ಮೈಸೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿ ಡಿ. ದೇವರಾಜ್ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಮಹಾನಗರಪಾಲಿಕೆ ಮುಂಭಾಗ ಇರುವ ಆಂಚೆ ಪಟ್ಟಿಗೆ ಎದುರು ಮುಖ್ಯಮಂತ್ರಿ ಗಳಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ರವಾನೆ ಮಾಡುವ ಮೂಲಕ ಪತ್ರ ಚಳುವಳಿ ಮಾಡಲಾಯಿತು.
2021ರಲ್ಲಿ ಅಧಿಸೂಚನೆಯನ್ನು ಹೊರಡಿಸಿ 2022ರಲ್ಲಿ ಪರೀಕ್ಷೆಯು ನಡೆದಿದ್ದು, ಹಗರಣಗಳ ಸದ್ದಿನ ಪರಿಣಾಮ ತನಿಖೆಯು (ಸಿ.ಸಿ.ಬಿ) ಸಹ ನಡೆದಿದೆ. ಇದೀಗ ಕಲ್ಯಾಣ ಕರ್ನಾಟಕ ಮತ್ತು ಮಿಕ್ಕುಳಿದ ವೃಂದದ ಮೀಸಲಾತಿಯ ಬಿಕ್ಕಟ್ಟಿನ ಪರಿಣಾಮವಾಗಿ ಪ್ರಕರಣವು ನ್ಯಾಯಾಲಯದ ಅಂಗಳದಲ್ಲಿದೆ. ಹೀಗಾಗಿ ನೇಮಕಾತಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್, ಮಾಜಿ ಮೇಯರ್ ಪುರುಷೋತ್ತಮ್, ದ್ಯಾವಪ್ಪ ನಾಯ್ಕ, ಮಾಜಿ ನಗರಪಾಲಿಕೆ ಸದಸ್ಯರಾದ ಮಂಜುನಾಥ್, ಅರಸು ಮಂಡಳಿ ಮಾಜಿ ಅಧ್ಯಕ್ಷ ಹೆಚ್. ಡಿ. ನಂಜರಾಜೆ ಅರಸ್. ಸಮಿತಿಯ ಸದಸ್ಯರುಗಳಾದ ರಧಿವುಲ್ಲಾಖಾನ್, ಪವನ್ ಸಿದ್ದರಾಮ, ಮತ್ತಿತರು ಉಪಸ್ಥಿತರಿದ್ದರು.