ಮಕ್ಕಳು 102 ಮೈನಸ್ 103°F ಜ್ವರದಿಂದ ಬಳಲುತ್ತಿದ್ದರೆ ಗಂಭೀರವಾದುದೆಂದು ತಿಳಿದು ತಕ್ಷಣ ಜಾಗರೂಕರಾಗಬೇಕು ಹುಟ್ಟಿದ ಮಗುವಿಗೆ 101°F ಜ್ವರವಿದ್ದು ಲವಲವಿಕೆಯಿಂದ ಕೂಡಿದ್ದರೂ ಜ್ವರವಿದೆ ಎಂದು ಪರಿಗಣಿಸಬೇಕು.
• ತೀವ್ರ ಜ್ವರ ಇರುವ ಮಕ್ಕಳಿಗೆ ಫ್ಲಿಟ್ಸ್ ಬರುವ ಸಾಧ್ಯತೆ ಇರುತ್ತದೆ ಆದುದರಿಂದ ಜ್ವರ ಆ ಮಟ್ಟಕ್ಕೆ ತಲುಪುವ ಮೊದಲೇ ಡಾ. ಬಳಿ ಹೋಗುವುದು ಸೂಕ್ತ.
• ಡಾಕ್ಟರನ್ನು ಸಂಪರ್ಕಿಸುವ ಮೊದಲು ಮಗುವಿನ ಉಷ್ಣತೆ ತಗ್ಗಿಸಲು ಮಾಡಬಹುದಾದ ಕ್ರಮಗಳು:
• ಮಗುವಿಗೆ ತುಡಿಸಿದ ಬಟ್ಟೆಗಳನ್ನು ಕಳಚಿ ತೇವವಾದ ಬಟ್ಟೆಯಿಂದ ಶರೀರವನ್ನು ಒರೆಸುವುದು.
• ತಣ್ಣೀರಿನಲ್ಲಿ ಅದ್ದಿದಾಪಟ್ಟೆಯನ್ನು ಸುಮಾರಾಗಿ ಹಿಂದಿ ಪ್ರತಿ 10 ನಿಮಿಷಕ್ಕೊಮ್ಮೆ ಮಗುವಿನ ನೆತ್ತಿಯ ಮತ್ತು ಹಣೆ ಮೇಲೆ ಇಡುವುದು/ಹೊದಿಸುವುದು.
• ಒದ್ದೆ ಬಟ್ಟೆಯಿಂದ ಕೈ, ಕಾಲು, ಎದೆ, ಹೊಟ್ಟೆ ಇವುಗಳನ್ನು ಒರೆಸುತ್ತಿರಬೇಕು ಇಂಥ ಸಮಯದಲ್ಲಿ ಫ್ಯಾನ್ ಹಾಕಬಹುದು.
• ಜ್ವರದಿಂದ ಫಿಟ್ಸ್ ಬಂದಾಗ ಮಗುವಿನ ಕೈಕಾಲು ಉದುರುತ್ತದೆ ಹೀಗೆ ಕೆಲವು ಸೆಕೆಂಡ್ಸ್ ಗಳ ಕಾಲ ಆಗಬಹುದು ಮಗುವಿನ ಮುಖ ನೀಲಿ ಬಣ್ಣಕ್ಕೆ ತಿರುಗಬಹುದು.
• ಫಿಟ್ಸ್ ಬಂದಾಗ ಮಗುವನ್ನು ದಿಂಬಿನ ಮೇಲೆ ತಲೆಕೆಳಗೆ ಮಾಡಿ ಮಲಗಿಸಬೇಕು ಇಲ್ಲದಿದ್ದರೆ ಬಾಯಿಯ ನೊರೆ ಶ್ವಾಸಕೋಶದೊಳಗೆ ಹೋಗುವ ಸಾಧ್ಯತೆ ಇರುತ್ತದೆ ಇದು ಅಪಾಯಕಾರಿ ಸೂಚನೆ.
