ಮಕ್ಕಳಲ್ಲಿ ಟಿ.ಬಿ. ಕ್ರೀಮಿಗಳ ಪ್ರವೇಶವಾಗಿ, ಕೆಲ ಲಕ್ಷಣಗಳನ್ನು ತೋರಿವಾಸಿಯಾದಾಗ ಆ ಸ್ಥಿತಿಯನ್ನು ಪ್ರೈಮರಿ ಇನ್ ಫೆಕ್ಷನ್ ಎನ್ನುತ್ತಾರೆ. ಇದು ಹೀಗೆ ಮರೆಯಾಗಿ ಕೆಲವರಿಗೆ 10-15 ವರ್ಷಗಳ ನಂತರ ಅಸಲು ರೋಗವಾಗಿ ಹೊರಹೊಮ್ಮಿಸಬಹುದು.
ಪ್ರೈಮರಿ ಕಾಂಪ್ಲೆಕ್ಸ್
ಟಿ.ಬಿ. ಚಿಕಿತ್ಸೆಗೆ ಅಗತ್ಯವಿದೆಯೇ? :-
ಮಕ್ಕಳಿಗೆ ಟಿ.ಬಿ. ರೋಗಾಣುಗಳು ಪ್ರವೇಶಿಸಿ, ಪ್ರತ್ಯೇಕವಾಗಿ ರೋಗಲಕ್ಷಣಗಳಿಲ್ಲದ ಸ್ಥಿತಿಯನ್ನು ಪ್ರೈಮರಿ ಕಾಂಪ್ಲೆಕ್ಸ್ ಎನ್ನುತ್ತಾರೆ. ಕ್ಷಯಾ ರೋಗದ ಲಕ್ಷಣಗಳು 90%ರಷ್ಟು ಮಕ್ಕಳಲ್ಲಿ ಬೆಳವಣಿಗೆ ಆಗುವುದಿಲ್ಲ. ಆ ಕ್ಷಯದ ರೋಗಾಣುಗಳು ಮಾತ್ರ ಇರುತ್ತದೆ. ಇವು ಇದ್ದ ಮಾತ್ರಕ್ಕೆ ಯಾವುದೇ ಔಷಧಿ ಅಗತ್ಯವಿಲ್ಲ. ರೋಗಲಕ್ಷಣವನ್ನುಂಟುಮಾಡಿ ಮಗುವನ್ನು ಕಾಡಿಸುತ್ತಿದ್ದಾಗ ಮಾತ್ರ ಟಿ.ಬಿ. ಔಷಧಿಗಳು ಬಳಸಬೇಕು.
ಪ್ರಯೋಗಾಲಯದ ಪರೀಕ್ಷೆಗಳು :-
ಮಗುವಿಗೆ ಎಡಬಿಡದೆ ಜ್ವರ ಬರುತ್ತಿದ್ದು, ಕ್ಷೀಣಿಸುತ್ತಿದ್ದರೆ ಟಿ.ಬಿ. ಇದೆ ಎಂದು ಅನುಮಾನಿಸಬಹುದು. ದೊಡ್ಡವರಲ್ಲಿ ಶ್ವಾಸಕೋಶಗಳಿಗೆ ಟಿ.ಬಿ. ಬಂದು ಕೆಮ್ಮು, ಕಫಇದ್ದರೆ, ಕಫಪರೀಕ್ಷೆ ಮಾಡುತ್ತಾರೆ. ಕಫದಲ್ಲಿ ಕ್ಷಯ ರೋಗಾಣುಗಳು ಕಂಡು ಬಂದರೆ ನೂರಕ್ಕೆ ನೂರರಷ್ಟು ಕ್ಷಯವೆಂದು ನಿರ್ಧರಿಸಬಹುದು. 5 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು, ಕಫ ಇದ್ದರೂ ಕೂಡ, ಕಫ ಪರೀಕ್ಷೆಯ ಮೂಲಕ ಕ್ಷಯವನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಮಕ್ಕಳು ಕೆಮ್ಮುತ್ತಿದ್ದಾಗ ಕಫ ಬಂದರೂ ಕೂಡ ಉಗಿಯದೆ ನುಂಗಿ ಬಿಡುತ್ತಾರೆ.
