ಮನೆ ಸುದ್ದಿ ಜಾಲ ಎಲ್ಲಾ ಭಾರತೀಯರಿಗೆ ವಿಜಯದಶಮಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಎಲ್ಲಾ ಭಾರತೀಯರಿಗೆ ವಿಜಯದಶಮಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

0

ನವದೆಹಲಿ : ಎಲ್ಲಾ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯದಶಮಿಯ ಶುಭಾಶಯ ಕೋರಿದ್ದಾರೆ.

ವಿಜಯದಶಮಿಯು ದುಷ್ಟ ಮತ್ತು ಸುಳ್ಳಿನ ಮೇಲೆ ಒಳ್ಳೆಯದು ಮತ್ತು ಸದಾಚಾರದ ವಿಜಯವನ್ನು ಆಚರಿಸುತ್ತದೆ. ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿ ಯಾವಾಗಲೂ ನಮ್ಮ ಮಾರ್ಗಗಳಿಗೆ ಮಾರ್ಗದರ್ಶನ ನೀಡಲಿ ಎಂದು ಆಶಿಸಿದ್ದಾರೆ. ಸಮಸ್ತ ಭಾರತೀಯರಿಗೆ ವಿಜಯ ದಶಮಿಯ ಶುಭಾಶಯಗಳು ಎಂದು ಎಕ್ಸ್‌ ಖಾತೆಯ ಮೋದಿ ತಿಳಿಸುವ ಮೂಲಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುಜರಾತ್‌ನ ಭುಜ್‌ಗೆ ಆಗಮಿಸಿ, ಸೇನಾ ನೆಲೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ದಸರಾ ಸಂಭ್ರಮಾಚರಣೆ ಮಾಡಿದ್ದಾರೆ.