ಮೈಸೂರು ಜುಲೈ 12 ಮತ್ತು 13 ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಮೈಸೂರು ನಗರದ ಕೆಳಕಂಡ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಗುಂಪು – ಸಿ ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ , ಸದರಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲಾಗುತ್ತದೆ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ -2023 ಸೆಕ್ಷನ್ 163 ರೀತ್ಯ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯ ನಿಷೇಧವನ್ನು ಜಾರಿ ಮಾಡಲಾಗಿದೆ .
ಪರೀಕ್ಷಾ ಕೇಂದ್ರಗಳು : ಜುಲೈ 12 ಮತ್ತು 13 ರಂದು ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು , ಎನ್ . ಎಸ್ . ರಸ್ತೆ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ , ಮುಕ್ತ ಗಂಗೋತ್ರಿ , ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು , ಪೀಪಲ್ಸ್ ಪಾರ್ಕ್ , ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು , ಜೆಎಲ್ ಬಿ ರಸ್ತೆ , ಸರ್ಕಾರಿ ಪದವಿ ಪೂರ್ವ ಕಾಲೇಜು , ಅನಿಕೇತನ ರಸ್ತೆ , ಕುವೆಂಪು ನಗರ , ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಜೆ . ಎಲ್ . ಬಿ ರಸ್ತೆ , ಸರ್ಕಾರಿ ಆದರ್ಶ ವಿದ್ಯಾಲಯ , ಜಾಕಿಕ್ವಾರ್ಟರ್ಸ್ ಮೈಸೂರು , ಸರ್ಕಾರಿ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜು ( ಕಾಲೇಜು ಶಾಲೆ ವಿಭಾಗ ) ನಜರ್ ಬಾದ್ .
ಜುಲೈ 13 ರಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್ ಮೆಂಟ್ ಕಾಲೇಜು , ವಾಲ್ಮೀಕಿ ರಸ್ತೆ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಕುವೆಂಪು ನಗರ , ಮಹಾರಾಣಿ ಮಹಿಳಾ ಕಲಾ ಕಾಲೇಜು , ಜೆ . ಎಲ್ . ಬಿ ರಸ್ತೆ , ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು , ಸರ್ಕಾರಿ ಪದವಿ ಪೂರ್ವ ಕಾಲೇಜು , ಒಂಟಿಕೊಪ್ಪಲ್ , ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢಶಾಲೆ ವಿಭಾಗ ), ಜೆ . ಎಲ್ . ಬಿ ರಸ್ತೆ , ಟೆರಿಷಿಯನ್ ಪದವಿ ಪೂರ್ವ ಕಾಲೇಜು , ಸಿದ್ದಾರ್ಥನಗರ , ಎಸ್ ಬಿ ಆರ್ ಆರ್ ಮಹಾಜನ ಪಿ . ಯು ಕಾಲೇಜು , ಜೆ . ಎಸ್ ಎಸ್ ಬಾಲಕಿಯರ ವೈದ್ಯಕೀಯಶಾಲೆ , ಸರಸ್ವತಿ ಪುರಂ ಮೈಸೂರು , ಸೇಂಟ್ ಥಾಮಸ್ ಆಸ್ಪತ್ರೆ ವಿಶ್ವೇಶ್ವರ ನಗರ , ಜೆಎಸ್ ಎಸ್ ಕಾನೂನು ಕಾಲೇಜು ( ಅಟೊನೊಮಸ್ ), ನ್ಯೂ ಕಾಂತರಾಜ್ ಅರಸ್ ರಸ್ತೆ , ಶಾರದಾ ವಿಲಾಸ ಪಿ . ಯು ಕಾಲೇಜು , ಕೃಷ್ಣಮೂರ್ತಿಪುರಂ , ಜೆಎಸ್ ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜು , ಜೆ ಎಸ್ ಎಸ್ ಟಿಐಎಸ್ ಕ್ಯಾಂಪಸ್ , ಮಾನಸ ಗಂಗ್ರೋತ್ರಿ ,
ಈ ಪ್ರದೇಶದ ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳು ಇತರ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರು ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಹಾಗೂ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ / ಬ್ರೌಸಿಂಗ್ ಸೆಂಟರ್ ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಮುಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .














