ಹುಬ್ಬಳ್ಳಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಾಗಿದ್ದ ಗೋಕಾಕ ತಾಲೂಕಿನ ತುಂಬು ಗರ್ಭಿಣಿ ಚಿಕಿತ್ಸೆ ಫಲಿಸದೆ ಮಂಗಳವಾರ (ಡಿ.31) ಮಧ್ಯಾಹ್ನ ಮೃತಪಟ್ಟಿದ್ದಾರೆ.
ರಾಧಿಕಾ ಮಲ್ಲೇಶ ಗಡ್ಡಿಹೊಳೆ (19) ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು, ಈ ವಿಷಯ ತಿಳಿದು ಅವಳ ಪತಿ ಮಲ್ಲೇಶಿ ಅವರು ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕೆಎಂಸಿಆರ್‌ಐನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗರ್ಭಿಣಿಯಾಗಿದ್ದ ರಾಧಿಕಾ ಅವರು ಆರು ಬಾರಿ ಫಿಟ್ಸ್‌ಗೆ ಒಳಗಾಗಿದ್ದರು. ಇವರ ಗರ್ಭಕೋಶದಲ್ಲಿಯೇ 8 ತಿಂಗಳ ಮಗು ಸಾವನ್ನಪ್ಪಿತ್ತು. ಸೋಮವಾರ ಇವರನ್ನು ಬೆಳಗಾವಿಯ ಬಿಮ್ಸ್‌ನಿಂದ ಕೆಎಂಸಿಆರ್‌ಐ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.














