ಬೆಂಗಳೂರು: ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದೆ. ಪ್ರಧಾನಿ ಮೋದಿಯವರಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಜೊತೆಯಾಗಿದ್ದಾರೆ.
ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 13 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಸಾಗಲಿದೆ.
ಪ್ರಧಾನಿ ಸಾಗಿ ಹೋಗುವ ಮಾರ್ಗದ ಇಕ್ಕೆಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಈಗಾಗಲೇ ಜಮಾಯಿಸಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಮುಂಭಾಗ ಬೃಹತ್ ರಂಗೋಲಿ ಹಾಕಿ ಮೊದಿಗೆ ಸ್ವಾಗತ ಕೋರಲಾಗುತ್ತಿದೆ.
ಪ್ರಧಾನಿ ಮೋದಿ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನಿಂದ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂದರೆ ಬರೋಬ್ಬರಿ 26 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನವನ್ನೂ ಮೋದಿ ಸಾಗುವ ಮಾರ್ಗದಲ್ಲಿ ವ್ಯವಸ್ಥೆಮಾಡಲಾಗಿದೆ.
ಪ್ರಧಾನಿ ಮೋದಿ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಸಾರಕ್ಕಿ ಜಂಕ್ಷನ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ರಾಮಕೃಷ್ಣ ಆಶ್ರಮ, ಮಕ್ಕಳ ಕೂಟ, ಟೌನ್ ಹಾಲ್, ಕಾವೇರಿ ಭವನ, ಮೆಜೆಸ್ಟಿಕ್, ಮಾಗಡಿ ರೋಡ್, ಜಿಟಿ ವರ್ಲ್ಡ್ ಮಾಲ್, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ ರ್ಯಾಲಿಯಲ್ಲಿ ಆಗಮಿಸಲಿದ್ದಾರೆ.
ವಿಶೇಷ ಪೊಲೀಸ್ ಬಂದೋಬಸ್ತ್ ಆಯೋಜಿಸಿರುವುದು ಮಾರ್ಗದಲ್ಲಿ ಕಂಡು ಬರುತ್ತಿದೆ.
ಅಭಿಮಾನಿಗಳು ಪಕ್ಷದ ಬಾವುಟ ಹಿಡಿದು, ಶಾಲು ಧರಿಸಿ ಸಂಭ್ರಮದಿಂದ ಮೋದಿ ಆಗಮನಕ್ಕೆ ಕಾಯುತ್ತಿದ್ದಾರೆ. ಪ್ರಧಾನಿ ಸಾಗಿಬರುವ ಮಾರ್ಗದುದ್ದಕ್ಕೂ ಹೂವಿನ ಮಳೆಗರೆಯಲು ಜನ ಕಾದು ನಿಂತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಾಗಿ ಹೋಗುವ ಮಾರ್ಗದಲ್ಲಿ ಜಯನಗರ ಬಳಿ ಭರತನಾಟ್ಯ ಕಲಾವಿದರು ನೃತ್ಯ ಪ್ರದರ್ಶನ ನಡೆಸಲು ಕಾದಿದ್ದಾರೆ.
ಒಟ್ಟು 26 ಕಿ.ಮೀ. ಉದ್ದನೇ ಮಾರ್ಗದಲ್ಲಿ ಮೋದಿ ಸಾಗಲಿದ್ದಾರೆ. ಬೆಳಗ್ಗೆ 10 ರಿಂದ 12ರವರೆಗೆ ನಡೆಯಲಿದೆ. ನೃತ್ಯ, ಸಾಂಸ್ಕೃತಿಕ ವೈಭವ, ಸಾಂಪ್ರದಾಯಿಕ ಕಲಾ ಪ್ರದರ್ಶನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಸಿರಸಿ ವೃತ್ತ ಸಮೀಪ ಪೌರ ಕಾರ್ಮಿಕರು ಮೋದಿ ಆಗಮನಕ್ಕೆ ಕಾದು ನಿಂತಿದ್ದಾರೆ. ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಸಹ ಇದ್ದಾರೆ. ಮಾರ್ಗದಲ್ಲಿ ಮೋದಿ ಹತ್ತು ನಿಮಿಷ ನಿಂತು ಪೌರಕಾರ್ಮಿಕರ ಅಹವಾಲು ಆಲಿಸುವ ಸಾಧ್ಯತೆ ಇದೆ. ಚಾಮರಾಜಪೇಟೆಯಲ್ಲಿ ಬೃಹತ್ ಹನುಮಾನ್ ವಿಗ್ರಹವನ್ನು ಇರಿಸಿ ಸ್ವಾಗತಿಸಲಾಗುತ್ತಿದೆ. ಇನ್ನು ಜೆ.ಪಿ. ನಗರದಲ್ಲಿ ಮೋದಿ ರ್ಯಾಲಿ ಆರಂಭವಾಗುವ ಮಾರ್ಗದಲ್ಲಿ ಆಂಜನೇಯ ವೇಶಧಾರಿ ಒಬ್ಬರು ಗಮನ ಸೆಳೆಯುತ್ತಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್’ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್ವರೆಗೆ 26.5 ಕಿ.ಮೀ ರೋಡ್ ಶೋ ನಡೆಸುತ್ತಾರೆ.
ಭಾನುವಾರ ಬೆಳಿಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದ ವರೆಗೆ 8 ಕಿ.ಮೀ ರೋಡ್ ಶೋ ನಡೆಯಲಿದೆ.
10.00 ಬೆಳಗ್ಗೆ – ಸೋಮೇಶ್ವರ ಸಭಾ ಭವನ ,10.10 – ಜೆಪಿ ನಗರ 5ನೇ ಹಂತ, 10.20 – ಜಯನಗರ 5ನೇ ಬ್ಲಾಕ್, 10.30 – ಜಯನಗರ 4ನೇ ಬ್ಲಾಕ್, 10.40 – ಸೌತ್ ಎಂಡ್ ಸರ್ಕಲ್, 10.45 – ಮಾಧವರಾವ್ ವೃತ್ತ, 11.00 – ರಾಮಕೃಷ್ಣ ಆಶ್ರಮ, 11.05 – ಉಮಾ ಥಿಯೇಟರ್ ಸಿಗ್ನಲ್, 11.15 – ಮೈಸೂರು ಸಿಗ್ನಲ್ 11.25 – ಟೋಲ್ ಗೇಟ್ ಸಿಗ್ನಲ್, 11.35 – ಗೋವಿಂದರಾಜನಗರ, 11.45 – ಮಾಗಡಿ ರೋಡ್ ಜಂಕ್ಷನ್, 12.00 – ಶಂಕರಮಠ ಚೌಕ, 12.20 – ಮಲ್ಲೇಶ್ವರ ವೃತ್ತ, 12.30 – ಸಂಪಿಗೆ ರಸ್ತೆ 18ನೇ ಅಡ್ಡ ರಸ್ತೆ ಜಂಕ್ಷನ್.