ಮನೆ ಅಪರಾಧ ಒಡನಾಡಿ ಸಂಸ್ಥೆಯಿಂದ ಅಪ್ರಾಪ್ತ ಬಾಲಕಿ ರಕ್ಷಣೆ: ದಲ್ಲಾಳಿಗಳಿಂದ ಬಾಲಕಿ ಮಾರಾಟ

ಒಡನಾಡಿ ಸಂಸ್ಥೆಯಿಂದ ಅಪ್ರಾಪ್ತ ಬಾಲಕಿ ರಕ್ಷಣೆ: ದಲ್ಲಾಳಿಗಳಿಂದ ಬಾಲಕಿ ಮಾರಾಟ

0


ಮೈಸೂರು: ವಿವಾಹದ ನೆಪದಲ್ಲಿ ಜಿಲ್ಲೆಯ ಗಡಿ ಹಂಚಿನ ಗ್ರಾಮದಲ್ಲಿ ಹಾಗೂ ಸುತ್ತ ಮುತ್ತಲಿನ ಊರುಗಳಲ್ಲಿ ಈ ನಡುವೆ ಅಪ್ರಾಪ್ತ ಹೆಣ್ಣು ಮಕ್ಕಳ ಮಾರಾಟದ ಬಗ್ಗೆ ಹೆಚ್ಚು ವರದಿಯಾಗುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದರಿಂದ ಹಂಚಿನ ಗ್ರಾಮದಲ್ಲಿ ಪ್ರಕರಣವೊಂದು ಮರುಕಳಿಸಿದೆ. ವಿಷಯ ತಿಳಿದ ಒಡನಾಡಿ ಸೇವಾ ಸಂಸ್ಥೆಯ ಕಾರ್ಯಾಚರಣೆಯಿಂದಾಗಿ ಬಾಲಕಿ ರಕ್ಷಿಸಲ್ಪಟ್ಟಿದ್ದಾಳೆ.

Join Our Whatsapp Group


ಮಕ್ಕಳಿಗೆ ಸಂಬಂಧಿಸಿದಂತೆ ಬಹಳಷ್ಟು ಕಾನೂನುಗಳು ಬಲಿಷ್ಠವಾಗಿದ್ದರೂ ಕೂಡ, ಮಕ್ಕಳ ಮೇಲಿನ ಕ್ರೌರ್ಯವೇನು ಕಮ್ಮಿ ಆಗುತ್ತಿಲ್ಲ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣ ಕಾಯ್ದೆ ಅಧಿನಿಯಮ 2012 ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಇದ್ದಾಗಿಯೂ ಮಕ್ಕಳ ಮಾರಾಟ, ಶೋಷಣೆ ಪ್ರಕರಣಗಳು ಸಾಲು ಸಾಲಾಗಿ ವರದಿಯಾಗುತ್ತಲೇ ಇವೆ.


ತನ್ನ ಅಜ್ಜಿಯೊಡನೆ ಬಂದಂತಹ 17 ವರ್ಷದ ಮೊಮ್ಮಗಳು ತನಗಾಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾಳೆ. ಆಕೆ ಎಚ್. ಡಿ.ಕೋಟೆ ತಾಲೂಕಿನ ಗಡಿಯಂಚಿಗೆ ಹೊಂದಿಕೊಂಡಿರುವ ಗ್ರಾಮದ ನಿವಾಸಿ. ಮಗುವಿದ್ದಾಗಲೇ ತಾಯಿಯಿಂದ ದೂರಾಗಿ ತನ್ನ ಅಜ್ಜಿಯೊಡನೆ ವಾಸಿಸುತ್ತಿದ್ದಳು. ಆಕೆ ಬೆಳೆದಂತೆ ಅವರ ಮನೆಯ ಸುತ್ತಮುತ್ತ ವಾಸಿಸುವ ಹಾಗೂ ಕೇರಳದ ದಲ್ಲಾಳಿಗಳ ಜೊತೆ ಸಂಪರ್ಕ ಹೊಂದಿರುವವರು, ಆಕೆಯ ವಿವಾಹದ ಬಗ್ಗೆ ಅಜ್ಜಿಯೊಡನೆ ಪ್ರಸ್ತಾಪಿಸಿದ್ದಾರೆ. ಸ್ಥಿತಿವಂತ ಕೇರಳದವರಿಗೆ ನಿಮ್ಮ ಮೊಮ್ಮಗಳು ಮದುವೆ ಮಾಡಿಕೊಡುತ್ತೇವೆ ಹಾಗೂ ನಿಮಗೆ ಕೈ ತುಂಬಾ ಹಣ ನೀಡುತ್ತೇವೆ ಎಂದು ಅಜ್ಜಿಯ ಹಣದಾಸೆ ತೋರಿಸಿ ಮನವೊಲಿಸಿ ಮದುವೆಯು ನಡೆದೆ ಹೋಗಿದೆ.
ವಿವಾಹಿತ ಬಾಲಕಿಯೊಡನೆ ಆತ ಕೇರಳಕ್ಕೆ ತೆರಳಿದ್ದಾನೆ . ನಂತರ ಆಕೆಗೆ ಆ ಮನೆಯವರು ಚಿತ್ರಹಿಂಸೆಯನ್ನು ನೀಡಿದ್ದಾರೆ. ಆಕೆ ಹೇಳುವಂತೆ ಆತನಿಗಿಂತ 14 ವರ್ಷ ಕಿರಿಯವಳಾದ ನಾನು ಅವನಿಂದ ಲೈಂಗಿಕ ದೌರ್ಜನ ಅನುಭವಿಸಬೇಕಾಯಿತು. ಇದನ್ನೆಲ್ಲ ತಾಳಿಕೊಳ್ಳಲಾರದೆ ಓಡಿ ಹೋಗುವ ಪ್ರಯತ್ನ ಮಾಡಿದೆ. ಭಾಷೆ ಬಾರದೆ ಊರಿನಲ್ಲಿ ಅಲೆದಾಡುತ್ತ ಮತ್ತೆ ಅವನ ಕೈಗೆ ಸಿಕ್ಕಿಹಾಕಿಕೊಂಡು ನರಳುವಂತಾಯಿತು.


