ಮನೆ ರಾಜ್ಯ ವೈಟ್‌ ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಪ್ರಧಾನಿ ಚಾಲನೆ

ವೈಟ್‌ ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಪ್ರಧಾನಿ ಚಾಲನೆ

0

ಬೆಂಗಳೂರು: ಬಹುನಿರೀಕ್ಷಿತ ವೈಟ್‌ ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ವೈಟ್‌ಫೀಲ್ಡ್‌ ಮೆಟ್ರೊ ರೈಲು ನಿಲ್ದಾಣಕ್ಕೆ ತೆರಳಿ ಉದ್ಘಾಟನೆ ನೆರವೇರಿಸಿದ ಬಳಿಕ ಟೋಕನ್ ಪಡೆದು ರೈಲಿನಲ್ಲಿ ಪ್ರಯಾಣ ಮಾಡಿದರು. ಮೆಟ್ರೊ ರೈಲು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಕುಳಿತು ಮಾತುಕತೆ ನಡೆಸಿದರು.

ರಾಜ್ಯಪಾಲ ಥಾವರ್‌ಚಾಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಜತೆಯಲ್ಲಿದ್ದರು.

ವೈಟ್‌’ಫೀಲ್ಡ್‌’ನಿಂದ ಕೆ.ಆರ್‌.ಪುರ ತನಕ 13.71 ಕಿಲೋ ಮೀಟರ್ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಭಾನುವಾರದಿಂದ ಆರಂಭವಾಗಲಿದೆ. ದೇಶದಲ್ಲೇ ಅತೀ ದೊಡ್ಡ ಮೆಟ್ರೊ ಜಾಲ ಹೊಂದಿರುವ ನಗರ ಎಂದರೆ ದೆಹಲಿಯಾಗಿದ್ದು, ಎರಡನೇ ಸ್ಥಾನದಲ್ಲಿ ಹೈದರಾಬಾದ್ ಇತ್ತು. 69.66 ಕಿಲೋ ಮೀಟರ್ ಮೆಟ್ರೊ ಮಾರ್ಗವನ್ನು ‘ನಮ್ಮ ಮೆಟ್ರೊ’ ಹೊಂದಿದಂತಾಗಿದ್ದು, ಹೈದರಾಬಾದ್‌ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಇದಕ್ಕೂ ಮುನ್ನ ಒಂದು ಕಿಲೋ ಮೀಟರ್‌ ನಷ್ಟು ರೋಡ್‌ ಶೋ ನಡೆಸಿದ ನರೇಂದ್ರ ಮೋದಿ ಅವರನ್ನು ನೋಡಲು ರಸ್ತೆ ಬದಿಯಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಮೋದಿ, ಮೋದಿ ಎಂಬ ಘೋಷಣೆ ಮೊಳಗಿಸಿದರು.

ಹಿಂದಿನ ಲೇಖನರಾಹುಲ್ ಗಾಂಧಿಯನ್ನು ಅನರ್ಹ ಮಾಡಿರುವುದು ಉದ್ದೇಶಪೂರ್ವಕ: ಎಚ್.ವಿಶ್ವನಾಥ್
ಮುಂದಿನ ಲೇಖನಮೈಸೂರು:  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನೆ ಪ್ರತಿಮೆ ಅನಾವರಣಗೊಳಿಸಿದ ರಘು ಕೌಟಿಲ್ಯ