ಮುಂಬೈ (Mumbai): ‘ಕಣ್ಸನ್ನೆ ಬೆಡಗಿ’ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೆಂಪು ಬಣ್ಣದ ಉಡುಪು ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊಗಳನ್ನು ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ಪ್ರಾಜೆಕ್ಟ್ವೊಂದರ ನಿಮಿತ್ತ ಪ್ರಿಯಾ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಪ್ರಿಯಾ ವಾರಿಯರ್ ಕಣ್ಣು ಮಿಟುಕಿಸುವ ಮೂಲಕವೇ ರಾತ್ರಿ ಬೆಳಗಾಗುವುದರಲ್ಲಿ ಭಾರತದ ಸೆನ್ಸೆಷನ್ ಹುಡುಗಿ ಎನ್ನಿಸಿಕೊಂಡರು. ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ದೃಶ್ಯದಲ್ಲಿ ಆಕೆ ಕಣ್ಣು ಮಿಟುಕಿಸಿದ್ದು, ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೊತ್ತಿಸಿತ್ತು. ಆ ಕಣ್ಸನ್ನೆಯೇ ದೇಶದಾದ್ಯಂತ ಆಕೆಗೆ ಅಭಿಮಾನಿ ಬಳಗ ಸೃಷ್ಟಿ ಆಗುವಂತೆ ಮಾಡಿತ್ತು.
ತೆಲುಗಿನ ‘ಚೆಕ್’ ಸಿನಿಮಾದಲ್ಲಿ ನಟ ನಿತಿನ್, ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಪ್ರಿಯಾ ವಾರಿಯರ್ ಕಾಣಿಸಿಕೊಂಡಿದ್ದರು. ‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಪ್ರಿಯಾ ವಾರಿಯರ್ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ.