ಈ ಮುನ್ನ ಅಂದರೆ ಕೆಲವು ದಶಕಗಳ ಹಿಂದೆ ಕ್ಯಾನ್ಸರ್ ಕುರಿತು ಅಷ್ಟಾಗಿ ಕೇಳಿಬರುತ್ತಿರಲಿಲ್ಲ.ಆದರೆ ಈಗ ಕ್ಯಾನ್ಸರ್ ಸುದ್ದಿಗಳು, ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನ ದಿನಕ್ಕೆ ಅಧಿಕವಾಗುತ್ತದೆ.
ಕ್ಯಾನ್ಸರ್ ಅಪಾಯಕಾರಿ ರೋಗವೆನ್ನುವುದು ಎಲ್ಲರಿಗೂ ಗೊತ್ತು ತೋಟದಲ್ಲಿನ ಕಳೆದಂತೆ ಕ್ಯಾನ್ಸರ್ ವ್ಯಾಧಿ.ಪ್ರಾರಂಭದ ದೆಸೆಯಲ್ಲಿ ಗುರ್ತಿಸಿದರೆ ಗುಣಪಡಿಸುಕೊಳ್ಳುವುದು ಸುಲಭ ಅಪಾಯಕಾರಿಯೂ ಅಲ್ಲ.
ನಿರ್ಲಕ್ಷ್ಯದಿಂದಲೂ, ಅಜ್ಞಾನದಿಂದಲೂ ಪ್ರಾರಂಭದಲ್ಲಿ ಗುರ್ತಿಸದೆ, ಬೇರೂರಿದ ಮೇಲೆ ಅದನ್ನು ಹಿಡಿತಕ್ಕೆ ತರುವುದು ಕಷ್ಟವಲ್ಲದೆ ಅದು ಆ ವ್ಯಕ್ತಿಯ ಜೀವ ತೆಗೆಯುವುದೂ ಖಾತರಿ.
ವಿವಿಧ ವಯಸ್ಸಿನವರು ಕ್ಯಾನ್ಸರ್ ನ್ನು ಆರಂಭದ ದೆಸೆಯಲ್ಲೇ ಗುರ್ತಿಸಲು, ತೆಗೆದುಕೊಳ್ಳಬೇಕಾದ ಕೆಲವು ಜಾಗರೂಕತೆಗಳನ್ನು ಇಲ್ಲಿ ಸೂಚಿಸಲಾಗಿದೆ :
*ಕ್ಯಾನ್ಸರನ್ನು ಮೊದಲ ಹಂತದಲ್ಲಿ ಗುರುತಿಸಲು ಪುರುಷರು ತೆಗೆದುಕೊಳ್ಳಬೇಕಾದ ಜಾಗೃತಿಗಳು
ವಯಸ್ಸು ತೆಗೆದುಕೊಳ್ಳಬೇಕಾದ ಜಾಗೃತಿಗಳು
20-39 = ಪ್ರತಿ ಮೂರು ವರ್ಷಗಳಿಗೊಮ್ಮೆ ಕ್ಯಾನ್ಸರಿಗೆ ಸಂಬಂಧಿಸಿದ ಚೆಕಪ್ ಳನ್ನು ಮಾಡಿಸಿಕೊಳ್ಳಬೇಕು.ಹೆಲ್ತ್ ಕೌನ್ಸಿಲಿಂಗ್ ಬಾಯಿಯ ಭಾಗವನ್ನು ಥೈರಾಯಿಡ್, ಲಿಂಫ್ ಗ್ರಂಥಿಗಳನ್ನು ವೃಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು.
40-49 = ವರ್ಷಕ್ಕೊಮ್ಮೆ ಕ್ಯಾನ್ಸರ್ ಚಿಕ್ಕಪ್ ಮಾಡಿಸಿಕೊಳ್ಳಬೇಕು ಮೇಲೆ ಹೇಳಿದ ಉಳಿದ ಜಾಗ್ರತೆಗಳಲ್ಲದೆ ವರ್ಷಕ್ಕೊಮ್ಮೆ ಪ್ರಾಸ್ಟೇಟ್ ಜೊತೆಗೆ ಮಾಡಿಸಿಕೊಳ್ಳಬೇಕು.
50 ನಂತರ = ವರ್ಷಕೊಮ್ಮೆ ಕ್ಯಾನ್ಸರ್ ಚೆಕಪ್ ಗಳೇ ಅಲ್ಲದೆ, ಮೇಲೆ ಹೇಳಿದ ಉಳಿದ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲದೆ ವರ್ಷಕ್ಕೊಂದು ಬಾರಿ ಮಲದಲ್ಲಿ ರಕ್ತ ಬೀಳುತ್ತಿರುವುದೇ ಎಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರತಿ ಮೂರು ಐದು ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳಬೇಕು.
ಕ್ಯಾನ್ಸರ್ ನಿವಾರಣೆಗೆ ಸೂಚನೆಗಳು
ಕ್ಯಾನ್ಸರ್ ಬಂದ ಮೇಲೆ ಕಳವಳ ಪಡುತ್ತಾ ಡಾಕ್ಟರ್ ಬಳಿಗೆ ಓಡುವುದರ ಬದಲು, ಕ್ಯಾನ್ಸರ್ ಬರದಂತೆ ಮುಂಜಾಗ್ರತೆ ವಹಿಸುವುದು ಮೇಲು. ನಮ್ಮ ದೇಶದಲ್ಲಿ ಬರುವ ಅನೇಕ ಕ್ಯಾನ್ಸರ್ಗಳನ್ನು ಮುಂಜಾಗ್ರತೆ ವಹಿಸುವುದರ ಮೂಲಕ ಬರದಂತೆ ಮಾಡಬಹುದು ಅಂತಹವುಗಳಲ್ಲಿ ಬಾಯಿ ಕ್ಯಾನ್ಸರ್ ಶ್ವಾಸಕೋಶಗಳ ಕ್ಯಾನ್ಸರ್, ಕ್ಯಾನ್ಸರ್ ಮೊದಲಾದವು ಕೆಲವು .