ಮೈಸೂರು: ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಕಛೇರಿಯ ಪಿ.ಡಿ.ಓ. ರೂಪೇಶ್ ಹಾಗೂ ಭ್ರಷ್ಟಚಾರ ಹಾಗೂ ಸುಳ್ಳುದಾಖಲೆಗಳನ್ನು ನೀಡಿ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿರುವ ಅಂಬಿಕಾ ಅವರ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಯಿತು.
ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಕಛೇರಿಯ ಪಿ.ಡಿ.ಓ. ರೂಪೇಶ್ ಇವರು ತಮಗೆ ಅಧಿಕಾರ ಇಲ್ಲದಿದ್ದರು ಸರ್ವೆನಂಬರ್ 64/1, ಕ್ಕೆ ಖಾತೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಹಾಗೂ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಸದಸ್ಯರ ಚುನಾವಣೆಯಲ್ಲಿ ಸುಳ್ಳು ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದಿರುವ ಅಂಬಿಕಾ ಇವರು ಪಂಚಾಯಿತಿ ಜಾಗವನ್ನು ಒತ್ತುವರಿ ಮಾಡಿ ಅವರ ಅಧಿಕಾರವನ್ನು ಉಪಯೋಗಿಸಿಕೊಂಡು ಅನುಮತಿ ಪಡೆಯದೆ ಹೊಸದಾಗಿ ಮನೆ ಕಟ್ಟಿ ಗೃಹಪ್ರವೇಶಕ್ಕೆ ರೆಡಿಯಾಗುತ್ತಿದ್ದರೆ.
ಇದರ ಬಗ್ಗೆ ಅಲ್ಲಿನ ಜನರು ಮಾತನಾಡಿದ್ದಾರೆ ಪಿ.ಡಿ.ಓ. ರೂಪೇಶ್ ರವರು ಮುಂದಿನ ದಿನಗಳಲ್ಲಿ ನಿಮಗೆ ತೊಂದರೆ ನೀಡುವುದಾಗಿ ಹೆದರಿಸುತ್ತಿದ್ದಾರೆ. ಇದೆಲ್ಲವೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೈಸೂರು ಇವರಿಗೆ ತಿಳಿದಿದ್ದರೂ ಆಮೀಷಗಳಿಗೆ ಒಳಗಾಗಿ ಸ್ಥಳ ಪರಿಶೀಲನೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಾಲಾಹರಣ ಮಾಡುತ್ತಿದ್ದಾರೆ. ಓಡುವಳಿ ಜಮೀನಿಗೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಖಾತೆ ಮಾಡಿದ್ದರು. ತಹಸೀಲ್ದಾರ್‌ರವರು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸುಮ್ಮನೆ ಕುಳಿತಿದ್ದಾರೆ. ಚಾಮುಂಡಿ ಬೆಟ್ಟ ಕುಸಿಯುತ್ತಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಹೊಸದಾಗಿ ಮನೆ ಕಟ್ಟಿ ಬಾರದೆಂದು ಆದೇಶಿಸಿದ್ದರು ಪಂಚಾಯಿತಿ ಸದಸ್ಯರಾದ ಅಂಬಿಕಾ ಅವರು ಯಾವ ಆದೇಶಗಳಿಗೂ ಬೆಲೆ ನೀಡದೆ ಮನೆ ಕಟ್ಟುತ್ತಿದ್ದಾರೆ.
ಪಂಚಾಯಿತಿ ಜಾಗಗಳನ್ನು ಉಳಿಸಬೇಕಾದ ಪಿ.ಡಿ.ಓ. ರೂಪೇಶ್ ರವರ ನಿವೃತ್ತಿ ಅಂಚಿನಲ್ಲಿದ್ದಾರೆ. ಆದ್ದರಿಂದ ಆಮೀಷಗಳಿಗೆ ಒಳಗಾಗಿ ಹೊಸದಾಗಿ ಯಾರೇ ಮನೆಕಟ್ಟಿದರೂ ಒತ್ತುವರಿ ಮಾಡಿದ್ದರೂ ಯಾವುದನ್ನು ಕೇಳದೆ ಬಿಟ್ಟಿರುವುದರಿಂದ ಇವರ ವಿರುದ್ಧ ಕೂಡಲೇ ಕ್ರಮ ಜರುಗಿಸಿ ಹಾಗೂ ಅಂಬಿಕಾರವರ ಸದಸ್ಯತ್ವವನ್ನು ರದ್ದುಪಡಿಸಿ ಸುಳ್ಳುದಾಖಲೆ ನೀಡಿರುವುದರಿಂದ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.














