ಮನೆ ರಾಜ್ಯ ಪ್ರಿಯಾಂಕ್ ಖರ್ಗೆಗೆ ದುರ್ಬುದ್ದಿ.. ಜಗತ್ತಿನಲ್ಲಿ ಯಾರೂ ಬುದ್ದಿ ಹೇಳೋಕೆ ಅಗೊಲ್ಲ – ಸಿ.ಟಿ.ರವಿ

ಪ್ರಿಯಾಂಕ್ ಖರ್ಗೆಗೆ ದುರ್ಬುದ್ದಿ.. ಜಗತ್ತಿನಲ್ಲಿ ಯಾರೂ ಬುದ್ದಿ ಹೇಳೋಕೆ ಅಗೊಲ್ಲ – ಸಿ.ಟಿ.ರವಿ

0

ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ದುರ್ಬುದ್ದಿ ಇದೆ. ದುರ್ಬುದ್ದಿ ಇರೋ ಜನರಿಗೆ ಜಗತ್ತಿನಲ್ಲಿ ಯಾರೂ ಬುದ್ದಿ ಹೇಳೋಕೆ ಆಗೊಲ್ಲ‌ ಅಂತ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆದಿದ್ದಾರೆ.

ದೆಹಲಿ ಬಾಂಬ್ ಸ್ಪೋಟ ಕೇಂದ್ರದ ವೈಫಲ್ಯ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ದುರ್ಬುದ್ದಿ ಇರೋ ಜನರಿಗೆ ಜಗತ್ತಿನ ಯಾರೂ ಬುದ್ದಿ ಹೇಳೋಕೆ ಆಗೊಲ್ಲ‌. ಪ್ರಿಯಾಂಕ್ ಖರ್ಗೆಗೆ ಇರೋದು ದುರ್ಬುದ್ದಿ. ಮೂರ್ಖ ಬೇರೆ, ದುರ್ಬುದ್ದಿ ಇರೋನು ಬೇರೆ. ಮೂರ್ಖನಿಗೆ, ದುರ್ಬುದ್ದಿ ಇರೋರಿಗೆ ಬುದ್ದಿ ಹೇಳಿದರೆ, ಉಪಯೋಗ ಆಗೊಲ್ಲ ಅಂತ ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಇದ್ದಾಗ ನಿತ್ಯ ಸುದ್ದಿ ಆಗ್ತಿತ್ತು. ಅಹಮದಾಬಾದ್, ದೆಹಲಿ, ಹೈದರಾಬಾದ್‌ನಲ್ಲಿ ಬಾಂಬ್ ಸ್ಪೋಟ ಅಂತ ಸುದ್ದಿ ಆಗ್ತಿತ್ತು. ಆಗ ಭಯೋತ್ಪಾದಕರ ಪರ ಸಿಂಪತಿ ಇರೋ ಸರ್ಕಾರ ಇತ್ತು. ಈಗ ಭಯೋತ್ಪಾದಕರ ಬಗ್ಗೆ ಸಿಂಪತಿ ಇಲ್ಲದ ಬಿಜೆಪಿ ಸರ್ಕಾರ ಇದೆ. ಭಯೋತ್ಪಾದಕ ಯಾರನ್ನು ಉಳಿಸೋ ಪ್ರಶ್ನೆ ಇಲ್ಲ. ಉಳಿಸೋದು ಇಲ್ಲ ಅಂತ ತಿರುಗೇಟು ಕೊಟ್ಟರು.

ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಉತ್ತರ ಕೊಡ್ತು‌. ಪುಲ್ವಾಮ ಘಟನೆಗೆ ಸರ್ಜಿಕಲ್ ಸ್ಟ್ರೈಕ್ ಉತ್ತರ ಕೊಟ್ಟಿದೆ. ಮುಂಬೈ ದಾಳಿ ಘಟನೆ ಆದಾಗ ಭಯೋತ್ಪಾದಕನಿಗೆ ಬಿರಿಯಾನಿ ಕೊಟ್ಟು ಸಾಕಿದ್ರಿ ಪ್ರಿಯಾಂಕ್ ಖರ್ಗೆ ಅವರೇ. ನಿಮ್ಮ ರೀತಿ ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುವ‌ ರೀತಿ ಬಿಜೆಪಿ ಸರ್ಕಾರ ಮಾಡೊಲ್ಲ.

ಕುಕ್ಕರ್‌ನಲ್ಲಿ ಬಾಂಬ್ ಇಟ್ಟವನನ್ನ ನಾಚಿಕೆ, ಮಾನ ಮರ್ಯಾದೆ ಬಿಟ್ಟು ಬ್ರದರ್ ಅಂದ್ರಿ. ಅಂತಹ ಸಂಬಂಧ ಹುಡುಕೋ ಕೆಲಸ ‌ನಾವು ಮಾಡೊಲ್ಲ. ಭಯೋತ್ಪಾದಕರಲ್ಲೂ ಓಟಿನ ಸಂಬಂಧ ಹುಡುಕೋ ನೀಚ ಕೆಲಸ ಬಿಜೆಪಿ ಮಾಡಿಲ್ಲ, ಮಾಡೋದು ಇಲ್ಲ. ಭಯೋತ್ಪಾದಕರ ಕೈಗೆ ಮೊಬೈಲ್ ಕೊಡುವ ದ್ರೋಹಿಗಳು ನಮಗೆ ಪಾಠ ಮಾಡೋ ಅವಶ್ಯಕತೆ ಇಲ್ಲ ಅಂತ ವಾಗ್ದಾಳಿ ನಡೆದರು.

