ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ಭಾಗವಹಿಸಿದರು.
ಇದೇ ವೇಳೆ ಅವರು ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಥ್ ಕೊಟ್ಟರು.
ಇದಕ್ಕೂ ಮುನ್ನ ತ್ರಿವೇಣಿ ಸಂಗಮದಲ್ಲಿ ಬೋಟ್ನಲ್ಲಿ ಆದಿತ್ಯನಾಥ್ ಅವರ ಜೊತೆ ಮೋದಿ ಅವರು ಕೆಲಕಾಲ ಸಂಚರಿಸಿದರು. ಆದಿತ್ಯನಾಥ್ ಅವರು ಮೋದಿ ಅವರಿಗೆ ಕುಂಭಮೇಳದಲ್ಲಿ ನೀಡಲಾದ ವಿವಿಧ ಸೌಕರ್ಯಗಳ ಬಗ್ಗೆ ವಿವರಿಸಿದರು.
ಮೋದಿ ಅವರ ಪುಣ್ಯ ಸ್ನಾನದ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ ಹಾಗೂ ಕುಂಭನಗರಿಯಲ್ಲಿ ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು.
ಜನವರಿ 13ರಂದು ಕುಂಭಮೇಳ ಪ್ರಾರಂಭವಾಗಿದೆ. ಇದುವರೆಗೆ 20 ಕೋಟಿಗೂ ಅಧಿಕ ಜನ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರುವರಿ 26ರಂದು ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ.














