ಮೈಸೂರು: ಪದವಿ ಕಾಲೇಜುಗಳ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಮೈಸೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.
ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಬಳಿ ಎಐಡಿಎಸ್ ಓ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಸೆಮಿಸ್ಟರ್ ನಲ್ಲಿ ಪದವಿ ಕಾಲೇಜುಗಳು ಕೇವಲ 2 ತಿಂಗಳು ನಡೆದಿವೆ. ಚುನಾವಣೆ ಕರ್ತವ್ಯಕ್ಕೆ ಕೆಲ ಕಾಲೇಜುಗಳನ್ನ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಪಾಠಗಳು ಸರಿಯಾಗಿ ನಡೆದಿಲ್ಲ. ಪಠ್ಯಕ್ರಮವು ಲಭ್ಯವಾಗಿಲ್ಲ.
ಭಾನುವಾರವು ಕೂಡ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಕೇವಲ ಒಂದು ವಾರದಲ್ಲಿ ಎಲ್ಲಾ ಪರೀಕ್ಷೆಗಳನ್ನ ಬರೆಯಲು ಸಾಧ್ಯವಾಗಲ್ಲ. ಈಗಾಗಿ ಪರೀಕ್ಷೆಯನ್ನು 15ದಿನಗಳಾದರೂ ಮುಂದೂಡಬೇಕು ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.














