ಮನೆ ರಾಜಕೀಯ ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

0

ಗದಗ: ಪ್ರೊ. ಕೆ.ಎಸ್. ಭಗವಾನ್ ಅವರು ತಾಯಿ ಚಾಮುಂಡೇಶ್ವರಿ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಮಹತ್ವ ಕೊಟ್ಟಿಲ್ಲ, ಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.

Join Our Whatsapp Group

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವಾನ್ ಅವರು ಹೆಸರಿಗೆ ತಕ್ಕಹಾಗೆ ಭಗವಂತನ ಮೇಲೆ ನಂಬಿಕೆ ಇಟ್ಟಿಲ್ಲ, ಭಗವಂತನ ಮೇಲೆ ನಂಬಿಕೆ ಇಲ್ಲವೆಂದರೆ, ಭಗವಾನ್ ಅಂತ ಹೆಸರು ಇಟ್ಟಿಕೊಂಡಿದ್ದೆ ಅಪಾರ್ಥವಾಗಿದೆ ಎಂದು ಹೇಳಿದರು.

ಒಂದು ಧರ್ಮದ ವಿರುದ್ಧ ಮಾತನಾಡುವುದು ಯಾವುದೇ ಮಾನವೀಯ ಧರ್ಮವಿಲ್ಲ. ಚಾಮುಂಡೇಶ್ವರಿ ಕಾಲ್ಪನಿಕ ಅಂತ ಹೇಳುತ್ತಾರೆ. ಚಾಮುಂಡೇಶ್ವರಿ ಕಾಲ್ಪನಿಕ ಅಂದರೆ, ಮಹಿಷಾಸುರನು ಕಾಲ್ಪನಿಕವೇ? ಮಹಿಷಾಸುರನ ಆರಾಧನೆ ಮಾಡುತ್ತಾರೆ. ಈ ತರಹ ದ್ವಂದ್ವ ವಿಪರ್ಯಾಸದಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಯಾರೂ ಮಹತ್ವ ಕೊಟ್ಟಿಲ್ಲ. ಯಾರೂ ಕೊಡಬಾರದು. ವಾಸ್ತವ ಅಂಶ ಗೊತ್ತಿದ್ದರೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶ್ರೀರಾಮನ ಬಗ್ಗೆ ಹಿಂದೆ ಏನು ಮಾತಾಡಿದ್ದರು? ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಕೆಲವು ಶಕ್ತಿಗಳಿವೆ. ಸಮಾಜ ಇದನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಯಾರು ಮಹತ್ವ ಕೊಡುತ್ತಿಲ್ಲ ಎಂದು ಬೊಮ್ಮಾಯಿ ಹೇಳಿದರು.