• ಐದು ವರ್ಷಕ್ಕೂ ಮೇಲ್ಪಟ್ಟ ಮಗುವಿಗೆ ಪ್ರತಿ ಮೂರು ರಿಂದ ನಾಲ್ಕು ಗಂಟೆಗಳಿಗೊಮ್ಮೆ ಬಾರಿ ಪ್ಯಾರಾಸಿಟಿ ಟ್ಯಾಬ್ಲೆಟ್ ಕೊಡುತ್ತಿರಬೇಕು.
• ಐದು ವರ್ಷದೊಳಗಿನ ಮಗುವಿಗೆ ಉಷ್ಣತೆ ತಗ್ಗಿಸಲು ಪ್ಯಾರಸಿಟಮಲ್ ಸಿರಪನ್ನು 2 tspಗಳಂತೆ ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ ಕೊಡಬೇಕು.
ಇದು ಸುರಕ್ಷಿತ ಡೋಸ್ ಇನ್ನೂ ಚಿಕ್ಕ ಮಗುವಿಗೆ 1/2ಟೀ ಸ್ಪೂನ್ ಇಲ್ಲವೇ ಎಂಟರಿಂದ ಹತ್ತು ಹನಿಗಳ ಸಿರಪ್ಪನ್ನು ಕೊಡಬಹುದು.
( ಸೂಚನೆ ಈ ಔಷಧಿಗಳನ್ನು ವೈದ್ಯರ ಮೇಲ್ವಿಚಾರಣೆ ಸಲಹೆಯ ಮೇರೆಗೆ ಕೊಡಬೇಕು)
ಹೆಚ್ಚು ಜ್ವರದಿಂದ ನರಳುತ್ತಿರುವ ಮಗುವಿಗೆ ಕಾದಾರಿದ ನೀರನ್ನು ಕೊಡುತ್ತಿರಬೇಕು ಎಷ್ಟೇ ಉತ್ತಮ ಔಷಧಿಯನ್ನು ಕೊಟ್ಟರು ನೀರು ಕುಡಿಯದಿದ್ದರೆ ಶರೀರದ ಉಷ್ಣತೆ ಕಡಿಮೆಯಾಗುವುದಿಲ್ಲ ಆದ್ದರಿಂದ ನೀರು ಕುಡಿಸುವುದು ಅತ್ಯವಶ್ಯಕ.
ತಾಯಿಯ ಹಾಲು ಜ್ವರವಿರುವ ಚಿಕ್ಕ ಮಕ್ಕಳಿಗೆ ಉತ್ತಮವಾದದ್ದು.
ಜ್ವರದ ಚಿಹ್ನೆಗಳು:
• ತಲೆನೋವು
• ವಾಂತಿ
• ಚಳಿ
• ನಡುಕ
• ಆಲಸ್ಯತನ
• ಮೈ, ಕೈ, ಕಾಲು ನೋವು
• ಬಾಯಿ ಕಹಿಯಾಗುವುದು ಮೂತ್ರದ ಬಣ್ಹ ಹಳದಿಯಾಗುವುದು
• ಮಕ್ಕಳಲ್ಲಿ ಫಿಟ್ಸ್
• ನರಳುವುದು
• ಅಸಂಬದ್ಧ ವರ್ತನೆ
ದೊಡ್ಡವರಿಗೆ:
ಟೆಂಪರೇಚರ್ ಕಡಿಮೆಯಾಗಲು ನಾಲ್ಕರಿಂದ ಆರು ಗಂಟೆಗೊಮ್ಮೆ ಪಾರಾಸಿಟಮಲ್ ತೆಗೆದುಕೊಳ್ಳಬೇಕು
ರೋಗಿಯ ಬಟ್ಟೆಗಳನ್ನು ಕಳಚಿ ಎದೆ ಹೊಟ್ಟೆ ತೊಡೆ ಭಾಗಗಳನ್ನು ಒದ್ದೆ ಬಟ್ಟೆಯಿಂದ ಒರೆಸುತ್ತಿರಬೇಕು
ಕೆಲವರು ನೆತ್ತಿಯ ಮೇಲೆ ಒದ್ದೆ ಬಟ್ಟೆ ಹಾಕಿದರೆ ಸಾಕು ಮೆದುಳಿಗೆ ಉಷ್ಣತೆ ಏರುವುದಿಲ್ಲವೆಂದುಕೊಳ್ಳುತ್ತಾರೆ, ಇದು ತಪ್ಪು. ಹಣೆಯನ್ನು ತಂಪಾಗಿರಿಸಿದ ಮಾತ್ರಕ್ಕೆ ಒಳಗಿನ ಟೆಂಪರೇಚರ್ ಕಡಿಮೆಯಾಗುತ್ತದೆ ಎನ್ನುವುದು ಭ್ರಮೆ ಆದ್ದರಿಂದ ಇಡೀ ಶರೀರವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು.
