ಮೈಸೂರು: ರಾಜ್ಯ ಸರ್ಕಾರ ತೆಲಂಗಾಣ ಮತ್ತು ಪಂಜಾಬ್ ಮಾದರಿಯಲ್ಲಿ ಬರಗಾಲ ಮತ್ತು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
ಇಂದು ಮೈಸೂರಿನ ಟೆರೇಶನ್ ಕಾಲೇಜ್ ವೃತ್ತದಿಂದ ಜಮಾಣೆಗೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಹಕ್ಕು ಒತ್ತಾಯಗಳನ್ನು ಸಲ್ಲಿಸಿದರು.
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ 6040 ಕೃಷಿಪತ್ತಿನ ಸಹಕಾರ ಸಂಘಗಳ ಸರಿ ಸುಮಾರು 25000 ಕೋಟಿ ರೂಗಳ ಬೆಳೆ ಸಾಲವನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕಳೆದ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್ ಗೆ 150 ರಂತೆ ಸುಮಾರು 950 ಕೋಟಿ ರಾಜ್ಯದಲ್ಲಿ ಬರಬೇಕಾಗಿದೆ ಕಾರ್ಖಾನೆಗಳಿಂದ ಕೂಡಿಸಲಾಗದಿದ್ದರೆ ಸರ್ಕಾರವೇ ಸ್ವಯಂಘೋಷಿತವಾಗಿ ಕೊಡಲಿ ಎಂದರು.
ಸದರಿ ವರ್ಷದ ಹಂಗಾಮು ಕಟಾವು ಮುಗಿಯುತ್ತಿರುವುದರಿಂದ ಎಫ್ ಆರ್ ಪಿಯನ್ನು ಸೇರಿ ರಾಜ್ಯ ಸರ್ಕಾರ ಪ್ರತಿ ಟನ್ನೊಂದಕ್ಕೆ 4000 ದಂತೆ ಧರ ನಿಗದಿ ಮಾಡಬೇಕು ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಳುವರಿಯಲ್ಲಿ ಮೋಸ ತಿಳಿಯಲು ರಚಿಸಿರುವ ತಜ್ಞರ ಸಮಿತಿಗೆ ಸ್ಥಳೀಯ ರೈತರು ಹಾಗೂ ಸದರಿ ಸಂಘದ ಮುಖಂಡರನ್ನು ಸೇರಿಸಿಕೊಳ್ಳಲು ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರವನ್ನು ಅಳವಡಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯು ಮುಖ್ಯಮಂತ್ರಿಗಳ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದರು .ಇಲ್ಲಿ ಮನ ಬಂದಂತೆ ಕಟಾವು ಸಾಗಾಣಿಕೆ ನಿಗದಿ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಗಮನ ಹರಿಸಿ ಉತ್ತರ-ದಕ್ಷಿಣ ಎಂಬ ಭೇದಭಾವವಿಲ್ಲದೆ ರೈತನ ಹೊಲದಲ್ಲಿನ ದರ ಎಂದು ನಿರ್ದೇಶನ ನೀಡಬೇಕು ಹಾಗೂ ಹೆಚ್ಚುವರಿ ವಸೂಲಿ ಮಾಡಿರುವ ಕಟಾವು ಸಾಗಾಣಿಕೆ ಕೂಲಿಯನ್ನು ರೈತರ ಖಾತೆಗೆ ಮರು ಜಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿಯನ್ನು ಪುನರ್ ರಚಿಸಿ ತಕ್ಷಣ ಸಭೆ ಕರೆದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ- ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ(ರಿ).ಸಂಘದ ರಾಜ್ಯಾಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ರವರನ್ನು ವಿಶೇಷ ಆಹ್ವಾನಿತರಾಗಿ ಸೇರಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಕೃಷಿ ಚಟುವಟಿಕೆಗೆ ಸಾಲ ಕೊಟ್ಟಿರುವ ಬ್ಯಾಂಕುಗಳು ಬರಗಾಲದಿಂದ ತತ್ತಸಿದರೂ ಕೂಡ ಸಾಲ ವಸೂಲಾತಿಗೆ ನೋಟಿಸ್ ನೀಡುವುದು ಕಿರುಕುಳ ಕೊಡುತ್ತಿರುವುದು ಗ್ರಾಮೀಣ ಭಾಗದಲ್ಲಿ ಕಂಡುಬರುತ್ತದೆ ತಕ್ಷಣ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ನೂತನ ಕೃಷಿ ಪಂಪ್ ಸೆಟ್ ಮಾಡುವವರಿಗೆ ಹೊಸ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣ ರಾಜ್ಯ ಸರ್ಕಾರ ಮೊದಲು ಇದ್ದಂತಹ ಯಥಾ ಸ್ಥಿತಿಯನ್ನು ಮುಂದುವರಿಸಬೇಕು ಹಾಗೂ ಕೃಷಿ ಪಂಷಟ್ಟುಗಳಿಗೆ ನಿರಂತರವಾಗಿ 10 ಗಂಟೆ ವಿದ್ಯುತ್ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ರೈತರ ಸಭೆಯನ್ನು ಮಾಡಬೇಕು ಒತ್ತಾಯಿಸುತ್ತೇವೆ ಎಂದರು.
