ಮನೆ ರಾಜಕೀಯ ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

0

ಗುಜರಾತ್:  ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ತೆರಳಿ, ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.  

ಅಲ್ಲದೆ, ಅವರ ಜತೆ ಕುಳಿತು ಊಟ ಮಾಡುವ ಮೂಲಕ ಒಂದಷ್ಟು ಸಮಯ ಕಳೆದಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿರುವ ನಿವಾಸಕ್ಕೆ ತೆರಳಿದ ಪ್ರಧಾನಿಯವರು, ತಾಯಿಯ ಆರೋಗ್ಯ ವಿಚಾರಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ ಹೀರಾಬೆನ್‌ ಅವರ ಆಶೀರ್ವಾದ ಪಡೆದರು. ಅಲ್ಲದೆ, ಒಟ್ಟಿಗೆ ಕುಳಿತು ಊಟ ಮಾಡುವ ಹಾಗೂ ಯೋಗಕ್ಷೇಮ ವಿಚಾರಿಸುವ ಮೂಲಕ ಒಂದಷ್ಟು ಸಮಯವನ್ನು ತಾಯಿ ಜತೆ ಕಳೆದರು. ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾದ ಫೋಟೊಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ದೇಶದ ಬಲಿಷ್ಠ ನಾಯಕರಾದ ಮೋದಿ ಅವರ ತಾಯಿಯಾಗಿದ್ದರೂ ಶತಾಯುಷಿ ಹೀರಾಬೆನ್‌ ಅವರು ಸರಳವಾಗಿ ಜೀವನ ಸಾಗಿಸುತ್ತಿದ್ದಾರ. ಅವರು ಬಹುತೇಕ ಸಲ ಆಟೋದಲ್ಲಿಯೇ ಸಂಚರಿಸುತ್ತಾರೆ. ಯಾವುದೇ ಕಚೇರಿಗೆ ತೆರಳಿದರೆ ಸರತಿ ಸಾಲಿನಲ್ಲಿಯೇ ನಿಂತು ಕೆಲಸ ಮಾಡಿಸಿಕೊಂಡ ಫೋಟೊಗಳು ಇದಕ್ಕೂ ಮೊದಲು ಲಭ್ಯವಾಗಿವೆ.

ತಾಯಿಯನ್ನು ಭೇಟಿಯಾಗುವ ಮೊದಲು ನರೇಂದ್ರ ಮೋದಿ ಅವರು ಅಹ್ಮದಾಬಾದ್‌ನಲ್ಲಿ ನಡೆದ ಗುಜರಾತ್‌ ಪಂಚಾಯತ್‌ ಮಹಾಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಗುಜರಾತ್‌ ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿವರೆಗೆ ರೋಡ್‌ ಶೋ ಸಹ ನಡೆಸಿದರು. ಇದೇ ವರ್ಷದ ಕೊನೆಯಲ್ಲಿ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಯಲಿದೆ.