ಕೇರಳ: 2010ರಲ್ಲಿ ಇಡುಕ್ಕಿ ಜಿಲ್ಲೆಯ ತೊಡಪುಳದ ನ್ಯೂಮನ್ ಕಾಲೇಜು ಜಿ.ಟಿ.ಜೋಸೆಫ್ ಅವರ ಬಲಗೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಎನ್ ಐಎ ವಿಶೇಷ ನ್ಯಾಯಾಲಯವು 6 ಅಪರಾಧಿಗಳ ಪೈಕಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿಗಳೆಂದು ಸಾಬೀತದ ಸಾಜಿಲ್ ನಜರ್ ಮತ್ತು ನಜೀಬ್ ಎನ್ನುವವರಿಗೆ ಎನ್ ಐಎ ವಿಶೇಷ ನ್ಯಾಯಾಲಯ ನ್ಯಾಯಾಧೀಶರದ ಎಸ್.ಭಾಸ್ಕರ್ ಶಿಕ್ಷೆವಿಧಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆ ನಿಷೇಧ ಕಾಯ್ದೆ ಭಾರತೀಯ ದಂಡ ಸಂಹಿತೆ ಸ್ಪೋಟಕ ವಸ್ತುಗಳ ಕಾಯ್ದೆ ಅನ್ವಯ ತಪ್ಪಿತಸ್ಥರನ್ನು ಎರಡನೇ ಹಂತದ ತನಿಕೆಯಲ್ಲಿ ದೃಢಪಟ್ಟಿದೆ ಎಂದು ಬುಧವಾರ ಎನ್ ಐಎ ಕೋರ್ಟ್ ತೀರ್ಪು ನೀಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪರಾಧಿಗಳ ಪೈಕಿ ಮೂವರಿಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.