ಮನೆ ಸುದ್ದಿ ಜಾಲ ಹೊತ್ತಿ ಉರಿದ ಚಲಿಸುತ್ತಿದ್ದ ಖಾಸಗಿ ಬಸ್: ಪಾರಾದ ಪ್ರಯಾಣಿಕರು

ಹೊತ್ತಿ ಉರಿದ ಚಲಿಸುತ್ತಿದ್ದ ಖಾಸಗಿ ಬಸ್: ಪಾರಾದ ಪ್ರಯಾಣಿಕರು

0

ಶ್ರೀರಂಗಪಟ್ಟಣ:ಬೆಂಗಳೂರು-ಮೈ ಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹೊತ್ತಿ ಉರಿದ ಘಟನೆ ತಾಲೂಕಿನ ಗಣಂಗೂರು ಬಳಿ ನಡೆದಿದೆ. ಬೆಂಗಳೂರಿಂದ ಮೈಸೂರಿಗೆ ಮದುವೆ ಜನರನ್ನು ತುಂಬಿ ತೆರಳುತ್ತಿದ್ದ ಖಾಸಗಿ ಬಸ್‌ನ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡು ಮದುವೆ ಸಮಾರಂಭಕ್ಕೆ ಸಂಬಂಧಿಕರನ್ನು ತುಂಬಿಕೊಂಡು ತೆರಳುತ್ತಿದ್ದ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬಸ್‌ನಲ್ಲಿದ್ದ ೩೩ ಮಂದಿ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

Join Our Whatsapp Group


ಬಸ್ ಇಂಜಿನ್ ಶಾರ್ಟ್ ಸರ್ಕ್ಯೂಟ್ ಹೊಗೆ ಬರ್ತಿದ್ದಂತೆ ಚಾಲಕನಿಗೆ ಬಸ್ ನಿಲ್ಲಿಸುವಂತೆ ಸೂಚಿಸಿರುವ ಪ್ರಯಾಣಿಕರು ಕೂಗಿಕೊಂಡಿದ್ಧಾರೆ.
ನಂತರ ಬಸ್ ನಿಂದ ಕೆಳಗೆ ಇಳಿಯುತ್ತಂತೆ ಮತ್ತಷ್ಟು ಬೆಂಕಿ ಆವರಿಸಿಕೊಂಡು ಟೈಯರ್‌ಸೇರಿ ಇತರೆಡೆ ಬೆಂಕಿ ಹರಡಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಇತರ ವಾಹನಗಳ ಪ್ರಯಾಣಿಕರು ಆಗಮಿಸಿ ಕೂಗಿಕೊಳ್ಳುವುದರೊಳಗೆ ಕ್ಷಣಾರ್ಧದಲ್ಲಿ ಬಸ್ ಸಂಪೂರ್ಣ ಬೆಂಕಿ ಆವರಿಸಿಕೊಂಡು ಆಕಾಶದೆತ್ತರದಲ್ಲಿ ಹೊಗೆ ಕಾಣಿಸಿಕೊಂಡಿದೆ.

ತಕ್ಷಣ ಎಚ್ಚೆತ್ತುಕೊಂಡ ಪರಿಣಾಮ ಬಸ್ ನಲ್ಲಿದ್ದ ಮೂವತ್ತಕ್ಕು ಹೆಚ್ಚು ಮಂದಿ ಬಸ್ ನಿಂದ ಹೊರ ಬಂದು ಪ್ರಾಣಾಪಾಯದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಸ್ಥಳೀಯರಿಂದ ಮಾಹಿತಿ ತಿಳಿದ ಪೊಲೀಸರು ಹಾಗೂ ಶ್ರೀರಂಗಪಟ್ಟಣ ಅಗ್ನಿ ಶಾಮಕ ದಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು,ಅಷ್ಡರಲ್ಲಾಗಲೇ ಬಸ್ ಭಾಗಶಃ ಬಸ್ ಸುಟ್ಟುಕರಕಲಾಗಿದೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಗುರುರಾಜ್,ಅಗ್ನಶಾಮಕ ಠಾಣಾಧಿಕಾರಿ ಪರಮೇಶ್, ತೇಜೋಮೂರ್ತಿ,ಅನಂತ್,ರವಿ, ಮುನವರ ಸೇರಿದಂತೆ ಇತರ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿದ್ದು,ಶ್ರೀರಂಗಪಟ್ಟಣ ಗ್ರಾಮಾಂತರ ಸಿಪಿಐ ಬಿ.ಜಿ. ಕುಮಾರ್ ನೇತೃತ್ವದ ಪೊಲೀಸರ ತಂಡ ಪರಿಶೀಲನೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.