ಬೆಂಗಳೂರು : ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರವಾಗಿ 12 ಸೆಕೆಂಡಿನ ವೀಡಿಯೋ ಒಂದು ಹರಿದಾಡ್ತಿದೆ. ಇದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಿ ಎಂದು ಶಿವಮೊಗ್ಗ ಎಸ್ಪಿಯವರಿಗೆ ನಿನ್ನೆಯೇ ಹೇಳಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಇಲಾಖೆಯವರು ಏನು ಕಠಿಣ ಕ್ರಮ ಕೈಗೊಳ್ಳಬೇಕೋ ಅದನ್ನ ಕೈಗೊಳ್ತಾರೆ. ಅಕಸ್ಮಾತ್ ಆಗಿ ಹೇಳಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಎಸ್ಪಿಯವರಿಗೆ ಸ್ವತಂತ್ರ ಅಧಿಕಾರ ಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕುರಿತು ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಮಧು ಬಂಗಾರಪ್ಪ ಪ್ರತಿಕ್ರಿಯಿಸಲು ನಿರಾಕರಿಸಿದ್ರು. ನೀವು ಭದ್ರಾವತಿ ಬಗ್ಗೆ ಕೇಳಿದ್ದೀರಾ. ಅದರ ಬಗ್ಗೆ ಹೇಳಿದ್ದೇನೆ. ಈ ವಿಚಾರ ನನ್ನ ಜಿಲ್ಲೆಯದ್ದು. ಇದರಲ್ಲಿ ಯಾರೇ ಇದ್ರೂ ಕ್ರಮ ತಗೊಂಡೇ ತಗೊಳ್ತೇವೆ. ಇದೆಲ್ಲವನ್ನು ನಾವು ಒಪ್ಪಲ್ಲ. ಇದನ್ನು ನಾವು ಸಹ ಖಂಡಿಸುತ್ತೇವೆ ಅಂತ ಹೇಳಿದ್ದಾರೆ.