ಎಂತಹ ಆಹಾರ ಸೇವಿಸಬೇಕು?
ಜ್ವರವಿರುವಾಗ ಜಾಸ್ತಿ ನೀರು ಕುಡಿಯಬೇಕು ವಿಶ್ರಾಂತಿ ಅತಿ ಅವಶ್ಯಕ ಈ ಸಮಯದಲ್ಲಿ ಶರೀರದ ಕ್ಯಾಲರಿಗಳು ಹೆಚ್ಚು ವ್ಯಯವಾಗುವುದರಿಂದ ಅವುಗಳನ್ನು ಪುನಃ ಹೊಂದಲು ಸೂಕ್ತವಾದ ಕ್ಯಾಲೋರಿ ಯುಕ್ತ ಆಹಾರ ತೆಗೆದುಕೊಳ್ಳಬೇಕು
ಗ್ಲುಕೋಸ್ ಹಾರ್ಲಿಕ್ಸ್ ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು ಅಕ್ಕಿ ರವೆ, ಗಂಜಿ ಬಾರ್ಲಿ ನೀರು, ಮೆದುವಾದ ಉಪ್ಪಿಟ್ಟು ಅನ್ನ ಹಾಲುಮಜ್ಜಿಗೆ ಇವುಗಳನ್ನು ಸೇವಿಸುವುದು ಒಳ್ಳೆಯದು.
ಕಾಫಿ ಟೀ ಬ್ರೆಡ್ ಇತ್ಯಾದಿ ತೆಗೆದುಕೊಳ್ಳಬಹುದು
ಮಾಂಸ ಮೊಟ್ಟೆ ಮೊಸರು ಬೆಣ್ಣೆ ಎಣ್ಣೆ ಇಂತಹ ಜಡವಾದ ಆಹಾರಗಳನ್ನು ಸೇವಿಸಬಾರದು.
ಎಷ್ಟು ಡಿಗ್ರಿಗಳಿದ್ದಾಗ ಜ್ವರವಿದೆ ಎಂದು ಹೇಳಬಹುದು:
100°F (37.8°c) ಸ್ವಲ್ಪ ಜ್ವರ
102°F (38.9°c) ಸಾಧಾರಣ ಜ್ವರ
104°F (40°c) ತೀವ್ರ ಜ್ವರ
105°F (40.6°c) ಅತಿ ತೀವ್ರವಾದ ಜ್ವರ
ಟೆಂಪರೇಚರ್ ನೋಡುವುದು ಹೇಗೆ?
● ಚಿಕ್ಕ ಮಕ್ಕಳ ದೇಹದ ಉಷ್ಣತೆ ನೋಡಲು ಥರ್ಮಾಮೀಟರ್ ಅನ್ನು ಕಂಕುಳಲ್ಲಿ ಐದು ನಿಮಿಷ ಕಾಲ ಇಡಬೇಕು.