ಚಿಕ್ಕ ಮಕ್ಕಳಿಗೆ ಟಿ.ವಿ. ಬಂದಿದೆಯೆಂದು ಅನುಮಾನಿಸಿದಾಗ ಮಾಂಟೋ ಟೆಸ್ಟ್ ಮಾಡಿದರೆ ರೋಗ ನಿರ್ಧಾರವಾಗುತ್ತದೆ. ಮಂಟೋ ಟೆಸ್ಟ್ ನ್ನು ಪಿ.ಪಿ.ಡಿ. ಟೆಸ್ಟ್ ಎಂದು ಕರೆಯುತ್ತಾರೆ. ಈ ಪರೀಕ್ಷೆಯಲ್ಲಿ, ಮೊಣಕೈ ಚರ್ಮದ ಪೊರೆಯೋಳಕ್ಕೆ ಇಂಜೆಕ್ಷನ್ ಕೊಡುತ್ತಾರೆ. 48-72 ಗಂಟೆಗಳ ನಂತರ ಇಂಜೆಕ್ಷನ್ ಕೊಟ್ಟ ಭಾಗದಲ್ಲಿ 10 ಮಿ.ಮೀ.ಗಿಂತಲೂ ಹೆಚ್ಚು ಕೆಂಪನೆಯ ಬಾವು ಅಂದರೆ ಟಿ.ವಿ. ಇದೆ ಎಂದು ನಿರ್ಧರಿಸುತ್ತಾರೆ. ಅದಕ್ಕಿಂತ ಕಡಿಮೆ ಇದ್ದರೆ ಟಿ.ಬಿ. ಎಂದು ಪರಿಗಣಿಸುವುದಿಲ್ಲ. ಬಿ.ಸಿ.ಜಿ ವ್ಯಾಕ್ಸಿನ್ ಕೊಟ್ಟ ವರ್ಷದೊಳಗೆ ಮಂಟೋ ಟೆಸ್ಟ್ ಮಾಡಿದರೆ ಟಿ.ಬಿ. ಇಲ್ಲದಿದ್ದರೂ ಕೂಡ 10 ಮಿ.ಮೀ.ಗಿಂತಲೂ ಹೆಚ್ಚು ಬಾವು ಬರುತ್ತದೆ. ಆದ್ದರಿಂದ ಬಿ.ಸಿ.ಜಿ ಕೊಟ್ಟ ವರ್ಷದೊಳಗೆ ಈ ಪರೀಕ್ಷೆಯಿಂದ ಪ್ರಯೋಜನವಿಲ್ಲ. ಚಿಕ್ಕ ಮಕ್ಕಳಿಗೆ ಟಿ.ಬಿ ರೋಗವನ್ನು ನಿರ್ಧರಿಸಲು ಇನ್ನೂ ಕೆಲವು ಪರೀಕ್ಷೆಗಳಿವೆ. ಪಿ.ಸಿ.ಆರ್. ಪರೀಕ್ಷೆಯಿಂದ ರೋಗವನ್ನು ನಿರ್ಧರಿಸಬಹುದು.
ಚಿಕಿತ್ಸೆ :-
ಮಕ್ಕಳಿಗೆ ಟಿ.ಬಿ. ಕಂಡು ಬಂದ ನಂತರ ಆರು ತಿಂಗಳವರೆಗೆ ಔಷಧಿಯನ್ನು ಬಿಡದೆ ಸೇವಿಸಬೇಕು. ಕೆಲ ತಾಯಂದಿರು ಔಷಧಿಯನ್ನು ಪೂರ್ಣಗೊಳಿಸದೆ ಮಧ್ಯದಲ್ಲಿ ನಿಲ್ಲಿಸಿಬಿಡುತ್ತಾರೆ. ಅಂತಹ ಮಕ್ಕಳಿಗೆ ಔಷಧಿ ಕೊಡಬೇಕಾಗುತ್ತದೆ.
ಟಿ.ಬಿ. ಚಿಕಿತ್ಸೆಗಾಗಿ ಐಸೋನೈಡ್, ಪೆರಿಜೆನಿಮೈಡ್, ಇಥಂಬುಟಾಲ್, ಇಫಾಂಪಿಸಿನ್, ಸ್ಟ್ರೆಪ್ಟೋಮೈಸಿನ್, ಥೈಸೆಟಜೋನ್ ಗುಳಿಗೆಗಳು ಬಳಸುತ್ತಾರೆ. ಈ ಗುಳಿಗೆಗಳ ಪ್ರಮಾಣವನ್ನು ಮಗುವಿನ ವಯಸ್ಸು ಮತ್ತು ತೂಕಕ್ಕನುಗುಣವಾಗಿ ನಿರ್ಧರಿಸುತ್ತಾರೆ. ಮೊದಲ ಎರಡು ತಿಂಗಳು ನಾಲ್ಕು ವಿಧದ ಸಂಯುಕ್ತ ಔಷಧಿಗಳನ್ನು ಬಳಸುತ್ತಾರೆ. ಆ ನಂತರ ನಾಲ್ಕು ತಿಂಗಳವರೆಗೆ ಎರಡು ಸಂಯುಕ್ತ ಔಷಧಿಗಳನ್ನು ಬಳಸುತ್ತಾರೆ.
ಔಷಧಿಗಳನ್ನ ಪ್ರತಿ ದಿನವೂ ಬಳಸಬೇಕು. ಇದೀಗ ಡಾಟ್ಸ್ ಟ್ರೀಟ್ಮೆಂಟ್ ಬಂದಿದೆ. ಇದರ ಪ್ರಕಾರ ಪ್ರತಿದಿನ ಬಳಸಬೇಕಾಗುತ್ತದೆ. ದೊಡ್ಡವರಂತೆಯೇ ಮಕ್ಕಳಿಗೂ ಡಾಟ್ಸ್ ಟ್ರೀಟ್ಮೆಂಟ್ ಮಾಡಬಹುದು. ಮಕ್ಕಳಿಗೆ ಯಾವ ಔಷಧಿಗಳನ್ನು, ಯಾವ ವಿಧಾನದಲ್ಲಿ ಬಳಸಬೇಕೆಂಬುದು ವೈದ್ಯರು ನಿರ್ಧರಿಸುತ್ತಾರೆ.
ಮುಕ್ತಾಯ