ಬೆಂಗಳೂರು: ಸಕ್ಕರೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಹಾನಿಯನ್ನು ತಡೆಗಟ್ಟಲು ದೇಶದಲ್ಲೇ ಮೊದಲ ಬಾರಿಗೆ ರಾಸಾಯನಿಕ ಮುಕ್ತ, ಶುದ್ಧ, ಆರೋಗ್ಯ ರಕ್ಷಣೆಗೆ ಪೂರಕವಾದ “ಕೇಸರಿ ಗೋಲ್ಡನ್ ಶುಗರ್” ಉತ್ಪನ್ನವನ್ನು ತತ್ವ ಹೆಲ್ತ್ ಅಂಡ್ ವೆಲ್ ನೆಸ್ ಪ್ರೈವೇಟ್ ಲಿಮಿಟೆಡ್ ಬಿಡುಗಡೆ ಮಾಡಿದೆ.
ಕೇಸರಿ ಗೋಲ್ಡ್ ಸಕ್ಕರೆ ನೈಸರ್ಗಿಕವಾಗಿ ಕಡಿಮೆ ಜಿಐ ಅಂಶವನ್ನು ಹೊಂದಿದೆ ಹಾಗೂ ಸಂಸ್ಕರಿಸಿದ ಯಾವುದೇ ರಸಾಯನಿಕ ಸಂರಕ್ಷಣಾ ಪದಾರ್ಥಗಳನ್ನು ಬಳಸದ ಉತ್ಕೃಷ್ಟ ಗುಣಮಟ್ಟದ ಸಕ್ಕರೆ ಇದಾಗಿದ್ದು, ದೈನಂದಿನ ಬಳಕೆಗಾಗಿ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಮಳಿಗೆಗಳಲ್ಲಿ “ಕೇಸರಿ ಗೋಲ್ಡನ್ ಶುಗರ್” ಲಭ್ಯವಾಗಲಿದೆ.
ತತ್ವ ಹೆಲ್ತ್ ಅಂಡ್ ವೆಲ್ ನೆಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಗುರುಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಸಚಿನ್ ಜೈನ್ ಹಾಗೂ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಸೂರ್ಯ ಮಹೇಶ್ “ಕೇಸರಿ ಗೋಲ್ಡ್ ಸಕ್ಕರೆ”ಯನ್ನು ಬಿಡುಗಡೆ ಮಾಡಿದರು.
ಗುರುಪ್ರಸಾದ್ ಮಾತನಾಡಿ, ದೇಶದ ಸಕ್ಕರೆ ವಲಯದಲ್ಲಿ ಇದು ಕ್ರಾಂತಿಕಾರ ಬೆಳವಣಿಗೆಯಾಗಿದ್ದು, ವ್ಯಾಪಕ ಸಂಶೋಧನೆ ಮೂಲಕ ಇದೇ ಮೊದಲ ಬಾರಿಗೆ ಶುದ್ಧ, ಸುರಕ್ಷಿತ ಸಕ್ಕರೆಯನ್ನು ಉತ್ಪಾದನೆ ಮಾಡುತ್ತಿದ್ದೇವೆ. ಜನರಿಗೆ ಆರೋಗ್ಯ ಪೂರ್ಣ ಉತ್ಪನ್ನವನ್ನು ದೊರಕಿಸಿಕೊಡಲು ಒಂದು ಲಕ್ಷ “ಕೇಸರಿ ಗೋಲ್ಡನ್ ಶುಗರ್” ಮೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಗುವುದು. ಜನತೆ ತಮ್ಮ ಆರೋಗ್ಯ ರಕ್ಷಣೆಗಾಗಿ ರಾಸಾಯನಿಕ ಅಂಶ ಹೊಂದಿರುವ ಸಕ್ಕರೆಯನ್ನು ಕೈಬಿಟ್ಟು ಆರೋಗ್ಯಪೂರ್ಣ ಉತ್ಪನ್ನಗಳ ಬಳಕೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ವ್ಯವಸ್ಥಾಪಕ ನಿರ್ದೇಶಕ ಸಚಿನ್ ಜೈನ್ ಮಾತನಾಡಿ, ತತ್ವ ಹೆಲ್ತ್ ಅಂಡ್ ವೆಲ್ ನೆಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಂಪೂರ್ಣವಾಗಿ ಜೀವನವನ್ನು ಸಮೃದ್ಧಗೊಳಿಸಲು ಮತ್ತು ನವೀನ ಉತ್ಪನ್ನಗಳನ್ನು ಗ್ರಾಹಕರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೊರೋನಾ ನಂತರ ಗ್ರಾಹಕರು ಆರೋಗ್ಯ ರಕ್ಷಣೆಗೆ ಒತ್ತು ನೀಡಿದ್ದು, ಜನರ ಆಶಯಗಳಿಗೆ ಪೂರಕವಾಗಿ ಕೇಸರಿ ಗೋಲ್ಡ್ ಸಕ್ಕರೆಯನ್ನು ಸಂಶೋಧನೆ ಮಾಡಿ, ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಮಾರುಕಟ್ಟೆ ವ್ಯವಸ್ಥಾಪಕ ಸೂರ್ಯಮಹೇಶ್ ಮಾತನಾಡಿ, ಗ್ರಾಹಕರು ಇದೀಗ ಸಕ್ಕರೆಗೆ ಪರ್ಯಾಯ ಉತ್ಪನ್ನಗಳ ಹುಡುಕಲು ಕಷ್ಟವಾಗುತ್ತಿದ್ದು, ಜಾಗತಿಕ ಮಟ್ಟದಲ್ಲೂ ಸಕ್ಕರೆ ಪ್ರಭಾವಿತ ಸಮಸ್ಯೆಗಳು ಹೆಚ್ಚಾಗಿದ್ದು, ಸ್ಕೂಲಕಾಯ ಮತ್ತು ಮಧುಮೇಹದ ವಿರುದ್ಧದ ಹೋರಾಟಕ್ಕಾಗಿ ಕೇಸರಿ ಗೋಲ್ಡ್ ಸಕ್ಕರೆ ಪರ್ಯಾಯವಾಗಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ 8925910771 ನ್ನು ಸಂಪರ್ಕಿಸಬಹುದು.