ಮನೆ ಸ್ಥಳೀಯ ಅರಮನೆ ಆವರಣದಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ:  ಅಪರ ಜಿಲ್ಲಾಧಿಕಾರಿ ಡಾ . ಪಿ . ಶಿವರಾಜು

ಅರಮನೆ ಆವರಣದಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ:  ಅಪರ ಜಿಲ್ಲಾಧಿಕಾರಿ ಡಾ . ಪಿ . ಶಿವರಾಜು

0

ಮೈಸೂರು : ನಗರದ ಅಂಬಾವಿಲಾಸ ಅರಮನೆ ಮೈದಾನದಲ್ಲಿ ಇಲಾಖೆಗಳ ಸಮನ್ವಯದೊಂದಿಗೆ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ . ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು ‘ ಎಂದು ಅಪರ ಜಿಲ್ಲಾಧಿಕಾರಿ ಡಾ . ಪಿ . ಶಿವರಾಜು ಸೂಚಿಸಿದರು .

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು .​​ಮೈಸೂರು ಯೋಗಕ್ಕೆ ಪ್ರಸಿದ್ಧವಾಗಿದೆ  ಈ ಕಾರ್ಯಕ್ರಮಕ್ಕೆ  ಹೆಚ್ಚು ಸಾರ್ವಜನಿಕರು ಭಾಗವಹಿಸುವುದು . ಅಂದು ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ , 15 ಸಾವಿರ ಯೋಗಪಟುಗಳು ಭಾಗವಹಿಸುವರು .  ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುವುದು . ಇದಕ್ಕೆ ಬೇಕಾದ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ .

ಯೋಗದಲ್ಲಿ ಭಾಗವಹಿಸುವವರು ಟೀ ಶರ್ಟ್ ಮತ್ತು ಟ್ಯಾಂಕರ್ ಪ್ಯಾಂಟ್ ಧರಿಸಿರಬೇಕು . ಯೋಗ ಮ್ಯಾಟ್ ಅವರೇ ತರಬೇಕು . ಜೂನ್ 15 ರಂದು ಪೂರ್ವಾಭ್ಯಾಸ ನಡೆಯಲಿದೆ , ಆಸಕ್ತರು ಭಾಗವಹಿಸಬಹುದು ಎಂದು ಹೇಳಿದರು .ಜೆ . ಎಸ್ . ಎಸ್ ಸಂಸ್ಧೆ , ಸಿಸ್ಮಾಮ್ ಸ್ಕೂಲ್ ಮ್ಯಾನೆಂಜಮೆ ಒ ಟಿ , ಯೋಗ ಫೆಡರೇಶನ್ , ಯೋಗ ಒಕ್ಕೂಟ , ಯೋಗ ತರಬೇತಿ ಸಂಸ್ಥೆ , ಎನ್ . ಸಿ . ಸಿ , ಎನ್ . ಎಸ್ . ಎಸ್ ಹಾಗೂ ಶಾಲಾ ಕಾಲೇಜುಗಳಿಂದ ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಎಂದು ಹೇಳಿದರು .

ಯೋಗ ನಡೆಯುವ ಸ್ಥಳದಲ್ಲಿ ಆಂಬುಲೆನ್ಸ್ , ಫೈಯರ್ , ಕುಡಿಯುವ ನೀರು ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸಬೇಕು . ಮಹಾನಗರ ಪಾಲಿಕೆಯಿಂದ ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ , ಕೆ . ಎಸ್ . ಆರ್ . ಟಿ . ಸಿ ವತಿಯಿಂದ ಯೋಗಾಸಕ್ತರಿಗೆ ಬಸ್ಸಿನ ವ್ಯವಸ್ಥೆ ಹಾಗೂ ಅರಮನೆ ಮಂಡಳಿಯಿ o ದ ಅರಮನೆ ಸ್ಥಳಾವಕಾಶದ ವ್ಯವಸ್ಥೆ ಹಾಗೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಾಪಿಸಲಾಯಿತು . ಯೋಗದಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ . ಕಾರ್ಯಕ್ರಮಕ್ಕೆ ಅಗತ್ಯವಾದ ಪ್ರಚಾರ ನೀಡುವಂತೆ ಅಪರ ಜಿಲ್ಲಾಧಿಕಾರಿಗಳು . ಈ ಸಂದರ್ಭದಲ್ಲಿ ಯೋಗ ದಿನದ ಪ್ರಚಾರ ಸಾಮಗ್ರಿಯನ್ನು ಅಪರ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು .

ಸಭೆಯಲ್ಲಿ ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಸುಬ್ರಹ್ಮಣ್ಯ , ಡಿಡಿಪಿಐ ಜವರೇಗೌಡ , ಆಯುಷ್ ಅಧಿಕಾರಿ ರೇಣುಕಾ ದೇವಿ , ಯೋಗ ಒಕ್ಕೂಟದ ಪದಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು .