ಬೆಂಗಳೂರು: ಜುಲೈ 8ನೇ ತಾರೀಕಿನಂದು 108 ಆ್ಯಂಬುಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿಗಳು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಇದರಿಂದಾಗಿ ಪ್ರತಿಭಟನೆ ನಡೆದಲ್ಲಿ ತುರ್ತು ಚಿಕಿತ್ಸೆ ನೀಡುವ ಆ್ಯಂಬುಲೆನ್ಸ್ ವ್ಯವಸ್ಥೆ ಏಕಾಏಕಿಯಾಗಿ ನಿಂತಲ್ಲಿ ರಾಜ್ಯದಲ್ಲಿ ರೋಗಿಗಳು ಪರದಾಡಬೇಕಾಗುತ್ತದೆ.
ಹೀಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ 108 ಆಂಬ್ಯೂಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕಳೆದ ನಾಲ್ಕು ತಿಂಗಳ ವೇತನ ಹಾಗೂ ಮೂರು ವರ್ಷದ ಆರಿಯರ್ಸ್ ಬಾಕಿ ಇಟ್ಟುಕೊಂಡಿದ್ದು ಎನ್ನಲಾಗಿದೆ. ಹೀಗಾಗಿ ಸಿಬ್ಬಂದಿಗಳು, ರಾಜ್ಯಾದ್ಯಂತ ಸಾಮೂಹಿಕ ರಜೆ ಹಾಕಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಒಟ್ಟು 2 ಸಾವಿರ ಸ್ಟಾಫ್ ನರ್ಸ್, ಆಂಬ್ಯೂಲೆನ್ಸ್ ಚಾಲಕರಿದ್ದು ಆ್ಯಂಬುಲೆನ್ಸ್ ಸೇವೆಯನ್ನು ಖಾಸಗಿ ಸಂಸ್ಥೆಯಾದ ಜಿವಿಕೆ ಟೆಂಡರ್ ಮೂಲಕ ನಡೆಸುತ್ತಿದೆ.