ಕಾವೇರಿ ಕಬಿನಿ ನೀರನ್ನು ತಮಿಳುನಾಡಿಗೆ ಹರಿಸಿ ಅಚ್ಚುಕಟ್ಟು ಭಾಗದಲ್ಲಿ ಪ್ರತಿ ಎಕರೆ 25,000 ನಷ್ಟ ಪರಿಹಾರ ಕೊಡಬೇಕು.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ವಸ್ತುಗಳಿಗೆ ಅಡಮಾನ ಸಾಲದಲ್ಲಿ ಸರಳಿಕರಣ ಮಾಡಿ ತಕ್ಷಣ ರೈತನಿಗೆ ಸಾಲ ಸಿಗುವಂತಾಗಬೇಕು. ಕೃಷಿ ಉತ್ಪನ್ನಗಳು ಮತ್ತು ಕೃಷಿ ಬಳಕೆಯ ವಸ್ತುಗಳಿಗೆ ಜಿಎಸ್ಟಿಯನ್ನು ಕಡಿಮೆ ಮಾಡಬೇಕು. ರೈತರಿಗೆ ಉಚಿತ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ರಾಜ್ಯದಲ್ಲಿ ಈರುಳ್ಳಿ ಬೆಲೆ ಸಾಕಷ್ಟು ಖುಷಿ ಇದ್ದು ಕೆಜಿಗೆ ಐದು ರೂಪಾಯಿಗೆ ಬಂದಿದೆ ಆದ್ದರಿಂದ ವಿದೇಶಕ್ಕ ರಫ್ತು ಮಾಡುವುದನ್ನು ನಿಷೇಧವನ್ನು ತೆರಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಹಕ್ಕೊತ್ತಾಯಗಳ ಕುರಿತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳು ತಕ್ಷಣ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಬಣ್ಣಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆ ರೈತ ಮುಖಂಡರ ಸಭೆ ನಡೆಸಲು ಒತ್ತಾಯಿಸುವುದಾಗಿ ರೈತರು ತಿಳಿಸಿದರು.
ಪ್ರತಿಭಟನೆಯಲ್ಲಿ ಹಾಲಿನ ನಾಗರಾಜ್, ಕೆರೆಹುಂಡಿ ರಾಜಣ್ಣ, ಅಲತ್ತೂರು ಹುಂಡಿ ಸಿದ್ದಲಿಂಗಪ್ಪ, ಮಲಿಯೂರು ಹರ್ಷ, ಹಾಡ್ಯ ರವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊಂತಯ್ಯನ ಹುಂಡಿ ಮಹೇಶ್, ರಾಣಿ, ಅಂಬಳೆ ಮಹದೇವಸ್ವಾಮಿ, ಮುದ್ದಾಹಳ್ಳಿ ಚಿಕ್ಕ ಸ್ವಾಮಿ, ದೇವೇಂದ್ರ ಕುಮಾರ್ ಆರಾಧ್ಯ, ಕೋಣನೂರು ವಿಶ್ವನಾಥ್, ಕಸವನಹಳ್ಳಿ ಮಂಜೇಶ್, ದೇವನೂರು ನಾಗೇಂದ್ರ, ಮಹದೇವ ನಾಯ್ಕ, ಊಡಿಗಾಲ ಮಂಜುನಾಥ್, ಮಲಿಯೂರ್ ಬಸವರಾಜಪ್ಪ, ಅರಳಿಕಟ್ಟೆ ಕುಮಾರ್, ಶ್ರೀಕಂಠ, ಹತ್ತುವಾಳು ರಾಜಣ್ಣ, ಹಂಡುವಿನಹಳ್ಳಿ ರವಿ ಉಪಸ್ಥಿತರಿದ್ದರು.