ಮನೆ ಸುದ್ದಿ ಜಾಲ ಇಂದು ರಫೇಲ್‌ನಲ್ಲಿ ಹಾರಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಇಂದು ರಫೇಲ್‌ನಲ್ಲಿ ಹಾರಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

0

ಚಂಡೀಗಢ : ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು (ಬುಧವಾರ) ರಫೇಲ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಲಿದ್ದಾರೆ.

67 ವರ್ಷದ ದ್ರೌಪದಿ ಮುರ್ಮು ಇಂದು ಹರಿಯಾಣದ ಅಂಬಾಲಾ ಏರ್‌ಬೇಸ್‌ಗೆ ತೆರಳಿ ಅಲ್ಲಿ ರಫೇಲ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಲಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಫೇಲ್ ಏರಿದ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಆಪರೇಷನ್ ಸಿಂಧೂರದ ವೇಳೆ ಅಂಬಾಲಾ ಏರ್‌ಬೇಸ್‌ನಿಂದ ಟೇಕಾಫ್ ಆದ ನಮ್ಮ ಫೈಟರ್ ಜೆಟ್‌ಗಳು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿದ್ದವು.

ಈ ಮೊದಲು 2023ರ ಏಪ್ರಿಲ್ 8ರಂದು ಅಸ್ಸಾಂನ ತೇಜ್‌ಪುರ ಏರ್‌ಬೇಸ್‌ನಲ್ಲಿ ಸುಖೋಯ್-30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದಕ್ಕೂ ಮುನ್ನ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟೀಲ್ ಮತ್ತು ಅಬ್ದುಲ್ ಕಲಾಂ ಅಬ್ದುಲ್ ಅವರು ಸುಖೋಯ್-30 ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ್ದರು.