ಯುಪಿಎ ಅವಧಿಯಲ್ಲಿ ಮುಂಬೈ ದಾಳಿ ಬಗ್ಗೆ ಅಂದಿನ ಗೃಹ ಸಚಿವ ಚಿದಂಬರಂ ಅವರೇ‌ ಉತ್ತರ ಕೊಟ್ಟಿದ್ದಾರೆ. ನಾವು ರಿಯಾಕ್ಷನ್ ಮಾಡೋಣ ಅಂದಾಗ ಪ್ರಧಾನಿಗಳು ಹೇಗೆ ಅನುಮತಿ ಕೊಡಲಿಲ್ಲ? ಸರ್ಕಾರ ಹೇಗೆ ಅನುಮತಿ ಕೊಡಲಿಲ್ಲ ಅಂತ. ನಾಚಿಕೆ, ಮಾನ-ಮರ್ಯಾದೆ ಇದ್ದೋರು ಮಾತ್ರ ಅಂದಿನ ಸಂದರ್ಭ ಸಮರ್ಥನೆ ಮಾಡಿಕೊಳ್ತಾರೆ.

ಚಿದಂಬರಂ ಅವರು ಕಾಂಗ್ರೆಸ್ ಅವರ ಲಂಗೋಟಿ ಬಿಚ್ಚಿ ಇಟ್ಟಿಬಿಟ್ರು. ಚಿದಂಬರಂ ಅವರು ಬಿಜೆಪಿ ಅಲ್ಲ. ಬಿಜೆಪಿಯಲ್ಲಿ ‌ಇದ್ದವರೂ ಅಲ್ಲ. ಅವರು ಕಾಂಗ್ರೆಸ್‌ನಲ್ಲಿ ಇರೋದು. ಕಾಂಗ್ರೆಸ್‌ನ ದೊಡ್ಡ ಲೀಡರ್. ಅವರೇ ಗೃಹ ಸಚಿವ ಆಗಿದ್ದವರು. ಅವರೇ ಇವರ ಲಂಗೋಟಿ ಬಿಚ್ಚಿ ಇಟ್ಟಿದ್ದಾರೆ. ಅಂತಹ ಕೆಲಸ ನಮ್ಮಿಂದ ಆಗೊಲ್ಲ‌ ಅಂತ ಟಾಂಗ್ ಕೊಟ್ಟರು.

ಅರ್ಬನ್ ನಕ್ಸಲರನ್ನ ಸಲಹೆಗಾರರನ್ನಾಗಿ ಇಟ್ಟುಕೊಂಡು ನಕ್ಸಲರಿಗೆ ಸಹಾಯ ಮಾಡೋ ನೀಚ ಕೆಲಸ ಬಿಜೆಪಿ ಮಾಡಿಲ್ಲ. ಕಾಂಗ್ರೆಸ್‌ ಅದನ್ನು ಮಾಡಿತ್ತು. ಕೇಂದ್ರ ಸರ್ಕಾರ ಘಟನೆಯನ್ನ ಒಪ್ಪಿಕೊಳ್ಳುತ್ತದೆ. ತನ್ನ ಸಾಮರ್ಥ್ಯವನ್ನು ತೋರಿಸುತ್ತೆ‌. ಪ್ರಿಯಾಂಕ್ ಖರ್ಗೆ ಸರ್ವಜ್ಞರಿಗಿಂತ ಮೇಲೆ. ಸರ್ವಜ್ಞ ಇದ್ದಿದ್ದರೆ ಸರ್ವಜ್ಞರನ್ನ ಹುಟ್ಟಿಸಿದ್ದೇ ನಾನು ಅಂತ ಹೆಳ್ತಿದ್ರೋ ಏನೋ. ಪ್ರಿಯಾಂಕ್ ಖರ್ಗೆ ಇತಿಹಾಸ ತಿಳಿದು ಮಾತಾಡಲಿ.

ಬೇಕಾದ್ರೆ ಪೇಪರ್ ಕಟ್ಟಿಂಗ್ ಕಳಿಸಿಕೊಡ್ತೀವಿ. ವರ್ಷದಲ್ಲಿ ಅವರು ಇದ್ದಾಗ ಎಷ್ಟು ಘಟನೆ ಆಗ್ತಿತ್ತು ಅಂತ ನೋಡಲಿ. ಭಯೋತ್ಪಾದಕನಿಗೆ ಹಸ್ತಲಾಘವ ಮಾಡಿ ಯಾಸಿನ್ ಮಲ್ಲಿಕ್ ಜೀ ಅಂದವರು‌. ಪ್ರಧಾನಿ ಕಚೇರಿಗೆ ಕರೆಸಿ ತಬ್ಬಿಕೊಳ್ಳೋ ಕೆಲಸ ಬಿಜೆಪಿ ಮಾಡಿಲ್ಲ. ತಬ್ಬಿಕೊಳ್ಳೋ‌ ಕೆಲಸ ಮಾಡಿದ್ದು ಇವರು ಅಂತ ಪ್ರಿಯಾಂಕ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.