Saval TV on YouTube
ನವದೆಹಲಿ(Newdelhi): ಮೂಗಿನ ಮೂಲಕ ಹಾಕುವ ಲಸಿಕೆಗೆ ಭಾರತ್ ಬಯೋಟೆಕ್ ಬೆಲೆಯನ್ನು ನಿಗದಿಪಡಿಸಿದ್ದು, ಕೋವಿಡ್ ನೇಸಲ್ ಲಸಿಕೆಗೆ 800 ರೂ. ಬೆಲೆ ವಿಧಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಬೆಲೆ ಮಾತ್ರ 800 ರೂ. ಆಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂ. ಆಗಿದೆ. ಜಿಎಸ್’ಟಿ ಮತ್ತು ಆಸ್ಪತ್ರೆಯ ಶುಲ್ಕಗಳು ಪ್ರತ್ಯೇಕವಾಗಿದೆ. ಸದ್ಯದಲ್ಲೇ ಲಸಿಕೆ, ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತ್ ಬಯೊಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಬಳಕೆ ಮಾಡಲು ಡಿ.23ರಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.
ಕೋವಿಡ್ ನಿಯಂತ್ರಣಕ್ಕಾಗಿ ಮೂಗಿನ ಮೂಲಕ ಬಳಸಬಹುದಾದ ದೇಶದ ಮೊದಲ ಕೋವಿಡ್ ಲಸಿಕೆ ಇದಾಗಿದೆ. 2021ರ ಆಗಸ್ಟ್’ನಲ್ಲಿ ನೇಸಲ್ ಲಸಿಕೆಯ 2 ಮತ್ತು 3ನೇ ಕ್ಲಿನಿಕಲ್ ಪ್ರಯೋಗ ನಡೆದಿತ್ತು.