ದೋಣಿ ಆಕಾರದ ಮೊಣಚು ತುದಿ ಎಲೆ. ಗಟ್ಟಿ ಕಾಂಡದ ಎರಡಾಳೇತ್ತರದ ಪೊದರು. ಬಲಿತ ಎಲೆ ಹಳದಿಯಾಗಿ ಉದುರುತ್ತದೆ. ತುದಿ, ಕವಲು ರೆಂಬೆ ಮತ್ತು ಎಲೆ ಕಂಕುಳಲ್ಲ ಹೂ ಮಂಜರಿ, ಬಿಳಿಯ ಹೂ, ಮಿದು ರೋಮ ತ್ರೀಕೋಣ ಚಪ್ಪಟೆಕಾಯಿ, ಒಳಗೆ ನಾಲ್ಕು ಪುಟಾಣಿ ಬೀಜಗಳಿರುತ್ತವೆ. ಬಲಿತ ರೆಂಬೆ ಉರಿದರೆ ಸಾಕು ಹೊಸ ಸಸಿ ಚಿಗುರುತ್ತದೆ. ಎಲೆ, ಹೂ, ಬೇರು ಬಳಸುವ ಅತಿ ಹಳೆಯ ಪೊದರಿನ ಬೇರು ಉತ್ತಮ. ವಾಸಿಸಿನ್, ವಾಸಿನಿನ್, ಸಕ್ಕರೆ ಆವಿಯಾಗುವ ಸ್ವಭಾವದ ಎಣ್ಣೆ, ಕೊಬ್ಬು ಸಸ್ಯದಲ್ಲಿರುವ ರಾಸಾಯನಿಕ ಸತ್ವಗಳು. ಅಡುಗೆ ಸೋಗೆಯನ್ನು ರಕ್ತಸ್ರಾವ ನಿಲ್ಲಿಸುವ ಉಪಕಾರಿ ಸಸ್ಯವೆಂದು ಬಹು ಪ್ರಶಂಸೆ ಮಾಡಲಾಗಿದೆ.ತ್ರ ಮಾರ್ಗ, ಗುಡ್ಡ ಮಾರ್ಗ, ಮೂಗು, ಗಂಟಲು ದ್ವಾರಗಳಲ್ಲಿ ಉಂಟಾಗುವ ರಕ್ತಸ್ರಾವ ನಿಲ್ಲಿಸಲು ಅಡುಗೆ ಸೋಗೆ ಅತ್ಯುತ್ತಮ ಮೂಲಿಕೆಯಾಗಿದೆ. ಕೆಮ್ಮು, ದಮ್ಮು, ಪರಿಹಾರಕ್ಕೆ ಸಹ ಅಡುಗೆಸೋಗೆ ಅತ್ಯುಪಯುಕ್ತ. ಕಫ ಹೊರಹಾಕಲು ಸಹಕಾರಿ. ಜ್ವರ ಪರಿಹಾರಿ. ಜಂಟಿನ ತೊಂದರೆಗೆ ಉತ್ತಮ ಮದ್ದು. ಬೆವರು ತರಿಸುವಂತಹ ಗುಣವಿದೆ. ಮಧುಮೇಹದಲ್ಲಿ ಸಹ ಬಳಕೆಗೆ ಅರ್ಹವಾಗಿದೆ.
ಔಷಧೀಯ ಗುಣಗಳು :-
- ಎಲೆ ರಸ ಸಹಿತ ತುಪ್ಪ ಕುಡಿಸುವುದರಿಂದ ಮುಟ್ಟಿನ ಅತಿ ರಕ್ತಸ್ರಾವ ಪರಿಹಾರವಾಗುತ್ತದೆ.
- ಕೀಲು ನೋವು, ಬಾವು, ಉರಿಯುತ ಪರಿಹಾರಕ್ಕೆ ಎಲೆ ಬಿಸಿ ಮಾಡಿ ಪೋಲ್ಟೀಸು ಹಾಕುವುದರಿಂದ ಹಿತವಾಗುವುದು. ಚರ್ಮರೋಗ ಪರಿಹಾರಕ್ಕೆ ಎಲೆಯ ಕಷಾಯ ಸ್ನಾನ ಬಹಳ ಹಿತಕಾರಿಯಾಗಿದೆ.
- ಕೀಟನಾಶಕ ಗುಣವಿರುವ ಎಲೆಗಳನ್ನು ಸೊಳ್ಳೆ, ಗದ್ದೆಯ ಪೈರು ನಾಶಕ ಕೀಟ, ದೊಂಡು ಹುಳ ನಾಶಮಾಡಲು ಬಳಸುವರು ಬಹಳ ಲಾಭಕಾರಿಯಾಗಿದೆ.
- ಪದೇ ಪದೇ ಮರಳಿ ಬರುವ ಜ್ವರದಲ್ಲಿ ಬಲಿತ ಪೊದರು ಬೇರನ್ನು ಕೊಚ್ಚಿ, ನೀರಿನಲ್ಲಿ ಕುದಿಸಿ ಅದರ ಕಷಾಯವನ್ನು ಬಿಸಿಯಾಗಿರುವಾಗಲೇ ರೋಗಿಗೆ ಕುಡಿಸುವುದರಿಂದ ಪರಿಣಾಮಕಾರಿ ಲಾಭವಾಗುತ್ತದೆ.
- ಹೂಗಳನ್ನ ಬಳಸಿ ಗುಲಕನ್ (ಪದರ ಹೂ ಕಲ್ಲು ಸಕ್ಕರೆಪುಡಿ ಸೇರಿಸಿ ಬಿಸಿಲಿನಲ್ಲಿಡುವುದು) ತಯಾರಿಸಿದ್ದನ್ನು ಸೇವಿಸಿದರೆ ಎಲ್ಲಾ ಬಗೆಯ ರಕ್ತಸ್ರಾವ ವಾಸಿಯಾಗುತ್ತದೆ.
- ಕಣ್ಣು ಬೇನೆಗೆ ಅರೆದ ಹೂಗಳನ್ನು ಕಣ್ಣಿನ ಮೇಲೆ ಕಟ್ಟುವುದರಿಂದ ತುಂಬಾ ಲಾಭವಾಗುತ್ತದೆ.
- ಹೊಟ್ಟೆ ಉಬ್ಬರ, ಅತಿಭೇದಿ, ಆಮಶಂಕೆ ಪರಿಹರಿಸಲು ಎಲೆ ಮಾಡಿಸಿದ ರಸ ಕುಡಿಯುವುದರಿಂದ ಕರುಳಿನಲ್ಲಿರುವ ರೋಗ ಹರಡುವ ಸಣ್ಣ ಸಣ್ಣ ಕ್ರೀಮಿಗಳಿಂದ ಪರಿಹಾರ ಸಿಗುತ್ತದೆ.
- ಬಟ್ಟೆಗಳಿಗೆ ಹುಳ, ನುಸಿ ಹಿಡಿದು ಹಾಳಾಗದಂತೆ ದವಸಧಾನ್ಯ ಕೆಡದಂತೆ ಎಲೆ ಹಾಕಿ ಇಡಬಹುದು.