● ಅದು ಸೂಚಿಸಿದ ಉಷ್ಣತೆಗೆ ಒಂದು ಡಿಗ್ರಿ ಸೆಲ್ಫಿಯ ಫೀವರ್ 1°F ಅಥವಾ1°C ಸೇರಿದಾಗ ಬರುವ ಮೊತ್ತವೇ ಮಗುವಿನ ಟೆಂಪರೇಚರ್.
● ದಿನವೂ ನಮ್ಮ ಶರೀರದ ಉಷ್ಣತೆ ಬೆಳಗ್ಗೆ ನಾಲಕ್ಕು ಗಂಟೆಗೆ ಕಡಿಮೆಯಾಗಿಯೂ ರಾತ್ರಿ 8 ಗಂಟೆಗೆ ಸುಮಾರು1°F ಅಥವಾ 0.5C ನಷ್ಟು ಹೆಚ್ಚಿರುತ್ತದೆ.
● ಹುಟ್ಟಿದ ಶಿಶು ಅಳುವಾಗ – ನಂತರ ಉಷ್ಣತೆ ಸ್ವಲ್ಪ ಹೆಚ್ಚಾಗುವ ಸಂಭವವಿರುತ್ತದೆ.
● ಕೆಲವು ದಿನ ಜ್ವರದಿಂದ ನರಳುತ್ತಿದ್ದು ನಾರ್ಮಲ್ ಸ್ಥಿತಿಗೆ ಮರಳುವಾಗ ಟೆಂಪರೇಚರ್ ನಾರ್ಮಲ್ ಗಿಂತ ಹೆಚ್ಚು ಕಡಿಮೆ ಇರಬಹುದು ಅದಕ್ಕೆ ಗಾಬರಿಯಾಗಬೇಕಾದ ಅಗತ್ಯವಿಲ್ಲ.
ಜ್ವರ ಕಡಿಮೆಯಾಗಿರುವುದಕ್ಕೆ ಚಿಹ್ನೆಗಳು :
● ರೋಗಿಯನ್ನು ಇದಕ್ಕೆ ಮೊದಲು ಹಿಂಚಿಸುತ್ತಿದ್ದ ರೋಗ ಚಿನ್ಹೆಗಳು ಕ್ರಮೇಣ ಕಡಿಮೆಯಾಗುತ್ತವೆ ಎಲ್ಲಕ್ಕಿಂತ ಹೆಚ್ಚಾಗಿ ರೋಗಿಯ ಮುಖದಲ್ಲಿ ಗೆಲುವಿನ ಚಿಹ್ನೆ ಕಾಣುತ್ತದೆ.
● ನರಳುವುದು, ಮುಲುಕುವುದು ಕಡಿಮೆಯಾಗುತ್ತದೆ.
● ತಲೆನೋವು ಮೈ, ಕೈ, ಕಾಲು ನೋವು ಮಾಯವಾಗುತ್ತದೆ.
● ವಾಂತಿ, ನಡುಕ, ಬಾಯಾರುವುದು ಕಡಿಮೆಯಾಗುತ್ತದೆ.
● ಮೂತ್ರದ ಬಣ್ಣ ನಾರ್ಮಲ್ ಗೆ ಬರುತ್ತದೆ.
● ಫಿಟ್ಸ್ ಬರುವುದಿಲ್ಲ.
● ಹಸಿವಾಗಲು ಪ್ರಾರಂಭವಾಗುತ್ತದೆ.
● ಜ್ವರವಿದ್ದಾಗ ಆಹಾರವಿಲ್ಲದೆ ಖಾಲಿ ಹೊಟ್ಟೆಯಲ್ಲಿ ಇರಬಾರದು.
ಅಕಸ್ಮಾತ್ ಏನಾದರೂ ತಿಂದ ತಕ್ಷಣ ವಾಂತಿಯಾದರೆ ಗಂಟೆಯ ನಂತರ ಮೇಲೆ ತಿಳಿದ ಆಹಾರಗಳಲ್ಲಿ ಯಾವುದು ಇಷ್ಟವೋ ಅದನ್ನು ಕೊಡಬಹುದು.














