ಮನೆ ಅಪರಾಧ ನಕಲಿ ಮಾಲೀಕನ ಸೃಷ್ಟಿಸಿ ನಿವೇಶನ ವಂಚನೆ: ದೂರು ದಾಖಲು

ನಕಲಿ ಮಾಲೀಕನ ಸೃಷ್ಟಿಸಿ ನಿವೇಶನ ವಂಚನೆ: ದೂರು ದಾಖಲು

0

ಮೈಸೂರು : ಗೃಹಿಣಿಗೆ ಸೇರಿದ  ನಿವೇಶನವನ್ನು ಅಕ್ರಮವಾಗಿ ರಿಜಿಸ್ಟ್ರೇಷನ್ ಮಾಡಿಕೊಂಡಿರುವ ಪ್ರಕರಣ ದಾಖಲಾಗಿದೆ.         

Join Our Whatsapp Group

ವಿವರ : ಎಸ್ ಪ್ಯಾಟ್ರಿಕ್ ಎಂಬುವರಿಗೆ 1977ರಲ್ಲಿ ಅಂದಿನ ಸಿಐಟಿವಿ(ಹಾಲಿ ಮೂಡಾ) ಕೆಸರೆ  2ನೇ ಹಂತದಲ್ಲಿರುವ 404 ಸಂಖ್ಯೆಯ 60×40 ಅಡಿ ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಿತ್ತು.ಈ ನಿವೇಶನ ಸ್ವಾಧೀನ ಪತ್ರ ಹಾಗೂ ಮಂಜೂರಾತಿ ಪತ್ರ ಪಡೆದಿದ್ದ ಪ್ಯಾಟ್ರಿಕ್ ಅವರಿಗೆ 1978 ರಲ್ಲಿ ಆಗಸ್ಟ್ 18ರಲ್ಲಿ  ಮೈಸೂರು ಮಹಾನಗರ ಪಾಲಿಕೆ ಖಾತೆಯನ್ನು ಸಹ ಮಾಡಿಕೊಟ್ಟಿದ್ದು. ಆರ್. ಎಸ್.ನಾಯ್ಡು ನಗರದ ನಿವಾಸಿ ಗುಲ್ನಾಸ್ ಬೇಗo (61)ಎಂಬುವವರು ಪ್ಯಾಟ್ರಿಕ್ ಅವರಿಂದ 1999 ಫೆಬ್ರವರಿ 2ರಂದು ಈ ನಿವೇಶನವನ್ನು ಖರೀದಿಸಿದ್ದು, ಈ ಸಂಬಂಧ ಮೈಸೂರು ಉತ್ತರ ಉಪ ನೋಂದಣಧಿಕಾರಿಗಳ ಕಚೇರಿಯಲ್ಲಿ ನೋಂದಣಿಯು ಆಗಿದೆ. ಇದರ ಆಧಾರದ ಮೇರೆಗೆ ಮೈಸೂರು ನಗರ ಪಾಲಿಕೆಯಲ್ಲಿ ಗುನ್ನಾಸ್ ಬೇಗಂ ಅವರ ಹೆಸರಿಗೆ ಖಾತೆ ವರ್ಗಾವಣೆಯಾಗಿದ್ದು, ಈವರೆಗಿನ ಅವರೇ ಕಂದಾಯವನ್ನು ಪಾವತಿಸುತ್ತಿದ್ದಾರೆ.     

ಈ ನಡುವೆ 2023ರ ಜನವರಿ 28ರಂದು ಕೆಲವರು ನಿವೇಶನವನ್ನು ಸ್ವಚ್ಛ ಮಾಡುತ್ತಿದ್ದುದ್ದನ್ನು ಗಮನಿಸಿದ ಅವರು, ಅನುಮಾನದ ಮೇರೆಗೆ ತಾಲೂಕು ಕಚೇರಿಯಲ್ಲಿ ಇ.ಸಿ ತೆಗೆಸಿ ನೋಡಿದಾಗ ಅದರಲ್ಲಿ ಆಸ್ತಿ ಪ್ಯಾಟ್ರಿಕ್  ಅವರಿಂದ ರೆಹಮತ್  ಉಲ್ಲಾ ಎಂಬುವರ ಹೆಸರಿಗೆ ವರ್ಗಾವಣೆ ಆಗಿರೋದು ಗೊತ್ತಾಗಿದೆ. ನಂತರ ದಾಖಲೆಗಳನ್ನು ಪರಿಶೀಲಿಸಲಾಗಿ ಪ್ಯಾಟ್ರಿಕ್  ಅವರೇ 2020ರ ಜನವರಿ 21ರಂದು ರೆಹಮತ್ ಉಲ್ಲಾ ಆಸ್ತಿಯನ್ನು ಶುದ್ಧ ಕ್ರಮಕ್ಕೆ ಮೈಸೂರು ಪೂರ್ವ ನೋಂದಣ ಅಧಿಕಾರಿಗಳ  ಕಚೇರಿಯಲ್ಲಿ ರಿಜಿಸ್ಟರ್ ಮಾಡಿ ಕೊಟ್ಟಿದ್ದು, ಇದರ ಆಧಾರದ ಮೇರೆಗೆ ರೆಹಮತ್ ಉಲ್ಲಾ ಎಂಬಾತ 2022 ರ ನವೆಂಬರ್ 17ರಂದು ಮೂಡದಿಂದ ಈ ಆಸ್ತಿಗೆ ಟೈಟಲ್ ಡೀಡ್ ಪಡೆದಿರುವುದು ಕಂಡು ಬಂದಿದೆ. ನೋಂದಣಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿ ಆಸ್ತಿಯ ಅಸಲಿ ಮಾಲಿಕ ಪ್ಯಾಟ್ರಿಕ್ ಬದಲಿಗೆ  ನಕಲಿ ವ್ಯಕ್ತಿಯ ಭಾವಚಿತ್ರ ಕಂಡು ಬಂದಿದೆ. ಒಟ್ಟಾರೆ ನಕಲಿ ವ್ಯಕ್ತಿಯನ್ನು ಬಳಸಿಕೊಂಡು ಗುಲ್ನಸ್ ಬೇಗಮ್ ಅವರ ಆಸ್ತಿಯನ್ನು ಕಬಳಿಸಲಾಗಿದೆ. ಈ ಸಂಬಂಧ ಅವರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ನರಸಿಂಹರಾಜ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಿಂದಿನ ಲೇಖನಕಂಪನಿಗೆ ಗ್ರಾಹಕರು ಪಾವತಿಸಿದ 43.69 ಲಕ್ಷ ವಂಚನೆ: ಸೇಲ್ಸ್ ರೆಪ್ರೆಸೆಂಟೇಟಿವ್ ವಿರುದ್ಧ ಪ್ರಕರಣ ದಾಖಲು
ಮುಂದಿನ ಲೇಖನಟಾಟಾ ಎಸ್ ಡಿಕ್ಕಿ: ಪಾದಚಾರಿ ಸಾವು