ಮೈಸೂರು: ಮೈಸೂರಿನ ವಿಜಯನಗರದ ರಾಯಲ್ ಇಷಾ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ.
ಐವರು ಯುವತಿಯರ ರಕ್ಷಣೆ ಮಾಡಲಾಗಿದ್ದು, ಇಬ್ಬರು ಟ್ರಾಫಿಕರ್ಸ್, ಇಬ್ಬರು ಗಿರಾಕಿಗಳು ಹಾಗೂ ಒಬ್ಬ ಪಿಂಪ್ ಸೇರಿದಂತೆ ೫ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೇಶ್ಯಾವಾಟಿಕೆ ದಂಧೆ ಬಗ್ಗೆ ಒಡನಾಡಿ ಸಂಸ್ಥೆಗೆ ನಾಗರಿಕರು ದೂರು ನೀಡಿದ್ದರು. ವಿಜಯನಗರ ಪೊಲೀಸರ ಜೊತೆ ಒಡನಾಡಿ ಸಂಸ್ಥೆ ಕಾರ್ಯಾಚರಣೆ ನಡೆಸಿದ್ದು, ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.