಕೈ, ಸಂಜೆಯ ಪ್ರಾರ್ಥನೆ ನಮ್ಮನ್ನು ಅವನ ಸಂರಕ್ಷಣೆ ಮತ್ತು ಸುರಕ್ಷತೆಯಲ್ಲಿ ಜೋಪಾನ ಮಾಡುವ ಕೀಲಿ ಕೈ ಆಗಿರುತ್ತದೆ.”

ಹಿಂದಿನ ಲೇಖನಬಿಜೆಪಿ ಉಳಿಸಿಕೊಳ್ಳಲು ನಮಗೆ ಗೊತ್ತಿದೆ. ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು?: ಪ್ರೀತಂ ಜೆ. ಗೌಡ ಅಸಮಾಧಾನ
ಮುಂದಿನ ಲೇಖನಲಾರಿಯಿಂದ ಗ್ರಾನೈಟ್ ಇಳಿಸುವ ವೇಳೆ ಅವಘಡ: ಇಬ್ಬರು ಕಾರ್ಮಿಕರ ಸಾವು