ಮನೆ ಉದ್ಯೋಗ ಪ್ರತಿಷ್ಠಿತ ಹೆಚ್​ಎಎಲ್ ಶಿಕ್ಷಣ ಸಂಸ್ಥೆಗೆ ಕನ್ನಡ ಟೀಚರ್ಸ್​​ ಬೇಕಾಗಿದ್ದಾರೆ: ಇಂದೇ ಅರ್ಜಿ ಸಲ್ಲಿಸಿ ​

ಪ್ರತಿಷ್ಠಿತ ಹೆಚ್​ಎಎಲ್ ಶಿಕ್ಷಣ ಸಂಸ್ಥೆಗೆ ಕನ್ನಡ ಟೀಚರ್ಸ್​​ ಬೇಕಾಗಿದ್ದಾರೆ: ಇಂದೇ ಅರ್ಜಿ ಸಲ್ಲಿಸಿ ​

0

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಸಂಸ್ಥೆಯು ತನ್ನ ಶಾಲೆಗಳಲ್ಲಿ ಬೋಧಕ ವರ್ಗ ಮತ್ತು ಬೋಧಕೇತರ ವರ್ಗಕ್ಕೆ (Bangalore HAL Schools Recruitment 2024) ಅನೇಕ ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿ ಹೆಚ್​ಎಎಲ್ ಶಿಕ್ಷಣ ಸಂಸ್ಥೆ (HAL Education Committee) ಇಂದು ಜಾಹಿರಾತು ಹೊರಡಿಸಿದೆ.

ಅರ್ಹ ಅಭ್ಯರ್ಥಿಗಳು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ. ಆನ್‌ ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 21.03.2024.

ಮುಂದಿನ ಶೈಕ್ಷಣಿಕ ವರ್ಷಕ್ಕೆ (AY 2024-25) ಅನ್ವಯವಾಗುವಂತೆ ಈ ರೆಕ್ರೂಟ್ಮೆಂಟ್ ನಡೆಯಲಿದೆ. ಬೆಂಗಳೂರಿನಲ್ಲಿರುವ HAL ಶಾಲೆಗಳಲ್ಲಿ (CBSE/ICSE/ State Board/Special School) ನಾನಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಶಿಕ್ಷಕರು ಸೆರಿದಂತೆ ನಾನಾ ವಿಷಯ ಪರಿಣತರ ನೇಮಕಾತಿ ನಡೆಯಲಿದೆ.

ಹೆಡ್ ಮಿಸ್ಟ್ರೆಸ್/ಮಾಸ್ಟರ್, ಸಹಾಯಕ ಮಿಸ್ಟ್ರೆಸ್/ಮಾಸ್ಟರ್ ಜೊತೆಗೆ ಕಛೇರಿ ಸೂಪರಿಂಟೆಂಡೆಂಟ್ (ಖಾತೆಗಳು), ತರಬೇತಿ ಪಡೆದ ಪದವೀಧರ ಶಿಕ್ಷಕ, ಸಲಹೆಗಾರ, ದೈಹಿಕ ಶಿಕ್ಷಣ, ನೃತ್ಯ, ನರ್ಸರಿ ಹುದ್ದೆಗಳಿಗೆ ನೇಮಕ ನಡೆಯಲಿದೆ.

HM ಹುದ್ದೆಯನ್ನು ನಿಯಮಿತ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ ಆದರೆ ಇತರ ಹುದ್ದೆಗಳು ಅಧಿಕಾರಾವಧಿಯ ಆಧಾರದ ಮೇಲೆ ಇರುತ್ತದೆ. ವಿದ್ಯಾರ್ಹತೆ, ವಯಸ್ಸು, ಅನುಭವ, ವೇತನ ಮತ್ತು ಅರ್ಜಿ ಸಲ್ಲಿಸುವ ವಿಧಾನದಂತಹ ವಿವರಗಳನ್ನು ಒಳಗೊಂಡಿರುವ ಅಧಿಸೂಚನೆಯನ್ನು ಶಾಲೆಯ ಈ ವೆಬ್‌ ಸೈಟ್‌ ಗಳಿಗೆ ಭೇಟಿ ನೀಡಬಹುದು.

www.halec.co.in , www.linps.co.in, www.halgnanajyotischool.co.in, www. .halpublicschool.com) ಮತ್ತು HAL ವೆಬ್‌ಸೈಟ್ (www.hal-india.co.in).