ಬಿಹಾರ : ಮಗನೋರ್ವ ತನ್ನ ತಂದೆಯನ್ನು ಗುಂಡು ಹಾರಿಸಿ ಕೊಂದ ಘಟನೆ ಬಿಹಾರದ ಪೂರ್ಣಿಯಾದ ಧಮದಾಹ ಪೊಲೀಸ್ ಠಾಣಾ ವ್ಯಾಪ್ತಿಯ ವಿಷನ್‌ಪುರ ಪಂಚಾಯತ್‌ನ ಕವೈಯಲ್‌ಗಾಂವ್‌ನಲ್ಲಿ ನಡೆದಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದಾರೆ.
ಮಾಹಿತಿ ಪ್ರಕಾರ ಮೃತ ವ್ಯಕ್ತಿಯಲ್ಲಿ ಅರವಿಂದ್ ಮಂಡಲ್ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರವಿಂದ್ ಮಂಡಲ್ ತನ್ನ ಮನೆಯಿಂದ ಭವಾನಿಪುರಕ್ಕೆ ತೆರಳಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅರವಿಂದ್ ಮಂಡಲ್ ಅವರನ್ನು ತಡೆದು, 6 ಗುಂಡುಗಳನ್ನು ಹಾರಿಸಿದ್ದಾರೆ. ಅರವಿಂದ್ ಮಂಡಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮೃತರ ಪತ್ನಿ ಸಾವಿತ್ರಿ ದೇವಿ ತಮ್ಮ ಪತಿಯನ್ನು ಮಗ ರಂಜಿತ್ ಮಂಡಲ್ ಕೊಲೆ ಮಾಡಿದ್ದಾನೆ. ಪತಿಗೆ ಒಟ್ಟು 12 ಎಕರೆ ಜಮೀನಿದ್ದು, ಸ್ವಲ್ಪ ಜಮೀನನ್ನು ಮಗಳಿಗೆ ನೀಡಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಂಜಿತ್ ಆಗಾಗ ತನ್ನ ತಂದೆಯೊಂದಿಗೆ ಜಗಳ ಮಾಡುತ್ತಿದ್ದನು. ಮಗಳಿಗೆ ಜಮೀನು ಕೊಡುವ ವಿಚಾರಕ್ಕೆ ಸಿಟ್ಟಿಗೆದ್ದು, ತಂದೆಯನ್ನು ಮಗ ಕೊಂದಿದ್ದಾನೆ ಎಂದಿದ್ದಾರೆ.
8 ದಿನಗಳ ಹಿಂದೆಯೂ ರಂಜಿತ್ ತಂದೆಯ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಅರವಿಂದ್ ಮಂಡಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಧಮದಾಹ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಇಲ್ಲಿ ಮೃತನ ಪತ್ನಿಯ ಖಚಿತ ಹೇಳಿಕೆ ಮೇರೆಗೆ ಮಗ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.