ಆತ್ಮಹತ್ಯೆ ಪ್ರಯತ್ನವನ್ನು ಮಾಡಿದೆ, ಯಶಸ್ಸು ಕಾಣಲಿಲ್ಲ ಇದರಿಂದ ಸಿಕ್ಕಿದ್ದು ನೋವು ಹತಾಶೆ ಹಾಗೂ ಹಲ್ಲು ಮುರಿಯುವಂತೆ ಹೊಡೆತ ಆ ಮನೆಯಲ್ಲಿ ಎಲ್ಲರ ಮುಂದೆಯೇ ಸ್ನಾನ ಮಾಡಿಕೊಳ್ಳಬೇಕು. ಇಂತಹ ಹಿಂಸೆಯ ನಡುವೆ ಬದುಕು ದೂಡಿದೆ ಎಂದು ಹೇಳಿದಳು. ನನಗಾಗುತ್ತಿದ್ದ ಕಿರುಕುಳದ ಬಗ್ಗೆ ಅಜ್ಜಿಗೆ ವಿಚಾರ ತಲುಪಿತ್ತು. ಅಜ್ಜಿ ನ್ಯಾಯ ಪಂಚಾಯಿತಿ ಮಾಡುತ್ತಿದ್ದರೆ ವಿನ ನನ್ನನ್ನು ಕರೆದುಕೊಂಡು ಹೋಗುತ್ತಿರಲಿಲ್ಲ.


ಇದಾದ ನಂತರ ಕೆಲವರಿಂದ ಒಡನಾಡಿ ಸೇವಾ ಸಂಸ್ಥೆಗೆ ವಿಚಾರ ಮುಟ್ಟಿತ್ತು ಅವರು ನನ್ನನ್ನು ನರಕದಿಂದ ಬಿಡುಗಡೆ ಮಾಡಿದರು ಕೇರಳದ ಪೊಲೀಸರು ನನ್ನ ನೆರವಿಗೆ ಬಂದರು ಎಂದು ಹೇಳಿದಳು. ಬಾಲಕಿಯನ್ನು ರಕ್ಷಿಸಿದ ಒಡನಾಡಿಗೆ ನಂತರ ಬಹಳಷ್ಟು ವಿಚಾರಗಳ ಬಗ್ಗೆ ಗೊಂದಲ ಉಂಟಾಯಿತು ಈಕೆ ಯಾರು? ಅವರ ತಾಯಿ ಎಲ್ಲಿ? ಅಜ್ಜಿ ಯಾರು? ಯಾವ ಜಾತಿ? ಆಕೆಗೆ ಪರಿಹಾರ ದೊರಕಿಸುವ ಬಗ್ಗೆ ಹೇಗೆ ಎಂದು ಚಿಂತಿಸುವಂತಾಯಿತು. ಕಾರಣ ಈಕೆಯ ಹುಟ್ಟಿದ ಬಗ್ಗೆ ದಾಖಲೆಗಳೆ ಸಮರ್ಪಕವಾಗಿರಲಿಲ್ಲ