ಮನೆ ಮನರಂಜನೆ ಮಗಳಿಗೆ ಮಾಲತಿ ಮೇರಿ ಎಂದು ಹೆಸರಿಟ್ಟ ಪ್ರಿಯಾಂಕಾ ಚೋಪ್ರಾ, ನಿಕ್ ದಂಪತಿ

ಮಗಳಿಗೆ ಮಾಲತಿ ಮೇರಿ ಎಂದು ಹೆಸರಿಟ್ಟ ಪ್ರಿಯಾಂಕಾ ಚೋಪ್ರಾ, ನಿಕ್ ದಂಪತಿ

0

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೋನಸ್‌‌ ಅವರು ಮಗಳಿಗೆ ‘ಮಾಲತಿ ಮೇರಿ’ ಎಂದು ನಾಮಕರಣ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ‘ಮಾಲತಿ ಮೇರಿ ಎಂದು ಉಲ್ಲೇಖಿಸಲಾಗಿದೆ. ಪ್ರಿಯಾಂಕಾ– ನಿಕ್ ದಂಪತಿ ತಾವು ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ಮಗು ಪಡೆದಿರುವುದಾಗಿ ಜನವರಿಯಲ್ಲಿ ಘೋಷಿಸಿದ್ದರು.

ನಾವು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈಗ ನಮ್ಮ ಕುಟುಂಬದ ಮೇಲೆ ಗಮನ ಹರಿಸಿದ್ದೇವೆ ಎಂದು ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹೇಳಿಕೊಂಡಿದ್ದರು.

ಪ್ರಿಯಾಂಕಾ ಹಾಗೂ ನಿಕ್ ಜೋನಸ್‌‌ ದಂಪತಿ 2018 ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದರು. ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ‘