ಮನೆ ರಾಜ್ಯ ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಿದ್ರೆ ಜೈಲಿಗೆ ಹೋಗ್ತಿದ್ರು – ಕಿರಣ್ ಮಜುಂದಾರ್ ಷಾಗೆ ಪ್ರಿಯಾಂಕ್...

ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಿದ್ರೆ ಜೈಲಿಗೆ ಹೋಗ್ತಿದ್ರು – ಕಿರಣ್ ಮಜುಂದಾರ್ ಷಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು

0

ಬೆಂಗಳೂರು : ಯುಪಿ, ಮಹಾರಾಷ್ಟ್ರದಲ್ಲಿ ಈ ರೀತಿ ಟೀಕೆ ಟಿಪ್ಪಣಿ ಮಾಡಲಿ ನೋಡೋಣ, ಅಲ್ಲಿ ಮಾಡಿದ್ರೆ ಜೈಲಿಗೆ ಹೋಗುತ್ತಿದ್ರು ಎಂದು ಬೆಂಗಳೂರಿನ ರಸ್ತೆಗುಂಡಿಗಳು ಹಾಗೂ ಕಸದ ಸಮಸ್ಯೆ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಟ್ವೀಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಯೊಬ್ಬರ ಅಭಿಪ್ರಾಯವನ್ನ ಕಿರಣ್ ಮಜುಂದಾರ್ ಟ್ವೀಟ್ ಮಾಡಿದ್ದಾರೆ. ಮೆಸೇಜ್ ಮಾಡಿ ಸಲಹೆ ಕೊಡಲಿ, ಬೇರೆ ಸರ್ಕಾರ ಇದ್ದಾಗ ಹೀಗೆ ಆಗುತ್ತಾ? ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಲಿ ನೋಡೋಣ. ನಾವು ಕೇಳ್ತೀವಿ ಅಂತ ಹೀಗೆಲ್ಲಾ ಮಾಡ್ತಾರೆ. ಅಲ್ಲಿ ಮಾಡಿದರೆ ಜೈಲಿನಲ್ಲಿ ಇರ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಉದ್ಯಮಿಗಳು ಹೇಳಿದ್ದನ್ನು ನಾವು ಕೇಳ್ತೀವಲ್ಲಾ ಅದಕ್ಕೆ ಅವರು ಟೀಕೆ ಮಾಡ್ತಾರೆ. ನಿರಂತರವಾಗಿ ಒಂದೂವರೆ ತಿಂಗಳಿಂದ ಅನಿರೀಕ್ಷಿತ ಮಳೆ ಆಗ್ತಿದೆ. ಸ್ವಲ್ಪ ಸಮಯ ಬೇಕಾಗುತ್ತೆ ಅಂತಾ ಸಿಎಂ ಹೇಳಿದ್ದಾರೆ. ಸಲಹೆ ಪಡೆಯಲು ಸಮಿತಿ ಕೂಡ ಮಾಡಿದ್ದಾರೆ. ಡಿಟೇಲ್ ರೂಟ್ ಮ್ಯಾಪ್ ಮಾಡ್ತಿದ್ದಾರೆ.

ಟಾಸ್ಕ್‌ಫೋರ್ಸ್‌ ಮಾಡಿದಾಗ ಕಿರಣ್ ಮಜುಂದಾರ್, ಮೋಹನ್ ದಾಸ್ ಪೈ ಎಲ್ಲಾ ಇರುತ್ತಾರೆ. ಈ ಉದ್ಯಮಿಗಳದ್ದು ಅವರದ್ದೇ ಆದ ಕೊಡುಗೆ ಇದೆ. ಕಸ ಹಾಕೋರು ಯಾರು? ಮೇಲಿಂದ ಬಂದು ಬೀಳುತ್ತಾ? ನಾಗರಿಕರು ಜವಾಬ್ದಾರಾಗಬೇಕು, ಸಹಕಾರ ಕೊಡಬೇಕು ಎಂದು ಹೇಳಿದರು.

ಆಂಧ್ರಪ್ರದೇಶದ ಐಟಿ ಮಿನಿಸ್ಟರ್ ರಣಹದ್ದು ಥರ ಕಾಯ್ಕೊಂಡು ಇರುತ್ತಾರೆ. ಯಾರು ಎಲ್ಲಿಗೆ ಬರ್ತಾರೆ, ಎಲ್ಲಿಗೆ ಹೋಗ್ತಾರೆ ಎಂದು ಕಾಯ್ಕೊಂಡು ಕುಳಿತಿರುತ್ತಾರೆ. ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ಸಲಹೆ ಕೊಡಲ್ಲ, ಆ ನಿರೀಕ್ಷೆಯೂ ಇಲ್ಲ. ಈ ರೀತಿ ಆದ್ರೆ ಅನ್ಯ ರಾಜ್ಯದವರು ಉದ್ಯಮಿಗಳಿಗೆ ಆಹ್ವಾನ ಮಾಡೋದು ಸಹಜ ಅಲ್ಲವಾ? ಎಂದು ಕಿಡಿಕಾರಿದರು.