ಪ್ರತಿಯೊಬ್ಬರಿಗೂ ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನು ಉಳಿಸಬೇಕೆಂಬ ಆಸೆ ಇರುತ್ತದೆ. ಆದರೆ ಆವ್ಯಕ್ತಿ ರಕ್ತದಾನಕ್ಕೆ ಅರ್ಹನೇ ಎನ್ನುವುದು ಮೊದಲು ಕಂಡುಕೊಳ್ಳಬೇಕಾಗಿರುವುದು.
ರಕ್ತದಾನ ಮಹತ್ತರವಾದ ದಾನಗಳಲ್ಲಿ ಒಂದಾಗಿದೆ. ರಕ್ತದಾನ ಮಾಡುವ ಮೂಲಕ ಹಲವಾರು ಜೀವವನ್ನು ಉಳಿಸಬಹುದು. ನಮ್ಮಲ್ಲಿ ಹೆಚ್ಚಿನವರು ರಕ್ತದಾನ ಮಾಡುತ್ತಾರೆ. ಆದರೆ ರಕ್ತದಾನ ಮಾಡುವ ಮುನ್ನ ಹಲವಾರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ ಅರ್ಹತೆಯನ್ನು ಪರಿಶೀಲಿಸಿ
ರಕ್ತದಾನ ಮಾಡುವ ಮುನ್ನ ನೀವು ರಕ್ತದಾನ ಮಾಡಲು ಅರ್ಹರೇ ಎನ್ನುವುದನ್ನು ತಿಳಿಯುವುದು ಮುಖ್ಯ. ಅವುಗಳೆಂದರೆ
ರಕ್ತದಾನ ಮಾಡುವವರು 18 ರಿಂದ 60 ವರ್ಷಗಳ ಒಳಗಿನ ವಯಸ್ಸಿನವರಾಗಿರಬೇಕು.
12 ರಿಂದ 17 mg/dl ನಡುವೆ ಹಿಮೋಗ್ಲೋಬಿನ್ ಲೆವೆಲ್ ಇರಬೇಕು.
ರಕ್ತದಾನ ಮಾಡುವಂದು ಅಥವಾ ಅದಕ್ಕೂ ಎರಡು ದಿನಗಳ ಮೊದಲು ಜ್ವರವನ್ನು ಹೊಂದಿರಬಾರದು
150/90 mm Hg ಗಿಂತ ಅಧಿಕಮೆ ರಕ್ತದೊತ್ತಡ ಮತ್ತು 100/60 mmHg ಗಿಂತ ಕಡಿಮೆ ಇರಬಾರದು.
ನಾಡಿಮಿಡಿತ ಸಾಮಾನ್ಯವಾಗಿರಬೇಕು
ತೂಕ 45 ಕೆಜಿಗಿಂತ ಕಡಿಮೆ ತೂಕ ಹೊಂದಿರಬಾರದು.
ಕಳೆದ 48 ಗಂಟೆಗಳ ಕಾಲ ಯಾವುದೇ ಆಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳಬಾರದು.
ರಕ್ತದಾನಕ್ಕೆ 24 ಗಂಟೆಗಳ ಮೊದಲು ಆಲ್ಕೋಹಾಲ್ ಸೇವಿಸಿರಬಾರದು
ರಕ್ತದಾನ ಮಾಡುವುದರ ಪ್ರಯೋಜನಗಳು
ಗುರುತಿನ ಪತ್ರವನ್ನು ತನ್ನಿ
ಪ್ರತಿಯೊಬ್ಬ ರಕ್ತದಾನ ಮಾಡುವ ವ್ಯಕ್ತಿ ತನ್ನ ಗುರುತಿನ ಚೀಟಿಯನ್ನು ಜೊತೆಗೆ ಕೊಂಡೊಯ್ಯಬೇಕು. ರಕ್ತದಾನದ ಸಮಯದಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ಸಂಪರ್ಕ ಮಾಹಿತಿಯನ್ನು ಸಹ ನೀವು ನೀಡಬೇಕಾಗುತ್ತದೆ.
ನಿಮ್ಮನ್ನು ನೀವು ಸಿದ್ಧಪಡಿಸಿ
ದಾನಿಯು ರಕ್ತದಾನಕ್ಕೆ ತನ್ನನ್ನು ತಾನು ಸಿದ್ಧಪಡಿಸುವುದು ಬಹಳ ಮುಖ್ಯ. ಮಾನಸಿಕವಾಗಿ ಸಿದ್ಧರಾಗುವುದಲ್ಲದೆ, ಆರೋಗ್ಯಕರ ಆಹಾರ ಸೇವಿಸಬೇಕು. ಸಾಕಷ್ಟು ನೀರನ್ನು ಕುಡಿಯಬೇಕು. ರಕ್ತದಾನಕ್ಕೂ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿರಬೇಕು.
ವೈದ್ಯಕೀಯ ಇತಿಹಾಸ
ರಕ್ತದಾನಕ್ಕೂ ಮೊದಲು ದಾನಿಯಲ್ಲಿ ವೈದ್ಯರು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಲೈಂಗಿಕ ಇತಿಹಾಸವನ್ನು ಒಳಗೊಂಡಂತೆ ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಬಹುದು.
ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳಲ್ಲಿ ವ್ಯಕ್ತಿಯು ರಕ್ತದಾನ ಮಾಡಲು ಅರ್ಹರಾಗಿರುವುದಿಲ್ಲ. ಹಾಗಾಗಿ ವ್ಯಕ್ತಿಯು ತನ್ನ ಹಿಂದಿನ ವೈದ್ಯಕೀಯ ಇತಿಹಾಸ ಹಾಗೂ ಸದ್ಯಕ್ಕೆ ತೆಗೆದುಕೊಳ್ಳುತ್ತಿರುವ ಔಷಧಿಗಳ ಬಗ್ಗೆ ವೈದ್ಯರಿಗೆ ಹೇಳುವುದು ಮುಖ್ಯ.
ಈ ಕಾಯಿಲೆ ಹೊಂದಿರುವ ಜನರು ರಕ್ತದಾನ ಮಾಡಬಾರದು
ಅಧಿಕ ರಕ್ತದೊತ್ತಡ ಅಥವಾ ಅನಿಯಂತ್ರಿತ ಮಧುಮೇಹ ಹೊಂದಿರುವವರು
ಕ್ಷಯರೋಗ (ಟಿಬಿ), ಮೂತ್ರಪಿಂಡದ ಸಮಸ್ಯೆಗಳು
ದೀರ್ಘಕಾಲದ ಯಕೃತ್ತಿನ ಕಾಯಿಲೆಯಂತಹ ದೀರ್ಘಕಾಲದ ಸೋಂಕುಗಳು
ವೈರಲ್ ಸೋಂಕುಗಳು, ಹೆಪಟೈಟಿಸ್ ಬಿ ಮತ್ತು ಸಿ ಅಥವಾ ಎಚ್ಐವಿ ಇರುವವರು
ಗರ್ಭಿಣಿಯರು ಮತ್ತು ಪಿರಿಯೆಡ್ಸ್ ಆಗಿರುವ ಮಹಿಳೆಯರು
ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆ ಹೊಂದಿರುವವರು
ರೇಬೀಸ್ ಮತ್ತು ಹೆಪಟೈಟಿಸ್‌ಗೆ ಇತ್ತೀಚೆಗೆ ವ್ಯಾಕ್ಸಿನೇಷನ್ ತೆಗೆದುಕೊಂಡಿರುವವರು