ಮನೆ ರಾಜಕೀಯ ಉಕ್ರೇನ್ ನಿಂದ ಕನ್ನಡಿಗ ನವೀನ್ ಮೃತದೇಹ ತರಲು ಪ್ರಧಾನಿ ಸೂಚನೆ

ಉಕ್ರೇನ್ ನಿಂದ ಕನ್ನಡಿಗ ನವೀನ್ ಮೃತದೇಹ ತರಲು ಪ್ರಧಾನಿ ಸೂಚನೆ

0

ನವದೆಹಲಿ: ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಸಾವಿಗೀಡಾದ ಕನ್ನಡಿಗ ಹಾವೇರಿಯ ನವೀನ್ ಮೃತದೇಹವನ್ನು ಶೀಘ್ರವಾಗಿ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಧಾನಿ ಅವರು ಭಾನುವಾರ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದು, ನವೀನ್ ಉಕ್ರೇನ್-ರಷ್ಯಾ ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಪ್ರಮುಖವಾಗಿ ಭಾರತದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲಾಯಿತು. ಪ್ರಸ್ತುತ ಜಾಗತಿಕ ಸನ್ನಿವೇಶದ ಬಗ್ಗೆಯೂ ಚರ್ಚಿಸಲಾಗಿದೆ.

ಸಭೆಯಲ್ಲಿ ರಕ್ಷಣಾ ಯಂತ್ರಗಳಲ್ಲಿ ಬಳಸುತ್ತಿರುವ ಹೊಸ ತಂತ್ರಜ್ಞಾನದ ಬಗ್ಗೆ ಹಾಗೂ ಯಾವ ಯಂತ್ರಗಳಲ್ಲಿ ವಿದೇಶಿ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಪ್ರಧಾನಿ ಕೇಳಿದರೆನ್ನಲಾಗುತ್ತಿದೆ.

ಬಳಿಕ ಸಭೆಯಲ್ಲಿ ಪ್ರಧಾನಿ, ಎಲ್ಲಾ ಸಾಧನಗಳನ್ನು ಇತ್ತೀಚಿನ ತಂತ್ರಜ್ಞಾನದೊಂದಿಗೆ ಸಂಪರ್ಕಿಸಬೇಕು ಮತ್ತು ಗರಿಷ್ಠ ತಂತ್ರಜ್ಞಾನವು ಮೇಕ್ ಇನ್ ಇಂಡಿಯಾ ಆಗಿರುವಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಭೆಯಲ್ಲಿ ಪ್ರಧಾನಿಯವರು ಆಪರೇಷನ್ ಗಂಗಾದ ಬಗ್ಗೆಯೂ ಪರಿಶೀಲನೆ ನಡೆಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಎನ್ಎಸ್ಎ ಅಜಿತ್ ದೋವಲ್ ಮತ್ತು ವಿದೇಶಾಂಗ ವ್ಯವಹಾರಗಳ ಅನೇಕ ಹಿರಿಯ ಅಧಿಕಾರಿಗಳು ಮತ್ತು ಹಣಕಾಸು ಮಂತ್ರಿಗಳು ಇದರಲ್ಲಿ ಉಪಸ್ಥಿತರಿದ್ದರು. ಉನ್ನತ ಮಟ್ಟದ ಸಭೆಯಲ್ಲಿ ಮೂರು ಸೇನೆಗಳ ಮುಖ್ಯಸ್ಥರೂ ಸಹ ಭಾಗವಹಿಸಿದ್ದರು.