ಬೆಳಗಿನ ಸಮಯದಲ್ಲಿ ಯಾವುದೇ ಹೋಟೇಲ್’ಗೆ ಹೋಗಿ ಅಲ್ಲಿ ಮೊದಲಿಗೆ ರೆಡಿಯಾಗಿರುವ ಉಪಹಾರ ಎಂದರೆ ಅದು ಬಿಸಿಬಿಸಿ ಇಡ್ಲಿ ಜೊತೆಗೆ ಬೇಳೆ ಹಾಕಿ ಮಾಡಿದ ತರಕಾರಿ ಸಾಂಬಾರ್!
ಅದರಲ್ಲೂ ಬಿಸಿಬಿಸಿ ಇಡ್ಲಿ ಜೊತೆಗೆ ಸಾಂಬಾರ್ ಹಾಗೂ ಕಾಯಿ ಚಟ್ನಿ ಇದ್ದರೆ, ಆಹಾ ಇದರ ಮಜಾನೇ ಬೇರೆ, ಎಷ್ಟು ಇಡ್ಲಿ ತಿನ್ನುತ್ತಿದ್ದೇವೆ ಎನ್ನುವ ಲೆಕ್ಕವೇ ಇರದು!
ಇನ್ನು ನಮ್ಮ ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಕೂಡ ಇಡ್ಲಿ ಪ್ರತಿನಿತ್ಯವೂ ಅತೀ ಹೆಚ್ಚು ಬಳಕೆ ಆಗುವಂತಹ ತಿಂಡಿ. ಇನ್ನು ಆರೋಗ್ಯದ ದೃಷ್ಟಿ ಯಿಂದಲೂ ಇಡ್ಲಿ ತುಂಬಾ ಲಾಭಕಾರಿ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎಂದು ಪರಿಗಣಿಸಲಾಗಿದೆ. ಬನ್ನಿ ಇಂದಿನ ರೆಸಿಪಿ ಲೇಖನದಲ್ಲಿ ಫಟಾಫಟ್ ರವೆ ಬಳಸಿ ರೆಡಿ ಮಾಡಬಹುದಾದ ಪೌಷ್ಟಿಕಾಂಶಯುಕ್ತ ಸಾದ ರವೆ ಇಡ್ಲಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದೇವೆ.
(ಬಡಿಸುವ ಪ್ರಮಾಣ: 2)
ಪ್ರಮುಖ ಸಾಮಗ್ರಿ
•1/4 ಕಪ್ ಉದ್ದಿನ ಬೇಳೆ
•3/4 ಕಪ್ ಇಡ್ಲಿ ಅಕ್ಕಿ
ಮುಖ್ಯ ಅಡುಗೆಗೆ
•1/4 ಚಮಚ ಮೆಂತೆೆ ಬೀಜ
•ಅಗತ್ಯ ತಕ್ಕಷ್ಟು ನೀರು
•ಅಗತ್ಯ ತಕ್ಕಷ್ಟು ಉಪ್ಪು
Step 1:
ಮೊದಲಿಗೆ ಉದ್ದಿನಬೇಳೆ, ಮೆಂತೆ ಹಾಗೂ ರವೆಯನ್ನು ಬೇರೆ ಬೇರೆ ಬೌಲ್ನಲ್ಲಿ ನೀರನ್ನು ಸೇರಿಸಿ ಸುಮಾರು 2 ಗಂಟೆಗಳ ಕಾಲ ನೆನೆಸಿಡಿ.
Step 2:
ಇನ್ನು ಮೆಂತೆ ಮತ್ತು ಉದ್ದಿನ ಬೇಳೆಯನ್ನು, ನೆನೆಸಿಟ್ಟ ನೀರಿನ ಸಮೇತ ಮಿಕ್ಸಿಯ ಜಾರ್ಗೆ ಹಾಕಿಕೊಂಡು, ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ. ಆಮೇಲೆ ಇದಕ್ಕೆ ನೆನೆಸಿಟ್ಟ ರವೆಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
Step 3:
ಇನ್ನು ಈ ಹಿಟ್ಟನ್ನು ಸುಮಾರು 7 ಗಂಟೆಗಳ ಕಾಲ ಹುದುಗಿಸಲು ಬಿಡಿ. ಇನ್ನು ಇಡ್ಲಿ ತಟ್ಟೆಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಸವರಿ, ಯಾಕೆಂದರೆ ಇಡ್ಲಿ ಬೆಂದ ಬಳಿಕ, ಇದು ತಟ್ಟೆಗೆ ಅಂಟಿ ಕೊಳ್ಳದಂತೆ, ಸುಲಭವಾಗಿ ತೆಗೆಯಲು ಸಹಾಯವಾಗುತ್ತದೆ.
Step 4:
ಇನ್ನು ಇಡ್ಲಿಗಳನ್ನು ಬೇಯಿಸುವುದಕ್ಕಾಗಿ, ಇಡ್ಲಿ ಕುಕ್ಕರ್ನಲ್ಲಿ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಆಮೇಲೆ ಇದರ ಒಳಗೆ ಇಡ್ಲಿ ತಟ್ಟೆಯನ್ನು ಇಟ್ಟು, ಮುಚ್ಚಳವನ್ನು ಮುಚ್ಚಿ ಬಿಡಿ. ಇನ್ನು ಸುಮಾರು 10 ನಿಮಿಷಗಳವರೆಗೆ ಗ್ಯಾಸ್ ಉರಿಯನ್ನು ಜಾಸ್ತಿ ಇಟ್ಟುಕೊಳ್ಳಿ, ಇದರಿಂದಾಗಿ ಇಡ್ಲಿ ಸ್ವಲ್ಪ ಬೇಗನೇ ಬೇಯಲು ನೆರವಾಗುತ್ತದೆ.
Step 5:
ಇನ್ನು ಇಡ್ಲಿ ಕುಕ್ಕರ್ ಮುಚ್ಚಳವನ್ನು ಮೆಲ್ಲನೇ ತೆಗೆದು ಇಡ್ಲಿಗಳು ಬೆಂದಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಇಡ್ಲಿ ಬೆಂದಿದ್ದರೆ, ಗ್ಯಾಸ್ ಆಫ್ ಮಾಡಿ, ಆಮೇಲೆ ಸ್ವಲ್ಪ ಹೊತ್ತು ತಣಿಯಲು ಬಿಡಿ. ನಂತರ ಇಡ್ಲಿಗಳನ್ನು ಒಂದು ಬೌಲ್ಗೆ ವರ್ಗಾಹಿಸಿ, ನಂತರ ಚಟ್ನಿ ಮತ್ತು ಸಾಂಬಾರ್ ಜೊತೆಗೆ ಬಡಿಸಿಕೊಳ್ಳಿ.