ಮಡಿಕೇರಿ(Madikeri): ನಾಳೆಯಿಂದ ನಾಲ್ಕುದಿನಗಳ ಕಾಲ ಕೊಡಗು ಜಿಲ್ಲೆಗೆ ನಿಷೇದಾಜ್ಞೆ ಹೇರಿರುವುದಕ್ಕೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 26 ರಂದು ಕಾಂಗ್ರೆಸ್ ನಿಂದ ಮಡಿಕೇರಿ ಚಲೋ ಹಾಗೂ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ಜಿಲ್ಲಾಡಳಿತ ನಿಷೇದಾಜ್ಞೆ ಜಾರಿಗೊಳಿಸಿದೆ.
ಈ ಕುರಿತು ಮಾತನಾಡಿರುವ ಅಪ್ಪಚ್ಚು ರಂಜನ್, ಕೊಡಗಿನಲ್ಲಿ ನಿಷೇಧಾಜ್ಞೆ ಹೇರಿರುವುದನ್ನು ಒಪ್ಪುವುದಿಲ್ಲ. ಸರ್ಕಾರ ಯಾಕೆ ಹೀಗೆ ಮಾಡಿತೋ ಗೊತ್ತಿಲ್ಲ ನಾವು ಎಲ್ಲದಕ್ಕೂ ರೆಡಿ ಇದ್ದವು. ನಿಷೇಧಾಜ್ಞೆ ಹಿಂಪಡೆಯುವಂತೆ ಡಿಸಿಗೆ ಮನವಿ ಮಾಡುತ್ತೇವೆ. ಸರ್ಕಾರ ನಮ್ಮದೆ ಇದೆ. ಹೀಗಾಗಿ ಸಿಎಂ ಬಳಿ ಮಾತನಾಡುತ್ತೇವೆ. ಕೊಡಗಿನಲ್ಲೂ ನಮಗೆ ಅಪಾರ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಸಿದ್ದು ಕಾಂಗ್ರೆಸ್ ಬಗ್ಗೆ ಜನತೆಗೆ ಆಕ್ರೋಶವಿದೆ. ಕಾಂಗ್ರೆಸ್ ನವರು ಜನರನ್ನು ಹೊರಗಡೆಯಿಂದ ಕರೆಸಬೇಕು. ಆದರೆ ಕೊಡಗಿನಲ್ಲೇ ನಮಗೆ ಜನರಿದ್ದಾರೆ. ನಿಷೇಧಾಜ್ಞೆ ಹಿಂಪಡೆಯದಿದ್ದರೇ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.