ಬೆಂಗಳೂರು : ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ಮನೆಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿರುವ ಆಸ್ತಿಯ ಮೌಲ್ಯದ ಮಾಹಿತಿ ಬಹಿರಂಗಗೊಂಡಿದೆ. ಒಟ್ಟು 4 ಮನೆ, 8 ಕೋಟಿ ಮೌಲ್ಯದ 37 ಎಕರೆ ವ್ಯವಸಾಯದ ಜಮೀನು ಪತ್ರಗಳು ಸಿಕ್ಕಿವೆ.

ಅಲ್ಲದೇ 66,500 ರೂಪಾಯಿ ನಗದು, 2.99 ಕೋಟಿ ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, 1 ಕೋಟಿ 29 ಸಾವಿರ ಠೇವಣಿ ಖಾತೆ ಸೇರಿ ಒಟ್ಟು ಆಸ್ತಿ 14.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 12 ರಂದು ಲೋಕಾಯುಕ್ತ ಅಧಿಕಾರಿಗಳು ಸರ್ಫರಾಜ್ ಖಾನ್‌ಗೆ ಸೇರಿರುವ ಒಟ್ಟು 13 ಸ್ಥಳಗಳಲ್ಲಿ ದಾಳಿ ಮಾಡಿದ್ದರು. ಇತ್ತೀಚೆಗಷ್ಟೇ ಸರ್ಫರಾಜ್ ಖಾನ್ ವಿರುದ್ಧ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿತ್ತು.















