ವಿಟ್ಲ: ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬಿಟ್ಟು ಚರಂಡಿ ದಾಟಿ ಬೃಹತ್ ಕಲ್ಲಿನ ಮೇಲೇರಿದ ಪರಿಣಾಮ ಓರ್ವ ಯುವತಿ ಕಾಲಿಗೆ ಗಂಭೀರ ಗಾಯವಾಗಿದೆ.
ಇಂದು ಬೆಳಿಗ್ಗೆ ವಿಟ್ಲದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಕೆಲಿಂಜದಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ.
ಅಪಘಾತದಿಂದಾಗಿ ಕೆಲ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಾವಾಗಿದ್ದು, ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ.














