ಮನೆ ದೇವಸ್ಥಾನ ಪ್ರತಿಷ್ಠಾ ಮಾಹಿತಿ

ಪ್ರತಿಷ್ಠಾ ಮಾಹಿತಿ

0

1. ಶೃಂಗೇರಿ ಮಹಾ ಸಂಸ್ಥಾನದ ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಪರಮಪೂಜ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಅನುಗ್ರಹ ಪೂರ್ವಕ ಶ್ರೀ ಅನ್ನಪೂರ್ಣ ಪಾದ ಸೇವಾ ದುರಂಧರ ಬಿರುದಿನೊಂದಿಗೆ ಸನ್ಮಾನ.

Join Our Whatsapp Group

2. ಹೊರನಾಡಿನ ದೊಡ್ಡಮನೆ ಹೆಗಡೆ ಮನೆಯವರಿಂದ ಶ್ರೀ ಅನ್ನಪೂರ್ಣ ಪಾದಾ ಸೇವಾಸ್ತಕ ಬಿರುದಿನೊಂದಿಗೆ ಸನ್ಮಾನ.

3. ಹೊರನಾಡಿನ ಗ್ರಾಮಸ್ಥರಿಂದ ಸನ್ಮಾನ

4. ಬಸರಿಗಟ್ಟೆ ಸದ್ಗುರು ಪಾಠಶಾಲೆಯವರಿಂದ ಸನ್ಮಾನ

      1979ರಲ್ಲಿ ಸರ್ವಾಧಿಕಾರಿಗಳಾದಗಿದ್ದ ಶ್ರೀ ವೆಂಕಟಸುಬ್ಬಾ ಜೋಯಿಸ್ ರವರು ತಮ್ಮ ಉತ್ತರಾಧಿಕಾರಿಯಾದ ಗಜೇಂದ್ರ ಪ್ರಸನ್ನ ಜೋಯಿಸ್ ರವರಿಗೆ ಸಿದ್ದಾರ್ಥ ನಾಮ ಸಂವತ್ಸರದ ವೈಶಾಖ ಶುಕ್ಲ ತದಿಗೆ ಅರ್ಥಾತ್ ಅಕ್ಷಯ ತದ್ದಿಗೆ 29 -4 -1979ರಂದು ಶ್ರೀಹರಿಹರಪುರದ ಮಠದೀಶರಾದ ಶ್ರೀ ಸ್ವಯಂ ಪ್ರಕಾಶ್ ಅಭಿನವ ರಾಮಾನಂದ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸನ್ನಿಯಲ್ಲಿಧ್ಯ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸಿದರು. ಇದರಿಂದ ಮುಂದಿನ ಧರ್ಮ ಕರ್ತರಾಗಿ ಶ್ರೀ ಗಜೇಂದ್ರ ಪ್ರಸನ್ನಕುಮಾರ್ ಜೋಯಿಸ್ ನಿಯುಕ್ತಿಗೊಂಡರು.

 ಅವರು ಉಚಿತ ಸಾಮೂಹಿಕ ಉಪನಯನ ಪ್ರಾರಂಭಿಸಿದರು,ನವಗ್ರಹ ದೇವರ ಪ್ರತಿಷ್ಠೆಯನ್ನು ನೆರವೇರಿಸಿದರು. ವಿದ್ಯುಚ್ಛಕ್ತಿಗಾಗಿ ಹೊಸ ಜನರೇಟರ್ ಖರೀದಿಸಿ, ಕುಡಿಯುವ ನೀರಿನ ಸೌಲಭ್ಯವನ್ನು ವ್ಯವಸ್ಥೆಗೊಳಿಸಿದರು. ಇವರು ಹೊರನಾಡು ಬಲಿಗೆ ರತ್ತೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಇವರು ತಮ್ಮ ತಂದೆ ನಡೆದ ದಾರಿಯಲ್ಲಿ ಮುಂದುವರಿದು   ದೇವಾಲಯಕ್ಕೆ ಆಧುನಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಮತ್ತು ದೇವಾಲಯಗಳನ್ನು ಸಮಾಜದ ಹತ್ತಿರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

 ಯೋಗ ಕ್ಷೇಮಂ ವಹಾಮ್ಯಹಂ ನಿವೃತ್ತ ಮಾತ್ರಂ ಭವ :

 ವಂಶಾನುಕರ್ಮದಿಂದ ನಡೆಸಿಕೊಂಡು ಬಂದ ಸರ್ವಾಧಿಕಾರಿಗಳು ವೆಂಕಟಸುಬ್ಬಾ ಜೋಯಿಸರು,ನರಸಮ್ಮನವರು ದೇವಾಲಯ ಜೀರ್ಣೋದ್ಧಾರ ಮತ್ತು ಅಗ್ರಹಾರಾದಿ ಗೃಹಗಳ ನಿರ್ಮಾಣಕರ್ತ. ಸ್ವಯಾರ್ಜತ  ದಿವ್ಯದಿಂದ ಆಸ್ತಿಮಾರ್ ಕಲ್ಪಿಸಿಕೊಂಡ ಪೂಜ್ಯ ಪಿತಾಮಹರುಗಳು ಭೀಮಾ ಜೋಯಿಸರು, ದುಗ್ಗಮ್ಮನವರು,ವೆಂಕಟಸುಬ್ಬಾ ಜೋಯಿಸರು ಕಾವೇರಮ್ಮನವರು ಭೀಮಾ ಜೂಯಿಸಲು ಮಹಾಲಕ್ಷ್ಮಮ್ಮನವರು, ಶಂಕರನಾರಾಯಣ ಜೋಯಿಸ್ ದಂಪತಿಗಳು ಮತ್ತು ವೆಂಕಟಯ್ಯನವರು ಇತ್ಯಾದಿ. ಎಂಬ ಮಾಹಿತಿಯನ್ನು ಶಿಲಾ ದೇವಾಲಯದಲ್ಲಿ ಉತ್ತರ ದಿಕ್ಕಿನ ಭಾಗದಲ್ಲಿ ಶ್ರೀ ಮಾತೆಗೆ ಅರ್ಪಿಸುತ್ತಾರೆ.

       ಡಿ ವಿ ಗಜೇಂದ್ರ ಪ್ರಸನ್ನ ಜೋಯಿಸರ ನಿಧಾನಾನಂತರ 1991 ಅಕ್ಟೋಬರ್ 21ರಂದು ಶೃಂಗೇರಿ ದಕ್ಷಿಣಾಮ್ನಾಯ ಶಾರದ ಪೀಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ವಿಶೇಷ ಅನುಗ್ರಹಗಳೊಂದಿಗೆ ಹಾಗೂ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಂದ್ರ ಭಾರತಿ ತೀರ್ಥ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಜಿ.ಭೀಮೇಶ್ವರ ಜೋಷಿಯವರು ಮುಂದಿನ ಧರ್ಮ ಕರ್ತರಾಗಿ ಅಧಿಕಾರ ಸ್ವೀಕರಿಸಿದರು. ಇವರ ಕಾಲದಲ್ಲಿ ಶ್ರೀ ಕ್ಷೇತ್ರವು ಅಭೂತಪೂರ್ವ  ಬೆಳವಣಿಗೆಯನ್ನು ಸಾಧಿಸುತ್ತಿದೆ.ಇವರ ಕಾಲದಲ್ಲಾದ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಶ್ರೀ ಕ್ಷೇತ್ರದ ಬೆಳವಣಿಗೆಗಳು ಇಂತಿವೆ.