ಮನೆ ಸ್ಥಳೀಯ ಚೋರನಹಳ್ಳಿ ಗ್ರಾಮದಲ್ಲಿ ಆರ್ ಎಲ್ ಹೆಚ್ ಪಿ ವತಿಯಿಂದ ಸರ್ಕಾರಿ ಯೋಜನೆಗಳ ಸದ್ಬಳಕೆ ಕುರಿತು ಕಾರ್ಯಕ್ರಮ

ಚೋರನಹಳ್ಳಿ ಗ್ರಾಮದಲ್ಲಿ ಆರ್ ಎಲ್ ಹೆಚ್ ಪಿ ವತಿಯಿಂದ ಸರ್ಕಾರಿ ಯೋಜನೆಗಳ ಸದ್ಬಳಕೆ ಕುರಿತು ಕಾರ್ಯಕ್ರಮ

0

ಮೈಸೂರು: ಚೋರನಹಳ್ಳಿ ಗ್ರಾಮ ಮೈಸೂರು ತಾಲೂಕು ಇಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು ಮತ್ತು ವರುಣಾ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಸರ್ಕಾರಿ ಯೋಜನೆಗಳ ಸದ್ಬಳಕೆ ಕುರಿತು ಕಾರ್ಯಕ್ರಮವನ್ನು ನಡೆಸಲಾಯಿತು.

Join Our Whatsapp Group

ಕಾರ್ಯಕ್ರಮದಲ್ಲಿ ಸಂಸ್ಥೆಯ ಶಶಿಕುಮಾರ್ ಎಸ್ ಸಂಯೋಜಕರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ  ಮಾತನಾಡುತ್ತಾ ಆರ್.ಎಲ್.ಹಚ್.ಪಿ ಸಂಸ್ಥೆಯು ಕಳೆದ 39 ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಪ್ರತೀ ಗ್ರಾಮಗಳಲ್ಲಿ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಮತ್ತು ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದು ಮತ್ತು  ಅದನ್ನು ಬಗೆಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಶ್ರೀ ಗಂಗಾಧರ್ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಲನಹಳ್ಳಿ ಪೊಲೀಸ್ ಠಾಣೆ ಇವರು ಮಾತನಾಡಿ ” ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ” ಎಂದು ತಿಳಿಸುತ್ತಾ, ಸರ ಕಳ್ಳತನ, ಮನೆಯಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಎಲ್ಲರೂ ಜಾಗೃತರಾಗಿರಿ ಮತ್ತು ತಮಗೆ ಕಾನೂನಿನ ನೆರವು ಮತ್ತು ರಕ್ಷಣೆ ಬೇಕಾದಲ್ಲಿ ಇಲಾಖೆಯನ್ನು ಸಂಪರ್ಕಿಸಿ ಎಂದು ತಿಳಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿದರು. ಎಲ್ಲಾ ಇಲಾಖೆಯವರು ಅವರವರ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಿದರು.

 ಜನರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸುತ್ತ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವುದು. ಶೌಚಾಲಯ ಇಲ್ಲದೆ ಇರುವುದು, ದನದ ಕೊಟ್ಟಿಗೆ, ಶಾಲೆಯಲ್ಲಿ ಶೌಚಾಲಯ ಸ್ವಚ್ಛತೆ, ಚರಂಡಿ ಸ್ವಚ್ಚತೆ ಮತ್ತು ಬಸ್ ಸಮಸ್ಯೆ ಕುರಿತು ತಿಳಿಸಿದರು ಮತ್ತು ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೈಸೂರು, ಹೇಮಂತ್ ರಾಜ್ ಮತ್ತು ನಮ್ರತಾ ಕೃಷಿ ಇಲಾಖೆ,  ಮಹದೇವಸ್ವಾಮಿ ಆರೋಗ್ಯ ಇಲಾಖೆ,  ಮಂಜುಳಾ, ಶಿಕ್ಷಣ ಇಲಾಖೆ, ಗುರುಮೂರ್ತಿ ಗ್ರಾಮ ಪಂಚಾಯತಿ ಸದಸ್ಯರು, ಗುರುಮೂರ್ತಿ ಪಂಚಾಯ್ತಿ ಸಿಬ್ಬಂದಿ,  ಶಿವಣ್ಣ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಹಿಂದಿನ ಲೇಖನಅಂಡಮಾನ್‌ – ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ 4.3ರಷ್ಟು ತೀವ್ರತೆಯ ಭೂಕಂಪ
ಮುಂದಿನ ಲೇಖನಚಿಕ್ಕಮಗಳೂರು: ಡೆಂಗ್ಯೂ ಜ್ವರಕ್ಕೆ ಬಾಲಕಿ ಸಾವು