ಮೈಸೂರು(Mysuru): ಗುಣಮಟ್ಟದ ಹಾಲು ಉತ್ಪಾದನೆ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಹಾಳು ಉತ್ಪಾದಕರ ಶ್ರಮಿಸಬೇಕು ಎಂದು ಎಂ.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು.
ಅವರು ಇಂದು ಮೈಸೂರು ತಾಲ್ಲೂಕು ಗೆಜ್ಜಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಾಲು ಉತ್ಪಾದಕರು ಡೈರಿಗಳಿಗೆ ಹಾಕುವ ಹಾಲಿನ ಗುಣಮಟ್ಟ ೩.೫ಕ್ಕೂ ಹೆಚ್ಚು ಇರಬೇಕು, ಹಾಲಿನ ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಗ್ರಾಹಕರು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಖರೀದಿಸುತ್ತಾರೆ. ಉತ್ಪಾದಕರಿಗೆ ಉತ್ತಮ ಬೆಲೆಸಿಗುತ್ತದೆ ಎಂದರು.
ನಿಮ್ಮ ಮಕ್ಕಳಂತೆ ಸಮಾಜದಲ್ಲಿನ ಮಕ್ಕಳನ್ನು ಕಾಣಬೇಕು, ಆ ಮಕ್ಕಳಿಗೆ ವಿಷದ ಹಾಲು ಕುಡಿಸಲು ಮುಂದಾಗುವುದು ಬೇಡ, ಸಂಘಗಳಲ್ಲಿ ಉತ್ತಮ ಮತ್ತು ಶುದ್ದವಾದ ಹಾಲು ಶೇಖರಿಸಬೇಕು ಸಲಹೆ ನೀಡಿದರು.
ಸಮಾರಂಭದಲ್ಲಿ ಮೈಮುಲ್ ನಿರ್ದೇಶಕರಾದ ಕೆ.,ಉಮಾಶಂಕರ್, , ಅಶೋಕ್, ಲೀಲಾ ನಾಗರಾಜು, ಜಿ.ಪಂ.ಸದಸ್ಯರಾದ ರೂಪ ಲೋಕೇಶ್, ಗ್ರಾಮ ಪಂ.ಮಾಜಿ ಉಪಾಧ್ಯಕ್ಷರಾದ ನಂಜಪ್ಪ, ಸಂಘದ ಅಧ್ಯಕ್ಷರಾದ ಪ್ರಭಸ್ವಾಮಿ, ಉಪಾಧ್ಯಕ್ಷರಾದ ನಟರಾಜು, ನಿರ್ದೇಶಕರಾದ ಉಮೇಶ್ ಜಿ. ಪ್ರಕಾಶ್, ಉದಯ್ ಕುಮಾರ್, ಮಹೇಶ್ ಡಿ. ವೀರಭದ್ರ, ಟಿ.ಪಾರ್ವತಮ್ಮ, ಜಯಮ್ಮ, ಮೈಮುಲ್ ಉಪ ವ್ಯವಸ್ಥಾಪಕರಾದ ಡಾ.ದಿವಾಕರ್, ವಿಸ್ತರಾಣಧಿಕಾರಿಗಳಾದ ಪರಮೇಶ್, ಎಂ.ಪ್ರವೀಣ್, ಸಿ.ಇ.ಓ. ನಾಗೇಂದ್ರ ಹಾಜರಿದ್ದರು.