ಮೈಸೂರು: ತಂತಜ್ಞಾನದ ಅಳವಡಿಕೆಯಿಂದ ನಶಿಸಿ ಹೋಗಿರುವ ಹಲವಾರು ಸಣ್ಣ ಮತ್ತು ಗುಡಿ ಕೈಗಾರಿಗಳು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅವಕಾಶ ಕಲ್ಪಿಸಲು ಮುಂದಾಗಿದೆ. ಇದನ್ನು ಉದ್ಯಮಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೂಟಗಳ್ಳಿಯ ನಗರ ಸಭೆಯ ಪೌರಾಯುಕ್ತರಾದ ಬಿ.ಎನ್.ಚಂದ್ರಶೇಖರ್ ಮನವಿ ಮಾಡಿದರು.
ಇಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಎಂ.ಎಸ್.ಎo.ಇ ಸೌಲಭ್ಯ ಕಛೇರಿ, ಭಾರತ ಸರ್ಕಾರ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿದ್ದಿ), ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ಬಿ.ಟಿ.ಪಿ.ಸಿ) ಮತ್ತು ಕಾಸಿಯಾ ಸಹಯೋಗದಲ್ಲಿ ನೀಲಗಿರಿ ರಸ್ತೆಯಲ್ಲಿರುವ ಹೋಟೆಲ್ ದಿ ಪ್ರೆಸಿಡೆಂಟ್ ನಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮ (ಎಂಎಸ್‌ಎಂಇ)ಗಳ ಕ್ಲಸ್ಟರ್ ಔಟ್‌ರೀಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಗುಡಿ ಕೈಗಾರಿಗಳನ್ನು ನಂಬಿ ಜೀವನ ನಡೆಸುತ್ತಿದ್ದರು. ಆದರೆ, ತಂತ್ರಜ್ಞಾನ ಜಗತ್ತೀಕರಣ ನೀತಿಗಳು, ದೊಡ್ಡ ಕೈಗಾರಿಕೆಗಳ ಸೃಷ್ಟಿಯಾದ ಕಾರಣ ನಶಿಸಿ ಹೋದವು. ಈಗ ಮತ್ತೆ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಲು ಸಾಲ ಹಾಗೂ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲು ಯೋಜನೆ ರೂಪಿಸಿದೆ. ಇದೊಂದು ಮಹತ್ವವಾದ ಯೋಜನೆಯಾಗಿದೆ ಎಂದು ಹೇಳಿದರು.
ಎಂಎಸ್‌ಎಂಇ ಯೋಜನೆಯ ಜಂಟಿ ನಿರ್ದೇಶಕರಾದ ಶಿವಕುಮಾರ್ ಅವರು ಮಾತನಾಡಿ, ಎಂಎಸ್‌ಎಂಇ ಯೋಜನೆಯ ಸೌಲಭ್ಯ ಸಮೃದ್ಧವಾಗಿದೆ. ಆದರೆ, ಅದರ ಬಳಕೆ ಮಾಡಿಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ. ಏಕೆಂದರೆ ಯೋಜನೆಯ ಕುರಿತು ಜನಸಾಮಾನ್ಯರಿಗೆ ಹೆಚ್ಚು ತಿಳಿದಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಹೆಚ್ಚಿನ ಜಾಗೃತಿ ಮೂಡಿಸಿ ಯೋಜನೆ ಯಶಸ್ವಿಗೊಳಿಸಬೇಕು ಎಂದರು.
ಕ್ಲಸ್ಟರ್ ಔಟ್‌ರೀಚ್ ಕಾರ್ಯಾಗಾರದ ಜೊತೆಗೆ ಮುಂದಿನ ದಿನಗಳಲ್ಲಿ ಹೊಸ ಕಾರ್ಯಕ್ರಮವನ್ನು ರೂಪಿಸಿ ಯೋಜನೆಯ ಸದುಪಯೋಗಕ್ಕೆ ಉದ್ಯಮಿಗಳನ್ನು ಕರೆ ತರುತ್ತೇವೆ ಎಂದರು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ.ಶಿವಲಿಂಗಯ್ಯ ಮಾತನಾಡಿ, ಸೂಕ್ಷ್ಮ ಮತ್ತು ಸಣ್ಣ, ಮದ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಯೋಜನೆಯನ್ನು ಮೈಸೂರಿನಲ್ಲಿ ಚಾಲನೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಗುಡಿ ಕೈಗಾರಿಗಳು ಸರ್ಕಾರದ ಯೋಜನೆಗಳು ತಲುಪಿಸಬೇಕು ಎಂಬ ಉದ್ದೇಶದಿಂದ ಕ್ಲಸ್ಟರ್ ಔಟ್‌ರೀಚ್ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ಅವರು ಕಾಸಿಯಾದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಸಿಯ ಅಧ್ಯಕ್ಷರಾದ ಎಂ.ಜಿ ರಾಜಗೋಪಾಲ್ ಮಾತನಾಡಿ ಇಂದು ಮೈಸೂರಿನಲ್ಲಿ ಪ್ರಥಮವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿನ ಗುಡಿ ಕೈಗಾರಿಗಳು ಸರ್ಕಾರದ ಯೋಜನೆಗಳು ತಲುಪಿಸಬೇಕು ಎಂಬ ಉದ್ದೇಶದಿಂದ ಉಳಿದ ಎಲ್ಲಾ ಜಿಲ್ಲೆಯಲ್ಲೂ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೌಲಭ್ಯ ಕಚೇರಿಯ ಎಂ.ಎಸ್.ಎಂ.ಇ ನ ಜಂಟಿ ನಿರ್ದೇಶಕರು ಮತ್ತು ಹೆಚ್ ಓ ಡಾ. ಕೆ ಸಾಕ್ರೆಟಿಸ್, ಸಿಡ್ಬಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಆಲ್ಬರ್ಟ್ ಜೆರ್ಮಿ, ಉಪಾಧ್ಯಕ್ಷರಾದ ಗಣೇಶ್ ರಾವ್ ಬಿ.ಆರ್, ಗೌರವ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಎನ್ ಸಾಗರ್, ನಗರ ಜಂಟಿ ಕಾರ್ಯದರ್ಶಿಗಳು ಜೆ ಎಸ್ ಬಾಬು, ಗ್ರಾಮೀಣ ಜಂಟಿ ಕಾರ್ಯದರ್ಶಿಗಳು ಸತೀಶ್ ಎನ್, ಖಜಾಂಚಿಗಳಾದ ಮಂಜುನಾಥ್ ಹೆಚ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.