ಮನೆ ರಾಜಕೀಯ ಹಿಂದೂಗಳ ಹಿತಾಸಕ್ತಿ ಕಾಪಾಡುವಲ್ಲಿ ಹಿಂದಿನ ಮತ್ತು ಈಗಿನ ಸರ್ಕಾರಗಳು ವಿಫಲ: ಬಸನಗೌಡ ಯತ್ನಾಳ್

ಹಿಂದೂಗಳ ಹಿತಾಸಕ್ತಿ ಕಾಪಾಡುವಲ್ಲಿ ಹಿಂದಿನ ಮತ್ತು ಈಗಿನ ಸರ್ಕಾರಗಳು ವಿಫಲ: ಬಸನಗೌಡ ಯತ್ನಾಳ್

0

ಹುಬ್ಬಳ್ಳಿ: ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ ಹಿಂದೂಗಳ ವಿರುದ್ಧ ಗಲಭೆ ಮಾಡಿಸುವುದು ಸಿದ್ದರಾಮಯ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

Join Our Whatsapp Group

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್, ಬೆಂಗಳೂರಲ್ಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದು, ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಆಕಳನ್ನು ಕೊಯ್ದಿರೋದು, ಶಿವಮೊಗ್ಗದಲ್ಲಿ ಹಸುಗಳ ಮಾಂಸ ಮಾರಾಟ-ಇವೆಲ್ಲ ಘಟನೆ ನಡೆಯುತ್ತಿದ್ರೂ ಸಿದ್ದರಾಮಯ್ಯ ಸುಮ್ಮನಿದ್ದಾರೆ, ಡಿಕೆ ಶಿವಕುಮಾರ್ ಮುಸಲ್ಮಾನರನ್ನು ನನ್ನ ಸಹೋದರರು ಅನ್ನುತ್ತಾರೆ ಎಂದು ಯತ್ನಾಳ್ ಹೇಳಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲಿ ಸರ್ಕಾರ ನಡೆಸಿದರೆ ಮಾತ್ರ ಹಿಂದೂ ಹಿತಾಸಕ್ತಿಯ ರಕ್ಷಣೆ ಸಾಧ್ಯ ಎಂದು ಅವರು ಹೇಳಿದರು.